ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಲಾಖ್‌ಗೆ ಲಂಚ; ಮೌಲ್ವಿಗಳಿಗೆ ಥಳಿಸಿದ ಮಹಿಳೆಯರು (Muslim clerics | talaq | Mumtaz alias Hina | Nishat Fatima)
Bookmark and Share Feedback Print
 
ಶರಿಯತ್ ಕಾನೂನಿನ ಪ್ರಕಾರ ತಲಾಖ್ ಪ್ರಕ್ರಿಯೆಗಳನ್ನು ನಿರ್ವಹಿಸದೆ ಲಂಚ ತೆಗೆದುಕೊಂಡು ವಂಚಿಸಿದ ಮೂವರು ಮೌಲ್ವಿಗಳಿಗೆ ಉತ್ತರ ಪ್ರದೇಶದ ಮೂವರು ವಿವಾಹಿತ ಮುಸ್ಲಿಂ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಹೇಳಿದ್ದಾರೆ.

ಉತ್ತರ ಪ್ರದೇಶದ ಬಡೌನ್ ಜಿಲ್ಲೆಯ ವಜಿರಿಗಂಜ್ ಪ್ರದೇಶದ 'ಸುಲ್ತಾನ್ ಇ ಮದರಿ' ಮದ್ರಸಾದಲ್ಲಿ ಈ ಘಟನೆ ನಡೆದಿರುವುದು. ಮಮ್ತಾಜ್ ಆಲಿಯಾಸಾ ಹೀನಾ, ನಿಶಾತ್ ಫಾತಿಮಾ ಮತ್ತು ಆರ್ಷಿ ಎಂಬವರು ಮಂಗಳವಾರ ಮದ್ರಸಾಕ್ಕೆ ನುಗ್ಗಿ ಅಲ್ಲಿದ್ದ ಮೊಹಮ್ಮದ್ ಅಫ್ಜರ್ ಜೈದಿ, ಸಯೀದ್ ಮೂಸಾ ರಿಜ್ವಿ ಮತ್ತು ಮೊಹಮ್ಮದ್ ರಾಜಾ ಸಾಜಿದ್ ಎಂಬ ಮೌಲ್ವಿಗಳಿಗೆ ಮನಬಂದಂತೆ ಥಳಿಸಿದ್ದಾರೆ.

ತಮಗೆ ತಿಳಿಯದಂತೆ ಈ ಮೌಲ್ವಿಗಳು ತಲಾಖ್ ಕೈಂಕರ್ಯಗಳನ್ನು ಪೂರೈಸಿದ್ದಾರೆ. ತಲಾಖ್ ನೀಡುತ್ತಿರುವ ವಿಚಾರ ನಮ್ಮ ಗಮನಕ್ಕೇ ತಂದಿರಲಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ. ಈ ಸಂಬಂಧ ತನಿಖೆಗೆ ಆದೇಶ ನೀಡಲಾಗಿದೆ ಎಂದು ಪೊಲೀಸ್ ವಕ್ತಾರ ಆನಂದ್ ಶ್ರೀವಾತ್ಸವ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಅತ್ತ ಮೌಲ್ವಿಗಳು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಮೂವರು ಮಹಿಳೆಯರು ತಮಗೆ ಹಲ್ಲೆ ನಡೆಸಿದ್ದಲ್ಲದೆ, ಮದ್ರಸಾದ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ಲಂಚ ಪಡೆದುಕೊಂಡಿದ್ದರು...
ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಆಲಿ ಕಮಾಲ್‌ನನ್ನು ಮದುವೆಯಾಗಿದ್ದ ನಿಶಾತ್, ತನ್ನ ಗಂಡ ತನಗೆ ಅರಿವಿಲ್ಲದಂತೆ ತಲಾಖ್‌ನಾಮಾ ಪಡೆದುಕೊಂಡಿರುವುದು ಅಚ್ಚರಿ ತಂದಿತ್ತು. ಅದೂ ಅರಿವಿಗೆ ಬಂದದ್ದು ಪಕ್ಕದ ಮನೆಯವರು ಹೇಳಿದ್ದರಿಂದ.

ಈ ಕುರಿತು ಮಾಹಿತಿ ಸಂಗ್ರಹಿಸಿದಾಗ 'ಗಂಡ ಆಲಿ ತನಗೆ ತಲಾಖ್ ನೀಡಿದ್ದು, ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಿದ್ದಾನೆ' ಎಂಬುದು ತಿಳಿಯಿತು.

ನಾನು ಹಲವರಲ್ಲಿ ವಿಚಾರಿಸಿದಾಗ ಸತ್ಯ ಸಂಗತಿ ಹೊರಗೆ ಬಂತು. ಆಲಿ ನನಗೆ ತಲಾಖ್ ನೀಡಿ ಮತ್ತೊಬ್ಬಳೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ನನಗೆ ತಿಳಿಯದಂತೆ ತಲಾಖ್‌ನಾಮ್ ನೀಡಲು ಮೌಲ್ವಿಗಳಿಗೆ ಗಂಡ 2,500 ರೂಪಾಯಿ ಲಂಚ ನೀಡಿದ್ದ. ಹಾಗಾಗಿ ಮೌಲ್ವಿಗಳಿಗೆ ಚೆನ್ನಾಗಿ ಬಡಿದು ಬುದ್ಧಿ ಕಲಿಸಿದ್ದೇವೆ ಎಂದು ನಿಶಾತ್ ವಿವರಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ