ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ಸುರಂಗ ಮಾರ್ಗ! (Tunnel | PM's house to airport | prime minister | Safdarjung airport)
Bookmark and Share Feedback Print
 
ಹೆಚ್ಚುತ್ತಿರುವ ವಾಹನ ದಟ್ಟಣೆ ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಭಾರೀ ಅಡ್ಡಿಯಾಗುತ್ತಿರುವುದನ್ನು ಮನಗಂಡಿರುವ ಕೇಂದ್ರ ಸರಕಾರ ಇದೀಗ ಪ್ರಧಾನ ಮಂತ್ರಿಯವರ ನಿವಾಸದಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಸುರಂಗ ಮಾರ್ಗವನ್ನು ನಿರ್ಮಿಸಲು ಮುಂದಾಗಿದೆ ಎಂದು ವರದಿಗಳು ಹೇಳಿವೆ.

ಪ್ರಧಾನಿಯವರ ನಂ.7, ರೇಸ್ ಕೋರ್ಸ್ ರಸ್ತೆಯಿಂದ ಹತ್ತಿರದ ಸಫ್ದರ್ಜಂಗ್ ವಿಮಾನ ನಿಲ್ದಾಣಕ್ಕೆ ಈ ಸುರಂಗ ಮಾರ್ಗವನ್ನು ತೋಡಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಪ್ರಧಾನಿಯವರು ವಿಮಾನ ನಿಲ್ದಾಣಕ್ಕೆ ತೆರಳಲು ಹೆಲಿಕಾಪ್ಟರ್ ಬಳಸುತ್ತಿದ್ದು, ಇದನ್ನು ತಪ್ಪಿಸಲು ಸುರಂಗ ಮಾರ್ಗ ನಿರ್ಮಾಣ ಮಾಡಲಾಗುವ ನಿರ್ಧಾರಕ್ಕೆ ಬರಲಾಗಿದೆ.

ದೆಹಲಿಯ ಇತರೆಡೆಗೆ ಮತ್ತು ವಿಮಾನವೇರಲು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕಾದಾಗ ಪ್ರಧಾನಿಯವರು ಆಗಾಗ ಹೆಲಿಕಾಪ್ಟರ್ ಬಳಸುತ್ತಾರೆ. ಅವರು ಕೇಮಾಲ್ ಅತಾತುರ್ಕ್ ರೋಡ್, ಸಫ್ದರ್ಜಂಗ್ ರೋಡ್ ಮತ್ತು ಅರಬಿಂದೋ ಮಾರ್ಗ್ ಮೂಲಕ ಪ್ರಯಾಣಿಸುವಾಗ ವಾಹನ ಸಂಚಾರವನ್ನು ತಡೆ ಹಿಡಿಯಲಾಗುತ್ತದೆ. ಇದರಿಂದ ಪ್ರಸಕ್ತ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಈ ಸುರಂಗವನ್ನು ತುರ್ತು ನಿರ್ಗಮನಕ್ಕಾಗಿ ಮಾತ್ರವಲ್ಲದೆ ಪ್ರಧಾನಿ ಸಫ್ದರ್ಜಂಗ್‌ಗೆ ಹೋಗಬೇಕಾದಾಗ ಸಾರ್ವಜನಿಕರಿಗೆ ಎದುರಾಗುವ ತೊಂದರೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಳಸಲಾಗುತ್ತದೆ. ಈ ಯೋಜನೆಯನ್ನು ಸಂಪೂರ್ಣವಾಗಿ ಪ್ರಧಾನ ಮಂತ್ರಿಯವರ ಭದ್ರತಾ ಘಟಕವು ರೂಪಿಸಿದ್ದು, ಜಾರಿಗೆ ತರಲಿದೆ.

ಪ್ರಧಾನಿ ಅಥವಾ ರಾಷ್ಟ್ರಪತಿಗಳಂತಹ ಗಣ್ಯ ವ್ಯಕ್ತಿಗಳು ವಿಮಾನ ಪ್ರಯಾಣ ಮಾಡಬೇಕಾದ ಸಂದರ್ಭದಲ್ಲಿ ಅಥವಾ ನಿಲ್ದಾಣದಿಂದ ವಾಪಸ್ ಬರುವ ಹೊತ್ತಿನಲ್ಲಿ ವಿಮಾನ ಯಾನ ಸಂಸ್ಥೆಗಳು ಮತ್ತು ಇತರ ವಿಮಾನ ಯಾನಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸುರಕ್ಷತಾ ನಿರ್ಬಂಧಗಳನ್ನು ಹೇರಲಾಗುತ್ತಿರುವುದರಿಂದ ರಸ್ತೆ ಮಾರ್ಗ ಬದಲಾವಣೆ ಮುಂತಾದ ಕ್ರಮಗಳಿಗೆ ಮುಂದಾಗುವುದರಿಂದ ವಿಳಂಬತೆಯೂ ಎದುರಾಗುತ್ತಿದೆ. ಇದನ್ನು ತಪ್ಪಿಸಲು ಸರಕಾರ ಸುರಂಗ ನಿರ್ಮಾಣಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ