ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಿಮೋಟ್ ಕಂಟ್ರೋಲ್ ಮೂಲಕ ಪುಂಡಾನೆಗಳ ನಿಯಂತ್ರಣ! (remote-control for elephants | Zachariah Matthew | Violent elephants | Kerala)
Bookmark and Share Feedback Print
 
ಆಗಾಗ ಪೋಕರಿ ಆನೆಗಳಿಂದಾಗಿ ಸಾಕಷ್ಟು ಜೀವ ಹಾನಿಯಾಗುತ್ತಿರುವುದನ್ನು ಮನಗಂಡಿರುವ ಮುಂಬೈಯ ಇಂಜಿನಿಯರ್ ಒಬ್ಬರು, ಪುಂಡಾನೆಗಳನ್ನು ನಿಯಂತ್ರಿಸಲು ರಿಮೋಟ್ ಕಂಟ್ರೋಲ್ ಸಿದ್ಧಪಡಿಸಿದ್ದಾರೆ.

ಈ ರಿಮೋಟ್ ಕಂಟ್ರೋಲ್ ಸಾಧನ ತಯಾರಿಸಿ ವರ್ಷವೇ ಕಳೆದಿದೆ. ಈಗಾಗಲೇ ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಇತ್ತೀಚೆಗೆ ತಿರುಮಲಕ್ಕೂ ಇದನ್ನು ತರಿಸಿಕೊಳ್ಳಲಾಗಿದೆ. ತಿರುಪತಿ ಜಾತ್ರೆಯ ಸಂದರ್ಭದಲ್ಲಿ ಆನೆಗಳನ್ನು ಬಳಕೆ ಮಾಡುತ್ತಿರುವುದರಿಂದ ಇದು ಉಪಯೋಗಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ನಿಯಂತ್ರಣ ಹೇಗೆ?
ಸುಮಾರು 25ರಿಂದ 40 ಸಾವಿರ ರೂಪಾಯಿಗಳಿಗೆ ದೊರಕುವ ಏಳು ಕೇಜಿ ತೂಕದ ಈ ರಿಮೋಟ್ ಕಂಟ್ರೋಲ್ ಪರಿಕರವನ್ನು ಆನೆಯ ಹಿಂದಿನ ಕಾಲಿಗೆ ಫಿಕ್ಸ್ ಮಾಡಲಾಗುತ್ತದೆ. ಇದರಿಂದ ಆನೆಗೆ ಯಾವುದೇ ತೊಂದರೆಯಾಗುವುದಿಲ್ಲ.

ಸುಮಾರು 100ರಿಂದ 150 ಅಡಿ ದೂರದಿಂದಲೇ ಆನೆಯನ್ನು ನಿಯಂತ್ರಿಸಲು ರಿಮೋಟ್ ಮೂಲಕ ಸಾಧ್ಯವಾಗುತ್ತದೆ. ಜನಜಂಗುಳಿಯಲ್ಲಿ ಆನೆಗೆ ಮದ ಬಂದಲ್ಲಿ ನಿಂತಲ್ಲಿಂದ ಬೇರೆಡೆ ಕದಲದಂತೆ ಈ ಸಾಧನ ಮಾಡುತ್ತದೆ ಎನ್ನುತ್ತಾರೆ ಇದರ ಸಂಶೋಧಕ ಜಚಾರಿಯಾ ಮ್ಯಾಥ್ಯೂ.

ಆನೆಗೆ ಮದ ಬರುವುದು ಅಪರೂಪ. ಹಾಗೆ ಮದ ಬಂದ ಕೂಡಲೇ ಬಹುತೇಕ ಸಂದರ್ಭಗಳಲ್ಲಿ ಅದು ಆಕ್ರೋಶಗೊಂಡು ಮೊದಲು ಬಲಿ ತೆಗೆದುಕೊಳ್ಳುವುದು ಮಾವುತನನ್ನು. ಆದರೆ ಇದರಿಂದ ಹೆಚ್ಚಿನ ಅವಘಢಗಳನ್ನು ತಪ್ಪಿಸಬಹುದು.

ದೇವಸ್ಥಾನಗಳಲ್ಲಿನ ಜಾತ್ರೆಗಳ ಸಂದರ್ಭದಲ್ಲಿ ಲಕ್ಷಾಂತರ ಮಂದಿ ನೆರೆದಿರುವಾಗ ಮದವೇರಿದ ಆನೆ ರಂಪಾಟ ಆರಂಭಿಸಿದರೆ ರಿಮೋಟ್ ಕಂಟ್ರೋಲರ್ ಸಾಧನದ ಒಂದು ಬಟನ್ ಒತ್ತಿದರೆ ಆನೆ ಮಿಸುಕಾಡಲೂ ಆಗದು. ಅದು ಹಗ್ಗದಿಂದ ಎಳೆದು ನಿಲ್ಲಿಸುವ ರೀತಿಯಲ್ಲಿ ಕಾರ್ಯಾಚರಿಸುತ್ತದೆ.

ಆನೆಯ ಕಾಲಿಗೆ ಈ ಸಾಧನವನ್ನು ಸಿಕ್ಕಿಸಬೇಕಾಗುತ್ತದೆ. ಒಳಗೆ ಚರ್ಮದ ಪದರುಗಳಿರುವುದರಿಂದ ಆನೆಯ ದೇಹಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ನಡೆದಾಡಲೂ ಅಡ್ಡಿಯಿಲ್ಲ. ಇದನ್ನು ಸ್ಕ್ರೂಗಳ ಮೂಲಕ ಫಿಕ್ಸ್ ಮಾಡಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ