ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಗಿಲು ತೆರೆದೇ ಟೇಕ್-ಆಫ್ ಆದ ನಿತೀಶ್ ಹೆಲಿಕಾಪ್ಟರ್ (Nitish Kumar | chopper | Bihar | JDU)
Bookmark and Share Feedback Print
 
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವಲ್ಪದರಲ್ಲೇ ಭಾರೀ ಅಪಾಯವೊಂದರಿಂದ ಪಾರಾಗಿದ್ದಾರೆ. ಇತರ ಇಬ್ಬರೊಂದಿಗೆ ಬಿಹಾರದ ಜಾಮೈ ಜಿಲ್ಲೆಯ ಗಿದ್ದಾರ್ ಎಂಬಲ್ಲಿಂದ ಹೊರಟಿದ್ದ ಹೆಲಿಕಾಪ್ಟರ್ ಬಾಗಿಲು ಹಾಕದೆ ಟೇಕ್-ಆಫ್ ಆಗಿರುವುದೇ ಈ ಘಟನೆ.

ಆಹಾರ ಮಂತ್ರಿ ನರೇಂದ್ರ ಸಿಂಗ್ ಮತ್ತು ಜೆಡಿಯು ರಾಷ್ಟ್ರೀಯ ವಕ್ತಾರ ಶಿವಾನಂದ್ ತಿವಾರಿಯವರ ಜತೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ಬಾಗಿಲು ತೆರೆದಿರುವುದನ್ನು ಪೈಲಟ್ ಗಮನಕ್ಕೆ ತಂದ ಕೂಡಲೇ ತಕ್ಷಣವೇ ತುರ್ತು ಲ್ಯಾಂಡಿಂಗ್ ನಡೆಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ನಿಧನರಾಗಿದ್ದ ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಕುಟುಂಬವನ್ನು ಸಂತೈಸಿ, ಶ್ರದ್ಧಾಂಜಲಿ ಅರ್ಪಿಸಲು ನಿತೀಶ್ ಕುಮಾರ್ ಹೊರಟಿದ್ದರು ಎಂದು ಹೇಳಲಾಗಿದೆ.

ಈ ಹೆಲಿಕಾಪ್ಟರನ್ನು ಕ್ಯಾಪ್ಟನ್ ರಮಣ್ ಮತ್ತು ಕ್ಯಾಪ್ಟನ್ ರವಿ ಎಂಬವರು ಚಲಾಯಿಸುತ್ತಿದ್ದರು. ಎಡ ಬದಿಯ ಡೋರ್ ಓಪನ್ ಆಗಿರುವುದನ್ನು ಗಮನಕ್ಕೆ ತಂದ ಕೂಡಲೇ ಹೆಲಿಕಾಪ್ಟರನ್ನು ಕೆಳಕ್ಕಿಳಿಸಿ ಸರಿಪಡಿಸಿದ ನಂತರ ಹಾರಾಟ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಡಿಗೆಗೆ ಪಡೆದಿರುವ ಈ ನಾಲ್ಕು ಸೀಟುಗಳ ಹೆಲಿಕಾಪ್ಟರ್ ಸರಕಾರದ್ದಲ್ಲ. ಪೈಲಟ್‌ಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಆದರೂ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಲಾಗಿದೆ. ರಾಜ್ಯ ನಾಗರಿಕ ವೈಮಾನಿಕ ಇಲಾಖೆಯ ಹೆಚ್ಚುವರಿ ಮುಖ್ಯ ಪೈಲಟ್ ಕ್ಯಾಪ್ಟನ್ ದೀಪಕ್ ಕುಮಾರ್ ಸಿಂಗ್ ತನಿಕೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ