ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದಲ್ಲಿ ನೈಜ ಮುಸ್ಲಿಂ ನಾಯಕರಿಲ್ಲ: ಸಲ್ಮಾನ್ ಖುರ್ಷೀದ್ (Muslim leaders | India | Salman Khursheed | Muslim votes)
Bookmark and Share Feedback Print
 
ಭಾರತದಲ್ಲಿರುವುದು ಬಹುತೇಕ ನೈಜ ಮುಸ್ಲಿಂ ನಾಯಕರಲ್ಲ. ಅವರಲ್ಲಿ ಹೆಚ್ಚಿನವರು ಮುಸ್ಲಿಂ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ನಿಟ್ಟಿನಲ್ಲಿ ಯಾವುದೋ ರಾಜಕೀಯ ಪಕ್ಷಗಳು ನಡೆಸಿದ ಆಯ್ಕೆಗಳಾಗಿರುತ್ತಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಅಭಿಪ್ರಾಯಪಟ್ಟಿದ್ದಾರೆ.

ಸಮುದಾಯದೊಂದಿಗೆ ಉನ್ನತ ಮಟ್ಟದ ಸಂಬಂಧ ಹೊಂದಿರುವ ಮುಸ್ಲಿಂ ನಾಯಕರ ಗೈರು ಎದ್ದು ಕಾಣುತ್ತಿದೆ. ಈಗ ಕಾಣುತ್ತಿರುವ ಬಹುತೇಕ ಮುಸ್ಲಿಂ ನಾಯಕರು ಯಾವುದೇ ತಳಹದಿ ಇಲ್ಲದವರು ಮತ್ತು ಮುಸ್ಲಿಂ ಸಮಾಜದೊಂದಿಗೆ ಸುವ್ಯವಸ್ಥಿತ ಸಂಬಂಧವನ್ನು ಹೊಂದಿಲ್ಲದೇ ಇರುವವರು. ಹೆಚ್ಚಿನವರು ರಾಜಕೀಯ ಕುಟುಂಬಗಳ ಮೂಲಕ ಹೊರ ಬಂದವರು, ಮುಸ್ಲಿಮರ ಓಟುಗಳನ್ನು ಗಳಿಸಿಕೊಡುವ ಸಾಮರ್ಥ್ಯವುಳ್ಳವರೆಂದು ರಾಜಕೀಯ ಪಕ್ಷಗಳಿಂದ ಎತ್ತರಕ್ಕೇರಿಸಲ್ಪಟ್ಟವರು ಎಂದು ಪತ್ರಿಕೆಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.
PR

ಮೌಲಾನಾ ಆಜಾದ್ ಮತ್ತು ರಫಿ ಅಹ್ಮದ್ ಕಿದ್ವಾಯಿಯಂತಹ ನಾಯಕರ ಹೆಸರುಗಳನ್ನು ಉಲ್ಲೇಖಿಸಿದ ಸಚಿವರು, ಅವರು ಯಾವುದೇ ಬಾಹ್ಯ ಶಕ್ತಿಗಳಿಗೆ ಆಕ್ರಮಣಕಾರಿ ಭಿನ್ನಮತೀಯರ ರೀತಿಯಲ್ಲಾಗಲೀ ಅಥವಾ ಸುಲಭವಾಗಿ ಶರಣಾಗುವುದಾಗಲೀ ಸಾಧ್ಯವಿರಲಿಲ್ಲ ಎಂದು ಶ್ಲಾಘಿಸಿದರು.

ಅವರು ತಾವಿರುವ ರಾಜಕೀಯ ಪಕ್ಷಗಳಲ್ಲಿ ಆಕ್ರಮಣಕಾರಿಯಾಗಿ ಅಥವಾ ತೀರಾ ಕುಜ್ಜರಾಗುವುದರ ಬದಲಿಗೆ ತಮ್ಮದೇ ರೀತಿಯಲ್ಲಿ ಮುಸ್ಲಿಮರ ಸಮಸ್ಯೆಗಳನ್ನು ಅಭಿವ್ಯಕ್ತಗೊಳಿಸುವ ಸಾಮರ್ಥ್ಯವುಳ್ಳವರಾಗಿದ್ದರು. ಇಂದು ನಾವು ಅಂತಹ ಮುಸ್ಲಿಂ ಧ್ವನಿಗಳನ್ನು ರಾಜಕೀಯ ವಲಯದಲ್ಲಿ ಕಾಣುವುದು ಅಪರೂಪವಾಗುತ್ತಿದೆ. ದೇಶದ ರಾಜಕೀಯ ವಲಯವು ಸಮರ್ಥ ಮುಸ್ಲಿಂ ನಾಯಕರ ಕೊರತೆಯನ್ನು ಎದುರಿಸುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಮುಸ್ಲಿಮರಲ್ಲಿನ ಸಾಂಪ್ರದಾಯಿಕತೆ ವಿಚಾರದ ಕುರಿತೂ ಮಾತನಾಡಿದ ಉತ್ತರ ಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ, ಹಲವು ರಾಜ್ಯಗಳಲ್ಲಿ ಮರ್ಯಾದಾ ಹತ್ಯೆ ಹೆಸರಿನಲ್ಲಿ ಖಾಪ್ ಪಂಚಾಯಿತಿಗಳು ನಡೆಸುತ್ತಿರುವ ಮಾರಣಹೋಮವನ್ನು ಉಲ್ಲೇಖಿಸಿದರು.

ಮುಸ್ಲಿಮರಲ್ಲಿರುವ ಅತಿಯಾದ ಮಡಿವಂತಿಕೆ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಇಂತಹ ಸಂಪ್ರದಾಯವಾದ ಪ್ರತಿ ಸಮುದಾಯಗಳಲ್ಲೂ ಇದೆ ಎಂಬುದನ್ನು ನಾವು ಮನಗಾಣಬೇಕು. ಇತ್ತೀಚಿನ ದಿನಗಳಲ್ಲಿ ಖಾಪ್ ಪಂಚಾಯಿತಿಗಳ ವರ್ತನೆಯನ್ನು ತಿದ್ದಿಕೊಳ್ಳಬೇಕು, ಬದಲಾಗಬೇಕು ಎಂಬ ಪ್ರಸ್ತಾಪಗಳನ್ನೂ ಒಪ್ಪಿಕೊಳ್ಳಲು ಅವುಗಳು ಸಿದ್ಧವಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ