ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೌಕಾಪಡೆ ಕಮಾಂಡರ್ ನಿಗೂಢ ಸಾವು; ಆಕಸ್ಮಿಕವೇ? (Southern Naval Command chief | S S Jamwal | INS Dronacharya | Kochi)
Bookmark and Share Feedback Print
 
ಭಾರತೀಯ ನೌಕಾಪಡೆಯ ದಕ್ಷಿಣ ವಲಯದ ಕಮಾಂಡರ್ ಅಡ್ಮಿರಲ್ ಎಸ್.ಎಸ್. ಜಮ್ವಾಲ್ ಕೊಚ್ಚಿಯಲ್ಲಿನ ಐಎನ್ಎಸ್ ದ್ರೋಣಾಚಾರ್ಯ ಯುದ್ಧ ನೌಕೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಸರಕಾರಿ ಮೂಲಗಳ ಪ್ರಕಾರ ಇಂದು ಬೆಳಿಗ್ಗೆ ತರಬೇತಿ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ತಾಗಿ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆಗೆ ನೌಕಾ ಪಡೆ ಆದೇಶ ನೀಡಿದೆ.

ದಕ್ಷಿಣ ವಲಯದ ನೌಕಾ ಕಮಾಂಡ್ ಸಿಬ್ಬಂದಿಗಳ ಮುಖ್ಯಸ್ಥ, ರೀರ್ ಅಡ್ಮಿರಲ್ ಎಸ್.ಎಸ್. ಜಮ್ವಾಲ್ ಅವರು ಆಕಸ್ಮಿಕ ಗುಂಡು ಹಾರಾಟಕ್ಕೆ ಬಲಿಯಾದವರು. ಅವರ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ನೌಕಾ ಪಡೆಯ ವಕ್ತಾರ ಕಮಾಂಡರ್ ಪಿ.ವಿ.ಎಸ್. ಸತೀಶ್ ತಿಳಿಸಿದ್ದಾರೆ.

ಐಎನ್ಎಸ್ ದ್ರೋಣಾಚಾರ್ಯ ಯುದ್ಧ ನೌಕೆಯಲ್ಲಿ ಯುದ್ಧ ತರಬೇತಿ ನಡೆಯುತ್ತಿದ್ದ ಫೈರಿಂಗ್ ರೇಂಜ್‌ನಲ್ಲಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡೊಂದು 51ರ ಹರೆಯದ ಜಮ್ವಾಲ್ ಅವರ ತಲೆಗೆ ಹೊಕ್ಕಿತ್ತು. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಇಂದು ಪೂರ್ವಾಹ್ನ ಈ ಘಟನೆ ನಡೆದಿದೆ. ಗುಂಡು ತಗುಲಿದ ತಕ್ಷಣ ಜಮ್ವಾಲ್ ಸ್ಥಳದಲ್ಲೇ ಅಸುನೀಗಿದ್ದಾರೆ. ಆಕಸ್ಮಿಕವಾಗಿ ಗುಂಡು ಹಾರಲು ಕಾರಣಗಳೇನು ಎಂಬುದನ್ನು ತನಿಖೆಯ ನಂತರ ಬಹಿರಂಗಪಡಿಸಲಾಗುತ್ತದೆ. ಅವರ ಅಗಲಿಕೆಗಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇವೆ ಎಂದು ನೌಕಾ ಪಡೆ ತಿಳಿಸಿದೆ.

ತರಬೇತಿ ಅವಧಿಯಲ್ಲಿ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ನೌಕಾಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇತರ ಕಾರಣಗಳು ಇಲ್ಲಿ ಒಳಗೊಂಡಿರುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. ಪ್ರಸಕ್ತ ಇದನ್ನು ನಿಗೂಢ ಸಾವು ಎಂದೇ ಪರಿಗಣಿಸಲಾಗುತ್ತಿದೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ