ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಖ್ ವಿರೋಧಿ ಗಲಭೆಯಲ್ಲಿ ಪೊಲೀಸರೂ ಇದ್ದರು: ಸಾಕ್ಷಿ (Policemen | anti-Sikh rioters | Congress | Sajjan Kumar)
Bookmark and Share Feedback Print
 
ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಮತ್ತು ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಲೆಂದು ತಾನು ಠಾಣೆಗೆ ಹೋಗಿರಲಿಲ್ಲ. ಯಾಕೆಂದರೆ ಗಲಭೆ ನಡೆಸುತ್ತಿದ್ದವರಲ್ಲಿ ಪೊಲೀಸರೂ ಇದ್ದರು ಎಂದು 1984ರ ಸಿಖ್ ವಿರೋಧಿ ಗಲಭೆಯಲ್ಲಿ ತನ್ನ ಕುಟುಂಬದ ಐವರನ್ನು ಕಳೆದುಕೊಂಡಿರುವ ಮಹಿಳೆಯೊಬ್ಬರು ದೆಹಲಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದಾರೆ.

ನಾನು ಪೊಲೀಸ್ ಠಾಣೆಗೆ ಹೋಗಲಿಲ್ಲ. ಯಾಕೆಂದರೆ ಹಿಂಸಾಚಾರ ನಡೆಸುತ್ತಿದ್ದವರಲ್ಲಿ ಪೊಲೀಸ್ ಅಧಿಕಾರಿಗಳೂ ಇದ್ದರು ಎಂದು ಹೆಚ್ಚುವರಿ ಸೆಷನ್ಸ್ ಜಡ್ಜ್ ಸುನೀತ್ ಗುಪ್ತಾರೆದುರು ಜಗದೀಶ್ ಕೌರ್ ನುಡಿದಿದ್ದಾರೆ.

ನಾನು ಎಲ್ಲರ ಜತೆಗೂ ನಂಬಿಕೆ ಕಳೆದುಕೊಂಡಿದ್ದೆ. ಹಾಗಾಗಿ ಪಂಜಾಬ್‌ನ ಮುಖ್ಯಮಂತ್ರಿ, ಗೃಹ ಸಚಿವ ಅಥವಾ ಯಾವುದೇ ಇತರ ಸಚಿವರು ಅಥವಾ ಅಧಿಕಾರಿಗಳ ಗಮನ ಸೆಳೆಯಲು ನಾನು ಮುಂದಾಗಿರಲಿಲ್ಲ ಎಂದು ಕೌರ್ ಹೇಳಿದ್ದನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.

ಈ ಸಂದರ್ಭದಲ್ಲಿ ಆರೋಪಿ ಸಜ್ಜನ್ ಕುಮಾರ್ ಅಳಿಯ, ಮತ್ತೊಬ್ಬ ಆರೋಪಿ ಬಲ್ವಾನ್ ಖೋಕರ್ ಪರ ವಕೀಲ ಎಸ್.ಎ. ಹಶ್ಮಿಯವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ 69ರ ಹರೆಯದ ಸಾಕ್ಷಿ, ತನ್ನ ಹೇಳಿಕೆ ಬೇಕೆಂದು ಸಿಬಿಐ ಸಂಪರ್ಕಿಸುವ ತನಕ ಅದರ ಬಗ್ಗೆ ತಿಳಿದೇ ಇರಲಿಲ್ಲ ಎಂದರು.

ಪಾಟೀ ಸವಾಲಿನ ಹೊತ್ತಿನಲ್ಲಿ ಉತ್ತರಿಸಿದ ಅವರು, ಆ ದುರದೃಷ್ಟ ದಿನದಂದು ಜನ ಸಮೂಹವೊಂದು ನನ್ನ ಮೂವರು ಸಹೋದರರಾದ ನರೇಂದರ್ ಪೌಲ್, ರಘುವೀರ್ ಸಿಂಗ್ ಮತ್ತು ಕುಲದೀಪ್ ಸಿಂಗ್‌ರನ್ನು ಜೀವಂತ ಸುಟ್ಟು ಹಾಕಿ ಕೊಲ್ಲುತ್ತಿದ್ದುದನ್ನು ನಾನು ನೋಡಿದ್ದೇನೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಸಜ್ಜನ್ ಕುಮಾರ್, ಅವರ ಅಳಿಯ ಖೋಕರ್ ಮತ್ತು ಇನ್ನೊಬ್ಬ ಆರೋಪಿ ಗಿರಿಧಾರಿ ಲಾಲ್ ಅವರನ್ನು ಗುರುತು ಹಿಡಿದ್ದಾರೆ. ಇವರು ಗಲಭೆ ನಿರತರಾಗಿದ್ದುದನ್ನು ನಾನು ನೋಡಿದ್ದೇನೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.

1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ ಸಿಖ್ ವಿರೋಧಿ ಗಲಭೆ ಉಂಟಾಗಿತ್ತು. ಇದರಲ್ಲಿ ಸಜ್ಜನ್ ಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ