ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತ ಬಂದ್‌ಗೆ ನರೇಂದ್ರ ಮೋದಿ ಪೋಸ್ಟರ್ ಯಾಕೆ? (Narendra Modi | Muslim United Front | BJP | Bharat Bandh)
Bookmark and Share Feedback Print
 
ಬಿಹಾರದಲ್ಲಿ ನಡೆದ ಭಾರತ ಬಂದ್ ವೇಳೆ ಬಿಜೆಪಿ ಕಾರ್ಯಕರ್ತರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಚಿತ್ರಗಳುಳ್ಳ ಭಿತ್ತಿಪತ್ರಗಳನ್ನು ಪ್ರದರ್ಶಿಸಿರುವುದನ್ನು ಮುಸ್ಲಿಂ ಸಂಯುಕ್ತ ರಂಗ ತೀವ್ರವಾಗಿ ಖಂಡಿಸಿದೆ.

ಮೋದಿಯವರ ಪೋಸ್ಟರ್ ಪ್ರದರ್ಶಿಸುವ ಮೂಲಕ ಬಿಜೆಪಿಯು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸುವ ಮತ್ತು ಚುನಾವಣಾ ಲಾಭ ಪಡೆಯುವ ಯತ್ನ ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಕೂಡ ಜೆಡಿಯು ಸಂಸದ ಮೊನಾಜಿರ್ ಹಸನ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮುಸ್ಲಿಂ ಸಂಯುಕ್ತ ರಂಗ (ಎಂಯುಎಫ್) ಅಧ್ಯಕ್ಷ ಅಬೂ ಕೈಸರ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಬೆಲೆಯೇರಿಕೆ ನಿಯಂತ್ರಣಕ್ಕೆ ವಿಫಲವಾಗಿರುವುದು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಎನ್‌ಡಿಎ ಕರೆ ನೀಡಿದ್ದ ಬಂದ್ ಪಾಟ್ನಾದಲ್ಲಿ ನಡೆಯುತ್ತಿದ್ದಾಗ ಈ ಪ್ರಸಂಗ ನಡೆದಿದೆ.

ಈ ವಿಚಾರ ತಿಳಿದೂ ಸುಮ್ಮನಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧವೂ ಮುಸ್ಲಿಂ ಸಂಯುಕ್ತ ರಂಗ ಆಕ್ರೋಶ ವ್ಯಕ್ತಪಡಿಸಿದೆ.

ಮೋದಿಯೊಂದಿಗಿನ ಭಾವಚಿತ್ರವನ್ನು ಅನುಮತಿಯಿಲ್ಲದೆ ಜಾಹೀರಾತಿನಲ್ಲಿ ಪ್ರಕಟಿಸಿದ್ದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ನಿತೀಶ್ ಇದೀಗ ಬಿಹಾರದಲ್ಲಿ ಮೋದಿ ಚಿತ್ರಗಳನ್ನು ಪ್ರದರ್ಶಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಬೇಕು. ಅದನ್ನು ಆಕ್ಷೇಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮುಸ್ಲಿಂ ಓಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಸಂಯುಕ್ತ ಜನತಾದಳ ಮುಖಂಡ ನಿತೀಶ್ ಕುಮಾರ್, ಗುಜರಾತ್ ಮುಖ್ಯಮಂತ್ರಿ ಜತೆಗೆ ವೇದಿಕೆ ಹಂಚಿಕೊಳ್ಳುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ತಪ್ಪಿಸುತ್ತಾ ಬಂದಿದ್ದರು. ಆದರೆ ಕೆಲ ವಾರಗಳ ಹಿಂದೆ ಗುಜರಾತ್ ಪ್ರಕಟಿಸಿದ್ದ ಜಾಹೀರಾತಿನಿಂದ ತೀವ್ರ ಮುಖಭಂಗ ಅನುಭವಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ