ಯುವತಿ ಅರ್ಜಿ ವಜಾ
ನವದೆಹಲಿ: ರಾಜಸ್ತಾನ ಹೈಕೋರ್ಟ್ ತಪ್ಪಿತಸ್ಥ ಎಂದು ತೀರ್ಪು ನೀಡಿರುವುದಕ್ಕೆ ಮೇಲ್ಮನವಿ ಸಲ್ಲಿಸಿರುವ ಪ್ರಕರಣವನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಬೇಕೆಂಬ ಅತ್ಯಾಚಾರಕ್ಕೊಳಗಾದ ಬ್ರಿಟೀಷ್ ಯುವತಿಯ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಪ್ರಸಕ್ತ ಜಾಮೀನು ಪಡೆದು ಹೊರ ಬಂದಿರುವ ಅತ್ಯಾಚಾರಿ ಪರ್ಬಾತ್ ಸಿಂಗ್ ನನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದೂ ಬಲಿಪಶು ಆರೋಪಿಸಿದ್ದಾಳೆ.