ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಜತೆಗಿನ ವಿಶ್ವಾಸ ಕೊರತೆ ನೀಗಿಸಬೇಕಿದೆ: ಕೃಷ್ಣ (Indo-Pak talks | S M Krishna | External affairs | Yousuf Raza Gilani)
Bookmark and Share Feedback Print
 
ಭಾರತ ಮತ್ತು ಪಾಕಿಸ್ತಾನಗಳ ಮಾತುಕತೆಯ ಫಲಿತಾಂಶಗಳ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಉಭಯ ರಾಷ್ಟ್ರಗಳ ನಡುವಿನ ವಿಶ್ವಾಸ ಕೊರತೆಯನ್ನು ನೀಗಿಸುವುದೇ ಮಾತುಕತೆಯ ಮೊದಲ ಗುರಿ ಎಂದು ತಿಳಿಸಿದ್ದಾರೆ.

ಈಗಲೇ ಮಾತುಕತೆಯ ಬಗ್ಗೆ ಏನನ್ನೂ ನಿರ್ಧರಿಸದಿರಿ. ಪಾಕಿಸ್ತಾನ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಇದನ್ನು ಆರಂಭಿಸಿದ್ದಾರೆ. ಇದರ ಪ್ರಾಥಮಿಕ ಗುರಿ ಉಭಯ ರಾಷ್ಟ್ರಗಳ ನಡುವಿನ ವಿಶ್ವಾಸದ ಕೊರತೆಯನ್ನು ನೀಗಿಸುವುದು. ಇದು ವಿಶ್ವಾಸ ನಿರ್ಮಾಣ ಮಾಡುವ ಒಂದು ವಿಧಾನ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಕೃಷ್ಣ ತಿಳಿಸಿದ್ದಾರೆ.

ಮುಂದಿನ ಮಾತುಕತೆಯ ಸಂದರ್ಭದಲ್ಲಿ 'ಸರ್ ಕ್ರೀಕ್' ಗಡಿ ವಿವಾದದ ಕುರಿತು ಭಾರತ ಪ್ರಸ್ತಾಪ ಮಾಡಲಿದೆಯೇ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು. ಹಜ್‌ಗಾಗಿನ ಅಖಿಲ ಭಾರತ ವಾರ್ಷಿಕ ಸಮಾವೇಶದ ನಂತರ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಭೂತಾನ್‌ನಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಗಿಲಾನಿ ಮತ್ತು ಮನಮೋಹನ್ ಸಿಂಗ್ ಭೇಟಿಯಾಗುವ ಮೂಲಕ ಸ್ಥಗಿತಗೊಂಡಿದ್ದ ಮಾತುಕತೆಗೆ ಚಾಲನೆ ನೀಡುವ ಭರವಸೆ ಮೂಡಿಸಿದ್ದರು. ಪಾಕಿಸ್ತಾನದಲ್ಲಿರುವ ಮುಂಬೈ ದಾಳಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳಿಕವಷ್ಟೇ ಮಾತುಕತೆಯನ್ನು ಪುನರಾರಂಭಿಸಲಾಗುತ್ತದೆ ಎಂದು ಆಗ ಭಾರತ ಬೇಡಿಕೆ ಮುಂದಿಟ್ಟಿತ್ತು.

ಅದೇ ಹೊತ್ತಿಗೆ ಕರಕೋರಂ ಗಡಿ ಪ್ರದೇಶದಲ್ಲಿ ಪಾಕಿಸ್ತಾನವನ್ನು ಸಂಪರ್ಕಿಸುವ ರೈಲು ಮಾರ್ಗವನ್ನು ಚೀನಾ ನಿರ್ಮಿಸುವ ಯತ್ನದಲ್ಲಿರುವುದನ್ನು ಸಚಿವರ ಗಮನಕ್ಕೆ ತಂದಾಗ, ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರು ಪ್ರಧಾನಿಯವರ ಪ್ರತಿನಿಧಿಯಾಗಿ ಚೀನಾಕ್ಕೆ ತೆರಳಿದ್ದಾರೆ. ಈ ವಿಚಾರದ ಕುರಿತು ಇದುವರೆಗೆ ಚರ್ಚೆ ನಡೆಸುವ ಅವಕಾಶ ನನಗೆ ಸಿಕ್ಕಿಲ್ಲ. ಆದರೂ ಏನೇನು ನಡೆಯುತ್ತಿದೆ ಎಂಬುದನ್ನು ನಾವು ಹತ್ತಿರದಿಂದ ಗಮನಿಸುತ್ತಿದ್ದೇವೆ ಎಂದರು.

ದ್ವಿಪಕ್ಷೀಯ ವಿಚಾರಗಳ ಕುರಿತು ಚರ್ಚೆ ನಡೆಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಕಳೆದ ವಾರ ಬೀಜಿಂಗ್‌ಗೆ ತೆರಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ