ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಾಯುಪಡೆ ವಿಮಾನದಲ್ಲಿ ಬಿಟ್ಟಿ ತಿರುಗಿದ್ದ ದೇವೇಗೌಡರು! (Indian Air Force | Delhi High Court | H D Deve Gowda | JDS)
Bookmark and Share Feedback Print
 
ತನ್ನ ವೈಯಕ್ತಿಕ ಕಾರ್ಯಗಳಿಗಾಗಿ ಸರಕಾರಿ ವಿಮಾನಗಳನ್ನು ಬಳಸಿಕೊಂಡಿದ್ದ ಮಾಜಿ ಪ್ರದಾನಿ ಎಚ್.ಡಿ. ದೇವೇಗೌಡರು ಭಾರತೀಯ ವಾಯು ಸೇನೆಗೆ 54 ಲಕ್ಷ ರೂಪಾಯಿಗಳನ್ನು ಬಾಕಿ ಇರಿಸಿಕೊಂಡಿದ್ದಾರೆ ಎಂದು ದೆಹಲಿ ಹೈಕೋರ್ಟ್‌ಗೆ ದೂರು ನೀಡಲಾಗಿದೆ.

1996-97ರ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿದ್ದ ಗೌಡರು, ಅಧಿಕೃತ ಕಾರ್ಯಕ್ರಮಗಳಲ್ಲದೆ ತನ್ನ ವೈಯಕ್ತಿಕ ಕಾರ್ಯಗಳಿಗಾಗಿ ಭಾರತೀಯ ವಾಯು ಸೇನೆಗೆ ಸೇರಿದ ವಿಮಾನಗಳನ್ನು ಬಳಸಿಕೊಂಡಿದ್ದರು. ಬಳಿಕ ಆ ಹಣವನ್ನು ವಾಪ್ ಮಾಡಲು ಸೂಚಿಸಿದರೂ ಅವರು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರಿಂದ ವಾಯು ಪಡೆಯು ಇದೀಗ ಅನಿವಾರ್ಯವಾಗಿ ಕೋರ್ಟ್ ಮೆಟ್ಟಿಲೇರಿದೆ.

ತಾವು ಪ್ರಧಾನ ಮಂತ್ರಿ ಮತ್ತು ಸಂಪುಟ ಸಚಿವರಾಗಿದ್ದ ಸಂದರ್ಭದಲ್ಲಿ ಅನಧಿಕೃತ ಕಾರ್ಯಕ್ರಮಗಳಿಗಾಗಿ ಭಾರತೀಯ ವಾಯು ಪಡೆಯ ವಿಮಾನಗಳನ್ನು ಚಂದ್ರಶೇಖರ್, ಪಿ.ವಿ. ನರಸಿಂಹ ರಾವ್, ಎಚ್.ಡಿ. ದೇವೇಗೌಡ ಮತ್ತು ವಿ.ಸಿ. ಶುಕ್ಲಾರವರು ಬಳಸಿಕೊಂಡಿದ್ದರು ಎಂದು 2008ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಮೂಲಕ ವಾಯುಪಡೆ ತಿಳಿಸಿತ್ತು.

ಮಾಜಿ ಪ್ರಧಾನಿ ಚಂದ್ರಶೇಖರ್ 5.91 ಕೋಟಿ, ಜೆಡಿಎಸ್ ವರಿಷ್ಠ ದೇವೇಗೌಡ 54.61 ಲಕ್ಷ ಹಾಗೂ ಮಾಜಿ ಕೇಂದ್ರ ಸಚಿವ ವಿ.ಸಿ. ಶುಕ್ಲಾ 4.60 ಲಕ್ಷ ರೂಪಾಯಿಗಳನ್ನು ಭಾರತೀಯ ವಾಯು ಸೇನೆಗೆ ಪಾವತಿಸಬೇಕಿದೆ. ಈ ಮೊತ್ತವನ್ನು ಸಂಬಂಧಪಟ್ಟ ರಾಜಕೀಯ ಪಕ್ಷಗಳು ಪಾವತಿಸಬೇಕು ಎಂದು ವಾಯು ಪಡೆ ಮೂಲಗಳು ಹೇಳಿವೆ.

ಮಾಜಿ ಪ್ರಧಾನಿ ದೇವೇಗೌಡರು ತಾವು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಭಾರತೀಯ ವಾಯು ಪಡೆಯ ವಿಮಾನವನ್ನು ತನ್ನ ಅನಧಿಕೃತ ಕಾರ್ಯಕ್ರಮಗಳಿಗಾಗಿ ಬಳಸಿದ್ದರ ವೆಚ್ಚವನ್ನು ಪಾವತಿಸಿಲ್ಲ ಎಂದು ಈ ಸಂಬಂಧ ದೆಹಲಿ ಹೈಕೋರ್ಟ್‌ಗೆ ದೂರು ನೀಡಲಾಗಿದ್ದು, ಇದು ರಿಜಿಸ್ಟ್ರಾರ್ ಎದುರು ಇತ್ಯರ್ಥವಾಗದೆ ಬಾಕಿ ಉಳಿದಿದೆ. ಆರಂಭಿಕ ಹಂತದಲ್ಲಷ್ಟೇ ಪ್ರಕರಣವಿದೆ. 2010ರ ಜುಲೇ 1ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ಇತ್ತೀಚಿನ ಮಾಹಿತಿ ಹಕ್ಕು ಕಾಯ್ದೆಯ ಮಾಹಿತಿಯಲ್ಲಿ ವಾಯು ಪಡೆ ವಿವರಣೆ ನೀಡಿದೆ.

ರಾಜಕೀಯ ನಾಯಕರು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ವಸೂಲಿ ಮಾಡಲು ರಕ್ಷಣಾ ಸಚಿವಾಲಯವು ಸಿವಿಲ್ ಪ್ರಕರಣ ಸೇರಿದಂತೆ ಹಲವು ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳಿಗೆ ಮುಂದಾಗಿದೆ ಎಂದು ಸೇನೆ ತಿಳಿಸಿದೆ.

ಅದೇ ಹೊತ್ತಿಗೆ ಚಂದ್ರಶೇಖರ್ ವಿರುದ್ಧ 2001ರಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣ ಅವರು ಸಾವನ್ನಪ್ಪಿದ ನಂತರ ವಜಾಗೊಂಡಿತ್ತು ಎಂದೂ ಸೇನೆ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ