ಭಾರತದ ಜನಸಂಖ್ಯೆ ಕಳೆದ ನೂರು ವರ್ಷಗಳಲ್ಲಿ ಐದುಪಟ್ಟು ಹೆಚ್ಚಾಗಿದ್ದು, 2050ರ ವೇಳೆಗೆ ಚೀನಾವನ್ನು ಮೀರಿಸಲಿದೆ ಎಂದು ಸರ್ಕಾರಿ ಅಂಕಿ-ಅಂಶ ಬಹಿರಂಗಪಡಿಸಿದೆ.
ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಭಾರತದ ಜನಸಂಖ್ಯೆ ಕಳೆದ ಐದು ವರ್ಷಗಳಲ್ಲಿ 1.4 ಪ್ರತಿಶತ ಹೆಚ್ಚಾಗಿದ್ದರೆ, ಚೀನಾದ ಜನಸಂಖ್ಯಾ ಬೆಳವಣಿಗೆ ಕೇವಲ 0.6ಪ್ರತಿಶತ ಮಾತ್ರ ಅಧಿಕವಾಗಿದೆ.
2009ರಲ್ಲಿ ಭಾರತದ ಒಟ್ಟು ಜನಸಂಖ್ಯೆ 119.8 ಕೋಟಿಗಳಾಗಿದ್ದರೆ, ಚೀನಾ 134.5ಕೋಟಿ ಹಾಗೂ ಪಾಕಿಸ್ತಾನ 18 ಕೋಟಿ ಜನಸಂಖ್ಯೆ ಹೊಂದಿತ್ತು. 2050ರ ವೇಳೆಗೆ ಭಾರತದ ಜನಸಂಖ್ಯೆ 161.38 ಕೋಟಿಗಳಾಗಲಿದೆ. ಚೀನಾ ಜನಸಂಖ್ಯೆ 141.7 ಕೋಟಿಗೆ ಮಾತ್ರ ತಲುಪಲಿದೆ.
ಆದರೆ ಕುತೂಹಲಕಾರಿ ಅಂಶವೆಂದರೆ ಕಳೆದ ಐದು ವರ್ಷಗಳಲ್ಲಿ ಭಾರತೀಯ ಉಪಖಂಡದಲ್ಲಿ ಪಾಕಿಸ್ತಾನದ ಜನಸಂಖ್ಯೆ ಅತಿಹೆಚ್ಚು ಪ್ರಮಾಣ ಅಂದರೆ ಶೇ.2.2ರ ಬೆಳವಣಿಗೆ ಕಂಡಿದೆ.