ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ಯಾತ್ರೆ ಬೆದರಿಕೆ; ಜಗನ್‌ಗೆ ಕಾಂಗ್ರೆಸ್ ಎಚ್ಚರಿಕೆ (Odarpu yatra | Congress | Y S Jaganmohan Reddy | YSR Reddy)
Bookmark and Share Feedback Print
 
ತೆಲಂಗಾಣ ಪ್ರಾಂತ್ಯಕ್ಕೆ ತನ್ನ ಉದ್ದೇಶಿತ ಯಾತ್ರೆ ಮಾಡಿಯೇ ಸಿದ್ಧ ಎಂದು ಸವಾಲೆಸೆದಿರುವ ಸಂಸದ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಪುತ್ರ ವೈ.ಎಸ್. ಜಗನ್ಮೋಹನ್ ರೆಡ್ಡಿಗೆ ಕಾಂಗ್ರೆಸ್ ಕಠಿಣ ಎಚ್ಚರಿಕೆ ರವಾನಿಸಿದೆ.

ಕಾಂಗ್ರೆಸ್ ಹೈಕಮಾಂಡ್ ಮಾತನ್ನು ಉಲ್ಲಂಘಿಸಿ ತನ್ನ 'ಒದಾರ್ಪು ಯಾತ್ರೆ'ಯನ್ನು ಜಗನ್ ಮುಂದುವರಿಸಿದಲ್ಲಿ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ನಿಷ್ಠರಾಗಿರುವವರು ಮತ್ತು ಬದ್ಥತೆಯುಳ್ಳವರು ಕಡ್ಡಾಯವಾಗಿ ಪಕ್ಷದ ಧರ್ಮ, ಶಿಷ್ಟಾಚಾರದ ಲಕ್ಷ್ಮಣ ರೇಖೆ ಮತ್ತು ಪಕ್ಷದ ಶಿಸ್ತನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆಕ್ಷೇಪದ ಹೊರತಾಗಿಯೂ ತನ್ನ ವಿವಾದಿತ ಯಾತ್ರೆಯನ್ನು ಜುಲೈ 8ರಂದು ಮತ್ತೆ ಕೈಗೊಳ್ಳಲಿದ್ದೇನೆ. ತನ್ನ ತಂದೆಯ ಸಾವಿನ ಸಂದರ್ಭದಲ್ಲಿ ಮರಣವನ್ನಪ್ಪಿದ, ಆತ್ಮಹತ್ಯೆ ಮಾಡಿಕೊಂಡ ಪಕ್ಷದ ಕಾರ್ಯಕರ್ತರಿಗೆ ಸಾಂತ್ವನ ಹೇಳಲಿದ್ದೇನೆ ಎಂದು ರೆಡ್ಡಿ ಹೇಳಿರುವುದೇ ಕಾಂಗ್ರೆಸ್ ಕಠಿಣ ನಿಲುವಿಗೆ ಕಾರಣ.

ಈ ತೆಲಂಗಾಣ ಪ್ರಾಂತ್ಯದ ಯಾತ್ರೆ ಸಂದರ್ಭದಲ್ಲಿ ತಾನು ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡುವುದಿಲ್ಲ. ಹಾಗೆಲ್ಲಾದರೂ ನೀಡಿದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮತ್ತು ಅದನ್ನು ಉಳಿಸಿಕೊಳ್ಳಲು ಯತ್ನಿಸುತ್ತೇನೆ ಎಂದು ಜಗನ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ನನ್ನ ಯಾತ್ರೆಯ ಬಗ್ಗೆ ಸೋನಿಯಾ ಗಾಂಧಿಯವರು ಸಮ್ಮತಿಯನ್ನು ಸೂಚಿಸಿಲ್ಲ. ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನೂ ಅವರು ನೀಡಿಲ್ಲ. ಆದರೆ ನನ್ನ ಯಾತ್ರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈ ಕುರಿತು ವಿವರಣೆ ನೀಡಲು ನಾನು ಪಕ್ಷದ ಹೈಕಮಾಂಡ್ ಜತೆ ಬಯಸಿದ್ದೆನಾದರೂ, ಅದಕ್ಕೆ ಅವರು ಅವಕಾಶ ನೀಡಿಲ್ಲ. ನಾನೇನೂ ತಪ್ಪೆಸಗುತ್ತಿಲ್ಲ ಎಂಬುದನ್ನು ವಿವರಿಸಲಿದ್ದೇನೆ ಎಂದು 37ರ ಹರೆಯದ ಕಾಂಗ್ರೆಸ್ ಸಂಸದ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಜಗನ್ ನಿಲುವನ್ನು ಸ್ವತಃ ರಾಜ್ಯ ಕಾಂಗ್ರೆಸ್‌ನ ಕೆಲವು ಮುಖಂಡರೇ ವಿರೋಧಿಸುತ್ತಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶ ಕಾಂಗ್ರೆಸ್‌ ಇಬ್ಭಾಗವಾಗುತ್ತಿರುವುದು ಕೂಡ ಸ್ಪಷ್ಟವಾಗಿದೆ. ಹೈಕಮಾಂಡ್ ಕೂಡ ಜಗನ್ ಪರವಾಗಿ ನಿಲ್ಲದೇ ಇರುವುದರಿಂದ ಮುಂದಿನ ನಡೆಗಳು ಕುತೂಹಲ ಮೂಡಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ