ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾರ್ಟೋಸ್ಯಾಟ್ ಕಕ್ಷೆಗೆ; ಇಸ್ರೋ ಮತ್ತೊಂದು ಮೈಲಿಗಲ್ಲು (ISRO | PSLV-C-15 | satellites | India)
Bookmark and Share Feedback Print
 
ಭಾರತದ ಮಹತ್ವಾಕಾಂಕ್ಷೆಯ ದೂರಸಂವೇದಿ ಉಪಗ್ರಹ ಕಾರ್ಟೋಸ್ಯಾಟ್-2ಬಿ ಮತ್ತು ಇತರ ನಾಲ್ಕು ಉಪಗ್ರಹಗಳನ್ನು ಇಂದು ಬೆಳಿಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಗೊಳಿಸುವ ಮೂಲಕ ಇಸ್ರೋ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.

ಸುಮಾರು 260 ಕೋಟಿ ರೂಪಾಯಿ ವೆಚ್ಚದ 44.4 ಮೀಟರ್ ಉದ್ದವಿರುವ ನಾಲ್ಕು ಹಂತದ ಕಾರ್ಯಾಚರಣೆಯನ್ನೊಳಗೊಂಡ ಪಿಎಸ್ಎಲ್‌ವಿ-ಸಿ-15 ಉಪಗ್ರಹ ವಾಹಕದ ಮೂಲಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿದ್ದು, ಒಂದರ ಹಿಂದೊಂದರಂತೆ ಐದೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ.
PR

ಚೆನ್ನೈಯಿಂದ 100 ಕಿಲೋ ಮೀಟರ್ ದೂರದಲ್ಲಿರುವ ಆಂಧ್ರಪ್ರದೇಶ ಪೂರ್ವ ಕರಾವಳಿಯಲ್ಲಿನ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9.22ಕ್ಕೆ ಪಿಎಸ್ಎಲ್‌ವಿ ನಭಕ್ಕೆ ನೆಗೆದ ನಂತರ ಯಶಸ್ವಿಯಾಗಿ ಕಕ್ಷೆ ಸೇರಿದುದನ್ನು ಖಚಿತಪಡಿಸಿಕೊಂಡ ಇಸ್ರೋ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ಸಹೋದ್ಯೋಗಿಗಳ ಜತೆ ಸಂಭ್ರಮಿಸಿದರು.

ಆಂಧ್ರಪ್ರದೇಶ ಮತ್ತು ಕರ್ನಾಟಕದ ಏಳು ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ನಿರ್ಮಿಸಿರುವ 'ಸ್ಟಡ್‌ಸ್ಯಾಟ್', ಆಲ್ಜೀರಿಯಾದ 'ಆಲ್‌ಸ್ಯಾಟ್', ಕೆನಡಾ ಮತ್ತು ಸ್ವಿಜರ್ಲೆಂಡ್‌ಗಳ ಎನ್ಎಲ್ಎಸ್ 5.1 ಮತ್ತು ಎನ್ಎಲ್ಎಸ್ 6.2 ಎಂಬ ಎರಡು ನ್ಯಾನೋ ಉಪಗ್ರಹಗಳು ಹಾಗೂ ಭಾರತದ ಕಾರ್ಟೋಸ್ಯಾಟ್-2ಬಿ ಜತೆಗೆ 'ಒಸಿಯನ್‌ಸ್ಯಾಟ್ 2' ಎಂಬ ಪುಟ್ಟ ಉಪಗ್ರಹವನ್ನು ಪಿಎಸ್ಎಲ್‌ವಿ-ಸಿ-15 ನೌಕೆಯು ಹೊತ್ತು ಕಕ್ಷೆಗೆ ತಲುಪಿಸಿತು.

ಏಪ್ರಿಲ್ 15ರಂದು ಭಾರತವು ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ತಂತ್ರಜ್ಞಾನವನ್ನೊಳಗೊಂಡ ಜಿಎಸ್ಎಲ್‌ವಿ-ಡಿ3 ಉಪಗ್ರಹವನ್ನು ಉಡಾಯಿಸಿದ ಕೆಲವೇ ಕ್ಷಣಗಳಲ್ಲಿ ಅದು ಬಂಗಾಳ ಕೊಲ್ಲಿಯಲ್ಲಿ ಪತನವಾಗಿ ಹಿನ್ನಡೆ ಅನುಭವಿಸಿದ್ದ ಇಸ್ರೋಗೆ ಇದೀಗ ಪಿಎಸ್ಎಲ್‌ವಿ ಉಡ್ಡಯನ ಯಶಸ್ವಿಯಾಗುವುದರೊಂದಿಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.

ಭಾರತದ 690 ಕೇಜಿ ತೂಕದ ಕಾರ್ಟೋಸ್ಯಾಟ್-2ಬಿ ಉಪಗ್ರಹದ ಜತೆಗೆ ಆಲ್ಜೀರಿಯಾದ 116 ಕೇಜಿ, ಕೆನಡಾದ ಆರು ಕೇಜಿ, ಸ್ವಿಜರ್ಲೆಂಡ್‌ನ ಒಂದು ಕೇಜಿ ಹಾಗೂ ಕರ್ನಾಟಕ-ಆಂಧ್ರ ವಿದ್ಯಾರ್ಥಿಗಳ ಒಂದು ಕೇಜಿ ತೂಕದ ಉಪಗ್ರಹಗಳಿದ್ದವು.
ಸಂಬಂಧಿತ ಮಾಹಿತಿ ಹುಡುಕಿ