ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಿಳಾ ಮೀಸಲಾತಿಗೆ ಸಂಸದರ ವಿರೋಧವಿದೆ: ಯಾದವ್ (Sharad Yadav | Women's Reservation Bill | JDU | UPA | NDA)
Bookmark and Share Feedback Print
 
ಬಹು ವಿವಾದಿತ ಮಹಿಳಾ ಮೀಸಲಾತಿ ಮಸೂದೆ ಜಾರಿ ಕುರಿತಂತೆ ಜೆಡಿಯು (ಜನತಾದಳ ಸಂಯುಕ್ತ)ದ ಅಧ್ಯಕ್ಷ ಶರದ್ ಯಾದವ್ ಮತ್ತೆ ವಿರೋಧ ವ್ಯಕ್ತಪಡಿಸಿದ್ದು, ಮಹಿಳಾ ಮೀಸಲಾತಿ ಮಸೂದೆ ಶೇ.90ರಷ್ಟು ಸಂಸದರು ವಿರೋಧವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮಹಿಳಾ ಮೀಸಲಾತಿ ಕುರಿತಂತೆ ಪಕ್ಷದ ವಿಪ್ ಇಲ್ಲ, ಆದರೆ ಶೇ.90ರಷ್ಟು ಸಂಸದರು ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇದರಲ್ಲಿ ಆಡಳಿತಾರೂಢ ಯುಪಿಎ ಅಥವಾ ಎನ್‌ಡಿಎ, ಮಹಿಳೆಯರು ಅಥವಾ ಪುರುಷ ಸಂಸದರು ಸೇರಿದಂತೆ ಎಲ್ಲರೂ ಆಕ್ಷೇಪ ವ್ಯಕ್ತಪಡಿಸುತ್ತಿರುವುದಾಗಿ ಯಾದವ್ ಸಂದರ್ಶನವೊಂದರಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮಾರ್ಚ್ 9ರಂದು ಮಹಿಳಾ ಮೀಸಲಾತಿ ಮಸೂದೆಯನ್ನು ವಿವಾದದ ನಡುವೆಯೂ ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಇದೀಗ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಜಯ ದೊರೆಯುವುದೇ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. ಮಹಿಳಾ ಮೀಸಲಾತಿ ಮಸೂದೆ ಜಾರಿ ಕುರಿತಂತೆ ನೀವು ಬೇಕಾದರೆ ಯುಪಿಎ ಮುಖಂಡರನ್ನೇ ಪ್ರಶ್ನಿಸಿ ಎಂದಿರುವ ಯಾದವ್. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತೀವ್ರ ವಿರೋಧ ಇದೆ ಎಂದು ಹೇಳಿದರು.

ಆ ನಿಟ್ಟಿನಲ್ಲಿ ಮಸೂದೆ ಜಾರಿಯಾಗದಂತೆ ಮಾಡಲು ಯಾವುದೇ ಪಕ್ಷಗಳು ವಿಪ್ ನೀಡುವ ಅವಶ್ಯಕತೆ ಇಲ್ಲ. ಬಹುತೇಕ ಸಂಸದರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಮಸೂದೆ ಜಾರಿಯಾಗುವುದಿಲ್ಲ ಎಂದು ಐಎಎನ್‌ಎಸ್ ಜೊತೆ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದರು.

ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ರಾಷ್ಟ್ರೀಯ ಜನತಾದಳದ ಲಾಲೂ ಪ್ರಸಾದ್ ಯಾದವ್ ಜೊತೆ ಶರದ್ ಯಾದವ್ ಕೂಡ ಕೈಜೋಡಿಸುವ ಮೂಲಕ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಲೋಕಸಭೆಯಲ್ಲಿ ಮಸೂದೆ ಮಂಡಿಸಲು ಯುಪಿಎ ಮುಂದಾಗುವ ಮುನ್ನವೇ ಯಾದವ್ ಮತ್ತೆ ಅಪಸ್ವರ ಎತ್ತತೊಡಗಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಜಾರಿಯಾದರೆ ಲೋಕಸಭೆ ಮತ್ತು ರಾಜ್ಯ ಅಸೆಂಬ್ಲಿಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಅವಕಾಶವಾಗಲಿದೆ. ಮಸೂದೆ ಈಗಾಗಲೇ ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಇನ್ನಿತರ ಪಕ್ಷ ಹಾಗೂ ಎಡಪಕ್ಷಗಳು ಬೆಂಬಲ ನೀಡಿದ್ದವು. ಅಂತಿಮವಾಗಿ ಲೋಕಸಭೆಯಲ್ಲಿ ಅಂಗೀಕಾರವಾಗಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ