ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಾರಿ ತಡೆಯಲು ಹೆಣ್ಮಕ್ಕಳಿಗೆ 15ರಲ್ಲೇ ಮದುವೆ ಮಾಡಿ! (Lower marriagebale age | honour killing | Khap Panchayats | Jat Mahasabha)
Bookmark and Share Feedback Print
 
ಸಗೋತ್ರ ಮತ್ತು ಅನ್ಯ ಜಾತಿಗಳ ನಡುವಿನ ಮದುವೆಯನ್ನು ತೀವ್ರವಾಗಿ ವಿರೋಧಿಸುತ್ತಾ ಪ್ರೇಮಿಗಳನ್ನು ಅಮಾನವೀಯವಾಗಿ ಕೊಲ್ಲಲು ಆದೇಶ ನೀಡುವ ನಿರ್ದಯಿ ಖಾಪ್ ಪಂಚಾಯಿತಿಗಳು ಇಟ್ಟಿರುವ ಬೇಡಿಕೆಯಿದು. ಹುಡುಗಿಯರ ಮದುವೆ ವಯಸ್ಸನ್ನು 18ರಿಂದ 15ಕ್ಕೆ ಇಳಿಸಬೇಕು, ಇದರಿಂದ ಮರ್ಯಾದಾ ಹತ್ಯೆಗಳನ್ನು ತಡೆಯಬಹುದು ಎಂದು ಅವುಗಳು ಅಭಿಪ್ರಾಯಪಟ್ಟಿವೆ.

ಕೇವಲ ಹುಡುಗಿಯರ ವಯಸ್ಸು ಮಾತ್ರವಲ್ಲ, ಹುಡುಗರ ವಯಸ್ಸನ್ನೂ 21ರಿಂದ 17ಕ್ಕೆ ಇಳಿಸಬೇಕೆಂದು ಈ ಜಾತಿ ಮಹಾಸಭೆಗಳು ಬಯಸುತ್ತಿವೆ. ಈ ರೀತಿಯಾಗಿ ಬೇಗನೆ ಮದುವೆ ಮಾಡಿಸುವುದರಿಂದ ಪ್ರೀತಿ-ಪ್ರೇಮಗಳು ಜಾತಿ ಮತ್ತು ಗೋತ್ರದ ಸಮಸ್ಯೆಗಳನ್ನು ತರಲಾರವು ಎನ್ನುವುದು ಖಾಪ್ ಪಂಚಾಯಿತಿಗಳ ಅಭಿಪ್ರಾಯ.

ಈ ಕುರಿತು ಜುಲೈ 17ರಂದು ನಡೆಯುವ ಸರ್ವ ಖಾಪ್ ಪಂಚಾಯಿತಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಇಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳ 600ಕ್ಕೂ ಹೆಚ್ಚು ಖಾಪ್ ಪಂಚಾಯಿತಿಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಜಾಟ್ಸ್, ರಜಪೂತರು, ಸೈನಿಸ್, ಗುಜ್ಜರ್ಸ್ ಮತ್ತು ಧನಕ್ಸ್ ಕೂಡ ಇರುತ್ತಾರೆ ಎಂದು ಅಖಿಲ ಭಾರತ ಜಾತಿ ಮಹಾಸಭಾ ಅಧ್ಯಕ್ಷ ಹರ್ಯಾಣದ ಓಂ ಪ್ರಕಾಶ್ ಮನ್ ತಿಳಿಸಿದ್ದಾರೆ.

ಮದುವೆಯ ವಯಸ್ಸನ್ನು ಇಳಿಕೆ ಮಾಡುವುದರಿಂದ ಯುವ ಜೋಡಿಗಳ ಪರಾರಿಯನ್ನು ತಡೆಯಬಹುದಾಗಿದೆ. ಒಬ್ಬ ಹುಡುಗಿ ಪರಾರಿಯಾದರೆ ಆ ಕುಟುಂಬಕ್ಕೆ ಅದು ಕಪ್ಪು ಚುಕ್ಕೆ, ಅಪಮಾನ. ಇದನ್ನು ಸಹಿಸಿಕೊಳ್ಳದ ಕುಟುಂಬಗಳು, ಹೆತ್ತವರು ತಮ್ಮ ಮಕ್ಕಳನ್ನು ಕೊಲ್ಲುವ ನಿರ್ಧಾರಕ್ಕೆ ಬರುತ್ತಾರೆ ಎಂದು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಮರ್ಯಾದಾ ಹತ್ಯೆಗಳಲ್ಲಿ ಖಾಪ್ ಪಂಚಾಯಿತಿಗಳು ಯಾವುದೇ ಪಾತ್ರ ವಹಿಸುತ್ತಿಲ್ಲ, ಇದು ಹೆತ್ತವರು ಕೈಗೊಳ್ಳುವ ಕ್ರಮವಷ್ಟೇ ಎಂದು ಈ ಹಿಂದೆ ಪ್ರಕಾಶ್ ಹೇಳಿಕೆ ನೀಡಿದ್ದರು.

ಬೇಗನೆ ಮದುವೆ ಮಾಡಿಸುವುದರಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆಯಲ್ಲವೇ ಎಂಬುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.

ಹದಿ ಹರೆಯದವರು ತಮ್ಮ ಕುಟುಂಬಿಕರಿಂದ ಕೊಲ್ಲಲ್ಪಡುವುದನ್ನು ತಡೆಯುವುದು ನನ್ನ ಪ್ರಮುಖ ಕಾಳಜಿ. ಇದನ್ನು ತಡೆಯುವ ನಿಟ್ಟಿನಲ್ಲಿ ತಕ್ಷಣದ ಕ್ರಮ ಅಗತ್ಯವಿದೆ ಎಂದಷ್ಟೇ ಪ್ರಕಾಶ್ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ