ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಗಾಂಧಿ ಮೊಬೈಲ್‌ಗೆ ಏರ್‌ಪೋರ್ಟ್ ಸಿಬ್ಬಂದಿ 'ಕೈ' (Rahul Gandhi | Congress | Delhi Airport | India)
Bookmark and Share Feedback Print
 
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರ ಮೊಬೈಲ್ ಕಳವಾಗಿದೆ. ಅಚ್ಚರಿಯೆಂದರೆ ಕಳ್ಳತನವಾಗಿರುವುದು ದೆಹಲಿ ವಿಮಾನ ನಿಲ್ದಾಣದಲ್ಲಿ ಮತ್ತು ಕಳ್ಳತನ ಮಾಡಿರುವುದು ವಿಮಾನ ನಿಲ್ದಾಣಗಳ ಸಿಬ್ಬಂದಿಗಳೇ ಎಂಬುದು.

ಲಂಡನ್‌ನಿಂದ ಕಳೆದ ವಾರವಷ್ಟೇ ರಾಹುಲ್ ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ವಾಪಸ್ಸಾಗಿದ್ದರು. ಈ ಸಂದರ್ಭದಲ್ಲಿ ಅವರ ಬ್ಯಾಗಿನಲ್ಲಿದ್ದ ಮೊಬೈಲ್ ಕಳವಾಗಿತ್ತು. ಇದು ಅವರ ಗಮನಕ್ಕೆ ಬಂದದ್ದು ತಡವಾಗಿ.

ಮನೆಗೆ ಹೋದ ನಂತರ ರಾಹುಲ್ ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದರು. ಇಲ್ಲಿ ಮಹತ್ವದ ಸುಳಿವು ನೀಡಿದ್ದು ಸಿಸಿಟಿವಿ ತುಣುಕುಗಳು.

ಮೊಬೈಲ್ ಕದ್ದಿರುವುದು ವಿಮಾನ ನಿಲ್ದಾಣದಲ್ಲಿ ಬ್ಯಾಗುಗಳನ್ನು ಪರಿಶೀಲನೆ ನಡೆಸುವ ಸಿಬ್ಬಂದಿಗಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಇದೇ ಸಂಬಂಧ ಇಬ್ಬರು ಶಂಕಿತರನ್ನು ಪ್ರಶ್ನಿಸಿದಾಗ, ಅವರಲ್ಲೊಬ್ಬ ತಾನು ಮೊಬೈಲ್ ಕದ್ದಿರುವುದನ್ನು ಒಪ್ಪಿಕೊಂಡು ವಾಪಸ್ ಮಾಡಿದ್ದ.

ಇದೀಗ ಮೊಬೈಲನ್ನು ರಾಹುಲ್ ಗಾಂಧಿಗೆ ಮರಳಿಸಲಾಗಿದೆ. ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ. ಆದರೆ ಈ ಮೊಬೈಲ್‌ನಲ್ಲಿ ರಾಹುಲ್ ಗಾಂಧಿಯವರ ಖಾಸಗಿ ಮತ್ತು ಅಧಿಕೃತ ನಂಬರುಗಳು ಸೇರಿದಂತೆ ಇತರ ಅಮೂಲ್ಯ ದಾಖಲೆಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ಹೊತ್ತಿಗೆ ಲಂಡನ್‌ನಿಂದ ರಾಹುಲ್ ಗಾಂಧಿ ಯಾವ ವಿಮಾನದಲ್ಲಿ, ಯಾವಾಗ ಬಂದದ್ದು ಎಂಬುದನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಅವರು ನೀಡುತ್ತಿರುವ ಕಾರಣ ಸುರಕ್ಷತೆ. ಆದರೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದೆಂಬ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ