ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತವರಿಗೆ ಮರಳಲು 'ಬೆಂಕಿ ಚೆಂಡು' ಉಮಾ ಭಾರತಿ ಸಿದ್ಧ (BJP | Uma Bharti | L.K. Advani | Nitin Gadkari)
Bookmark and Share Feedback Print
 
ಹಿರಿಯ ನಾಯಕ ಜಸ್ವಂತ್ ಸಿಂಗ್ ಬಿಜೆಪಿ ತೆಕ್ಕೆಗೆ ಮರಳಿದ್ದಾಯಿತು, ಈಗ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಸರದಿ. ಅವರ ವಾಪಸಾತಿ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಒಂದು ಕಾಲದ ಬಿಜೆಪಿಯ 'ಬೆಂಕಿಯ ಚೆಂಡು' ಮಾತೃಪಕ್ಷಕ್ಕೆ ಮರಳುವುದಂತೂ ಖಚಿತ. ಅದು ಯಾವಾಗ ಎಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಇನ್ನೇನು ಅಂತಿಮ ತೀರ್ಮಾನ ಹೊರ ಬೀಳಬಹುದು ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಅವರ ಪ್ರಕಾರ ಉಮಾ ಭಾರತಿಯವರ ಮರಳುವಿಕೆಯನ್ನು ಮಧ್ಯಪ್ರದೇಶ ಬಿಜೆಪಿಯ ಒಂದು ಗುಂಪು ತೀವ್ರವಾಗಿ ವಿರೋಧಿಸುತ್ತಿದೆ. ಆದರೆ ಪಕ್ಷದ ರಾಷ್ಟ್ರೀಯ ನಾಯಕತ್ವವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾಯಕಿಯನ್ನು ಬರ ಮಾಡಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಆದರೆ ಸ್ವತಃ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೇಂದ್ರ ನಾಯಕತ್ವದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ ಅವರು ಮರಳುತ್ತಿರುವುದು ಖಚಿತ ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ಛತ್ತೀಸ್‌ಗಢಕ್ಕೆ ಹೋಗುವ ಸಂದರ್ಭದಲ್ಲಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ಜತೆ ಒಂದೇ ವಿಮಾನದಲ್ಲಿ ಉಮಾ ಭಾರತಿ ಪ್ರಯಾಣಿಸಿದ್ದರು. ಆಗಲೂ ಇಬ್ಬರು ನಾಯಕರ ಜತೆ ಮಾತುಕತೆ ನಡೆದಿತ್ತು. ಇದು ಕೆಲವು ತಿಂಗಳುಗಳಿಂದ ಮುಂದುವರಿದುಕೊಂಡು ಬಂದಿದೆ. ಉಮಾ ಭಾರತಿಯವರು ತನ್ನ ಹಿಂದಿನ ಹೇಳಿಕೆಗಳ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಉಮಾ ಭಾರತಿ ತನ್ನದೇ ಸ್ವಂತ ಪಕ್ಷ 'ಭಾರತೀಯ ಜನಶಕ್ತಿ ಪಕ್ಷ'ವನ್ನು ಸ್ಥಾಪಿಸಿದ್ದರು. ಆದರೆ ಇದೇ ವರ್ಷದ ಆರಂಭದಲ್ಲಿ ಅದಕ್ಕೂ ರಾಜೀನಾಮೆ ನೀಡಿದ್ದರು. 2005ರಲ್ಲಿ ಅವರನ್ನು ಬಿಜೆಪಿಯಿಂದ ಹೊರದಬ್ಬಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ