ಕೊಲ್ಲುವ ಯಮನಿಗಿಂತ ಕಾಯುವ ದೇವರು ದೊಡ್ಡವನು ಎಂಬುದಕ್ಕೆ ಸಾಕ್ಷಿ ಎಂಬಂತೆ ವೇಗವಾಗಿ ಚಲಿಸುತ್ತಿದ್ದ ಬಸ್ನ ಕಿಟಕಿಯಿಂದ ಹೊರಬಿದ್ದ 5 ವರ್ಷದ ಕಂದಮ್ಮವೊಂದು ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ನಡೆದಿದೆ.
ಆಯ ತಪ್ಪಿ ಕೆಳಗೆ ಬಿದ್ದರೆ ಸೊಂಟ, ಮೂಳೆ ಮುರಿದುಕೊಳ್ಳುವುದು ಗ್ಯಾರಂಟಿ, ಅದರಲ್ಲೂ ಮಗುವೊಂದು ಕಿಟಕಿಯಿಂದ ಕೆಳಗೆ ಬಿದ್ದರೂ ಪ್ರಾಣಾಪಾಯದಿಂದ ಪಾರಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಜೀವರಾಮ ದೇವಸಿ, ಪತ್ನಿ ಅಂಬುದೇವಿ ಅವರು ಪುಣೆಯಿಂದ ರಾಜಸ್ತಾನಕ್ಕೆ ಲಕ್ಸುರಿ ಬಸ್ ಮೂಲಕ ವಾಪಸಾಗುತ್ತಿದ್ದರು. ಪ್ರಯಾಣದ ವೇಳೆ ಮಗ ಸಂದೀಪನನ್ನು ತೊಡೆಯ ಮೇಲಿಟ್ಟುಕೊಂಡು ನಿದ್ರೆಗೆ ಶರಣಾಗಿದ್ದಾರೆ. ಆದರೆ ಕಿಟಕಿ ತೆರೆದಿದ್ದರಿಂದ ಮಗು ಬಸ್ನ ಕಿಟಕಿ ಏರಿ ಆಯತಪ್ಪಿ ಕೆಳಗೆ ಬಿದ್ದಿತ್ತು.
ಕೂಡಲೇ ವಿಷಯ ತಿಳಿದು ಬಸ್ ನಿಲ್ಲಿಸಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.