ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಗುರು ಕಾಂಗ್ರೆಸ್ಸಿಗರ ಮನೆ ಅಳಿಯನೇ?: ಬಿಜೆಪಿ (Is Afzal Guru son-in-law of Cong? | Nitin Gadkari | Afzal Guru | Congress)
Bookmark and Share Feedback Print
 
ಸಂಸತ್ ದಾಳಿ ರೂವಾರಿ ಮೊಹಮ್ಮದ್ ಅಫ್ಜಲ್ ಗುರುವನ್ನು ನೇಣಿಗೆ ಹಾಕುವಲ್ಲಿ ಹತ್ತುಹಲವು ಕಾರಣಗಳನ್ನು ನೀಡುತ್ತಾ ದಿನ ಎಣಿಸುತ್ತಿರುವ ಕಾಂಗ್ರೆಸ್ಸಿಗರಿಗೆ ಈ ಭಯೋತ್ಪಾದಕ ಅಳಿಯನೇ ಎಂದು ಬಿಜೆಪಿ ತೀಕ್ಷ್ಣ ಪ್ರಶ್ನೆಯನ್ನೆಸೆದಿದೆ.

ಅಫ್ಜಲ್ ಗುರು ನಿಮ್ಮ ಅಳಿಯನೇ ಎಂಬುದನ್ನು ನಾನು ಕಾಂಗ್ರೆಸ್ ನಾಯಕರಲ್ಲಿ ನೇರವಾಗಿ ಪ್ರಶ್ನಿಸುತ್ತಿದ್ದೇನೆ ಎಂದು ಡೆಹ್ರಾಡೂನ್‌ನಲ್ಲಿ ಬಿಜೆಪಿ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಧ್ಯಕ್ಷ ನಿತಿನ್ ಗಡ್ಕರಿ ಸವಾಲೆಸೆದರು.

ನೀವು (ಕಾಂಗ್ರೆಸ್) ನಿಮ್ಮ ಮಗಳನ್ನು ಆತನಿಗೆ (ಅಫ್ಜಲ್ ಗುರು) ಮದುವೆ ಮಾಡಿ ಕೊಟ್ಟಿದ್ದೀರೋ? ಆತನಿಗೆ ಯಾಕೆ ವಿಶೇಷ ಉಪಚಾರ ನೀಡಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಎನ್ನವುದು ಭೀತಿಯಿಂದ ತುಂಬಿರುವವರನ್ನೇ ಹೊಂದಿರುವ ಪಕ್ಷ. ಅವರು ಭಯೋತ್ಪಾದನೆಯ ವಿರುದ್ಧ ಯಾವತ್ತೂ ಹೋರಾಡುವವರಲ್ಲ ಮತ್ತು ಅದನ್ನು ಮಟ್ಟ ಹಾಕುವವರಲ್ಲ. ಕಾಂಗ್ರೆಸ್ ಭಯೋತ್ಪಾದಕರೆದುರು ಶರಣಾಗುವ ಪಕ್ಷವೇ ಹೊರತು, ಭಾರತವನ್ನು ಅದು ರಕ್ಷಿಸದು ಎಂದರು.

ಗಡ್ಕರಿಗೆ ತಲೆ ಸರಿಯಿಲ್ಲ: ಕಾಂಗ್ರೆಸ್
ಅದೇ ಹೊತ್ತಿಗೆ ಗಡ್ಕರಿ ವಾಕ್ ಪ್ರಹಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಇದಕ್ಕೆ ಯಾವುದೇ ಸೊಪ್ಪು ಹಾಕದ ಗಡ್ಕರಿ, 'ನಾನು ಹೇಳಿಕೆಗೆ ಬದ್ಧವಾಗಿದ್ದೇನೆ. ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ' ಎಂದಿದ್ದಾರೆ.

ಗಡ್ಕರಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರಿಗೆ ಗಂಭೀರ ಚಿಕಿತ್ಸೆಯ ಅಗತ್ಯವಿದೆ ಎಂದಿರುವ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಅವರ ಹೇಳಿಕೆಯು ಹೊಲಸುತನ, ರೇಜಿಗೆ, ಮತ್ತು ಮಂದ ಬುದ್ಧಿಯನ್ನು ನೆನಪಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಈ ರೀತಿ ಹೇಳಿಕೆ ನೀಡುವ ಮೂಲಕ ಬಿಜೆಪಿ ಅಧ್ಯಕ್ಷರು ತನ್ನ ಪೂರ್ತಿ ಗೌರವವನ್ನು ನಿಸ್ಸಂಶಯವಾಗಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಗಮನ ಹರಿಸಿ, ಅವರ ಬಗ್ಗೆ ಕರುಣೆ ತೋರಿಸಿ, ಅವರನ್ನು ಯಾವುದಾದರೂ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಬೇಕು. ಅವರಿಗೆ ಗಂಭೀರ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ