ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಂಟು ಮಂದಿ ಹಂತಕರಿಗೆ ರಾಷ್ಟ್ರಪತಿ ಪಾಟೀಲ್ ಜೀವದಾನ (Indian President | Pratibha Patil | life imprisonment | mercy petition)
Bookmark and Share Feedback Print
 
ಎರಡು ಪ್ರತ್ಯೇಕ ಹತ್ಯಾ ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆಗಾಗಿ ಕಾಯುತ್ತಿದ್ದ ಎಂಟು ಮಂದಿಯ ಹಣೆಬರಹವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಬದಲಾಯಿಸಿದ್ದಾರೆ. ಅವರ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸುವ ಮೂಲಕ ಜೀವದಾನ ನೀಡಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಶಿಫಾರಸಿನಂತೆ ಈ ಕ್ರಮಕ್ಕೆ ರಾಷ್ಟ್ರಪತಿ ಮುಂದಾಗಿದ್ದಾರೆ. ಇದರೊಂದಿಗೆ ರಾಷ್ಟ್ರಪತಿಯವರ ಬಳಿ ಇನ್ನು 24 ಕ್ಷಮಾದಾನ ಅರ್ಜಿಗಳು ಉಳಿದುಕೊಂತಾಗಿದೆ. ಅವುಗಳಲ್ಲಿ 21 ರಾಷ್ಟ್ರಪತಿಯವರ ಬಳಿಯಿದ್ದರೆ, ಉಳಿದ ಮೂರು ಅರ್ಜಿಗಳು ಗೃಹ ಸಚಿವಾಲಯದಲ್ಲಿದೆ.

ಜೂನ್ 15ರಂದು ರಾಷ್ಟ್ರಪತಿಯವರು ಆದೇಶ ಹೊರಡಿಸಿರುವ ಮೊದಲ ಪ್ರಕರಣ 10ರ ಹರೆಯದ ಬಾಲಕ ಸೇರಿದಂತೆ ಐವರ ಹತ್ಯೆಗೆ ಸಂಬಂಧಿಸಿದ್ದು. ಈ ಪ್ರಕರಣದಲ್ಲಿ ಉತ್ತರ ಪ್ರದೇಶದ ಶ್ಯಾಮ್ ಮನೋಹರ್, ಶಿಯೋ ರಾಮ್, ಪ್ರಕಾಶ್, ಸುರೇಶ್, ರವೀಂದರ್ ಮತ್ತು ಹರೀಶ್‌ಗೆ 1997ರ ಅಕ್ಟೋಬರ್ ತಿಂಗಳಲ್ಲಿ ಮರಣ ದಂಡನೆ ಶಿಕ್ಷೆ ನೀಡಲಾಗಿತ್ತು.

ಇವರಲ್ಲೊಬ್ಬನ ಸಹೋದರನ ಹತ್ಯೆಗಾಗಿ ಐವರನ್ನು ಕೊಂದು ಹಾಕಲಾಗಿತ್ತು. ಹೈಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಯನ್ನು 1997ರಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ನಂತರ ದೋಷಿಗಳು ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದರು.

ಮತ್ತೊಂದು ಪ್ರಕರಣವೂ ಉತ್ತರ ಪ್ರದೇಶಕ್ಕೆ ಸಂಬಂಧಪಟ್ಟದ್ದು. ಒಂದೇ ಕುಟುಂಬದ ಐವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಕುಮಾರ್ ಮತ್ತು ನರೇಂದ್ರ ಯಾದವ್ ಕ್ಷಮಾದಾನ ಪಡೆದುಕೊಂಡವರು. ವಿಚಾರಣಾ ನ್ಯಾಯಾಲಯವು 1995ರಲ್ಲಿ ಮರಣ ದಂಡನೆ ತೀರ್ಪು ನೀಡಿದ್ದರೂ, ಅದನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಆದರೆ 1999ರಲ್ಲಿ ವ್ಯತಿರಿಕ್ತ ತೀರ್ಪು ನೀಡಿ, ಗಲ್ಲು ಶಿಕ್ಷೆಗೆ ಆದೇಶಿಸಿತ್ತು.

ಇವರಿಬ್ಬರ ಕುಟುಂಬಿಕರು 1999ರಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಅದರಂತೆ ಧರ್ಮೇಂದ್ರ ಮತ್ತು ನರೇಂದ್ರರಿಗೆ ರಾಷ್ಟ್ರಪತಿ ಜೀವದಾನ ನೀಡಿದ್ದು, ಶಿಕ್ಷೆಯನ್ನು ಜೀವಾವಧಿಗೆ ಇಳಿಕೆ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ