ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಮಾನದಲ್ಲೇ ಹೆತ್ತವಳು ಮಗುವನ್ನು ಬಿಟ್ಟೋಡಿದಳು..! (Woman delivers in aircraft | Amritsar | India | Amandeep Kaur Mann)
Bookmark and Share Feedback Print
 
ತರಾತುರಿಯ ಗಬ್ಬಕ್ಕೆ ತೊಂದರೆಯೆಂತು ಎಂಬುವುದಕ್ಕೆ ಪುಷ್ಠಿ ನೀಡಿದ ಪ್ರಕರಣವಿದು. ವಿದೇಶದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರಳುವ ಸಂದರ್ಭದಲ್ಲಿ ವಿಮಾನದಲ್ಲೇ ಗಂಡು ಮಗುವೊಂದಕ್ಕೆ ಜನ್ಮ ನೀಡಿ ಹತ್ಯೆಗೆ ಯತ್ನಿಸಿದ ಯುವತಿಯೊಬ್ಬಳು, ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪರಾರಿಗೂ ವಿಫಲ ಯತ್ನ ನಡೆಸಿದ್ದಾಳೆ.

ಯುವತಿಯನ್ನು ಪಂಜಾಬ್‌ನ ಹೋಶಿಯಾಪುರ್ ನಗರದ ನಿವಾಸಿ ಅಮನದೀಪ್ ಕೌರ್ ಮನ್ (24) ಎಂದು ಗುರುತಿಸಲಾಗಿದೆ. ಅಮೃತಸರ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದಾಕೆಯನ್ನು ಬಂಧಿಸಿ, ಪೊಲೀಸರು ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಕೆ ಅವಿವಾಹಿತೆ ಎಂದು ವರದಿಗಳು ಹೇಳಿವೆ.

ಮೂಲಗಳ ಪ್ರಕಾರ 22ರ ಹರೆಯದ ಮನದೀಪ್ ಬೆಲೂರಾಸ್ ರಾಜಧಾನಿ ಮಿನ್ಸ್‌ಕ್‌ನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ ನಂತರ ತುರ್ಕಮೇನಿಸ್ತಾನದ ವಿಮಾನದಲ್ಲಿ ಭಾರತಕ್ಕೆ ಮರಳುತ್ತಿದ್ದಳು.

ಹೆತ್ತಿದ್ದು ಶೌಚಾಲಯದಲ್ಲಿ...
ತುರ್ಕಮೇನಿಸ್ತಾನದ ರಾಜಧಾನಿ ಆಶ್ಗಾಬಾಟ್‌ನಲ್ಲಿ ಅಮೃತಸರಕ್ಕೆ ತೆರಳುವ ವಿಮಾನವನ್ನೇರಿದ್ದ ಯುವತಿ ತೀರಾ ಕ್ಷೋಭೆಗೊಳಗಾದವಳಂತೆ ವರ್ತಿಸುತ್ತಿದ್ದಳು. ಆಗಾಗ ಶೌಚಾಲಯಕ್ಕೂ ಹೋಗಿ ಬರುತ್ತಿದ್ದಳು. ಈ ಸಂದರ್ಭದಲ್ಲಿ ವಿಮಾನದ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಅಮನದೀಪ್ ಆರೋಗ್ಯವನ್ನೂ ವಿಚಾರಿಸಿದ್ದರು.

ಆದರೂ ಯಾವುದೇ ಉತ್ತರವನ್ನು ಆಕೆ ನೀಡಿರಲಿಲ್ಲ. ವಿಮಾನ ಅಮೃತಸರದ ರಾಜಾಸಾನ್ಸಿ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಎಲ್ಲರಿಗಿಂತ ಮೊದಲು ದೌಡಾಯಿಸಿ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ.

ಆ ಹೊತ್ತಿಗೆ ಎಂದಿನಂತೆ ವಿಮಾನದಲ್ಲಿ ಭದ್ರತಾ ತಪಾಸಣೆ ಮಾಡಲು ಸಿಬ್ಬಂದಿಗಳು ಶೌಚಾಲಯಕ್ಕೂ ತೆರಳಿದ್ದರು. ಅಲ್ಲಿ ಹಸುಳೆಯೊಂದು ಶೌಚಾಲಯದ ಗುಂಡಿಯಲ್ಲಿ ಅಳುತ್ತಿದ್ದುದನ್ನು ಕಂಡು ಆಘಾತಕ್ಕೊಳಗಾದ ಅವರು ತಕ್ಷಣವೇ ವಿಮಾನ ನಿಲ್ದಾಣದ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕಾಗಮಿಸಿದ ವೈದ್ಯರು, ಟಾಯ್ಲೆಟ್ ಬೇಸಿನ್ ತುಂಡರಿಸಿ ಮಗುವನ್ನು ಹೊರಗೆ ತೆಗೆದಿದ್ದಾರೆ.

ಆರಂಭದಲ್ಲಿ ಮಗುವಿನ ತಾಯಿ ತಾನೆಂದು ಒಪ್ಪಿಕೊಳ್ಳಲು ಅಮನದೀಪ್ ನಿರಾಕರಿಸಿದರೂ, ನಂತರ ತೀವ್ರವಾಗಿ ವಿಚಾರಣೆ ನಡೆಸಿದಾಗ ತಾನು ಶೌಚಾಲಯದಲ್ಲಿ ಜನ್ಮ ನೀಡಿರುವುದನ್ನು ಒಪ್ಪಿಕೊಂಡಿದ್ದಾಳೆ.

ಆಕೆಯನ್ನು ಬಂಧಿಸಿ, ಮಗುವಿನ ಹತ್ಯೆಗೆ ಯತ್ನಿಸಿದ ಪ್ರಕರಣ ದಾಖಲಿಸಲಾಗಿದೆ. ಬಳಿಕ ತಾಯಿ ಮತ್ತು ಮಗುವನ್ನು ವಿಮಾನ ನಿಲ್ದಾಣದ ಪಕ್ಕದ ಆಸ್ಪತ್ರೆಗೆ ಸೇರಿಸಲಾಯಿತು. ಮಗುವಿನ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ