ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ಶಕ್ತಿಗಳು ನಮ್ಮ ಸಮಾಜದ ಭಾಗ: ನಿತೀಶ್ ಕುಮಾರ್ (Naxal | Nitish Kumar | Bihar | Maoists)
Bookmark and Share Feedback Print
 
ನಕ್ಸಲರು ಹಿಂಸಾಚಾರದ ಮಾರ್ಗವನ್ನು ಅನುಸರಿಸುತ್ತಿರುವ ಹೊರತಾಗಿಯೂ ಅವರು ನಮ್ಮ ಸಮಾಜ ಭಾಗವಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾವೋವಾದಿಗಳನ್ನು ದಮನಿಸಲು ಸಮಗ್ರ ಹೋರಾಟದ ಅಗತ್ಯವಿದೆ ಎಂದಿದ್ದಾರೆ.

ಪ್ರಧಾನ ಮಂತ್ರಿಯವರು ಕರೆದಿದ್ದ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ನಿತೀಶ್ ಕುಮಾರ್ ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ್ದಾರೆ. ನಕ್ಸಲ್ ಸಮಸ್ಯೆಯನ್ನು ಕೊನೆಗಾಣಿಸಲು ಅಗತ್ಯ ಸಹಕಾರವನ್ನು ರಾಜ್ಯಗಳಿಗೆ ನೀಡಿಲ್ಲ ಎನ್ನುವುದು ಅವರ ಆರೋಪ.

ಎಡರಂಗದ ತೀವ್ರಗಾಮಿಗಳ ವಿರುದ್ಧ ಸಂಘಟಿತ ಹೋರಾಟದ ಅಗತ್ಯವನ್ನು ಒತ್ತಿ ಹೇಳಿರುವ ಅವರು, ಬಲವಂತದಿಂದ ನಡೆಯುತ್ತಿರುವ ಕಾರ್ಯಾಚರಣೆಗಳಿಂದ ನಕ್ಸಲರು ಮತ್ತಷ್ಟು ಪ್ರತ್ಯೇಕಗೊಳ್ಳುವುದಲ್ಲದೆ, ಬಂಡುಕೋರ ಸಂಘಟನೆಯಲ್ಲಿನ ಕಾರ್ಯಕರ್ತರು ನಾಯಕರಾಗಿ ಹೊರ ಹೊಮ್ಮುತ್ತಾರೆ. ಇದರಿಂದ ನಿಜವಾದ ಸಮಸ್ಯೆ ಬಗೆಹರಿಯುವ ಬದಲು ಮತ್ತಷ್ಟು ಬಿಗಡಾಯಿಸುತ್ತದೆ ಎಂದರು.

ತನ್ನ ಸರಕಾರವು ಕೇಂದ್ರ ಅರೆ ಸೇನಾ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಸಾಕಷ್ಟು ಬೇಡಿಕೆಗಳನ್ನು ಮುಂದಿಟ್ಟ ಹೊರತಾಗಿಯೂ ಕೇಂದ್ರ ಸರಕಾರವು ಈ ಬಗ್ಗೆ ಗಮನ ಹರಿಸಿಲ್ಲ. ಇದುವರೆಗೂ ಕೇಂದ್ರವು ಸಹಕಾರ ನೀಡಿಲ್ಲ ಎಂದು ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.

ನಾನು ಮನವಿ ಮಾಡಿಕೊಂಡ ನಂತರ ಇತರ ರಾಜ್ಯಗಳಲ್ಲಿ ಈ ಪಡೆಗಳನ್ನು ಹೆಚ್ಚು ಮಾಡಲಾಗಿದೆ. ಆದರೆ ಬಿಹಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಅದೇ ರೀತಿಯಲ್ಲಿ ಪಡೆಗಳನ್ನು ಮುಂದುವರಿಸಲಾಗಿದೆ ಎಂದು ಕೇಂದ್ರದ ಗಮನ ಸೆಳೆಯಲು ಯತ್ನಿಸಿದ್ದಾರೆ.

ಒರಿಸ್ಸಾ, ಛತ್ತೀಸ್‌ಗಢ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಬಿಹಾರ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಉಳಿದಂತೆ ನಕ್ಸಲ್ ಪೀಡಿತ ರಾಜ್ಯಗಳಾದ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿರುವ ಕಾರಣ ರಾಜ್ಯಪಾಲರು ಹಾಗೂ ಪಶ್ಚಿಮ ಬಂಗಾಲದಿಂದ ಆರೋಗ್ಯ ಸಚಿವರು ಸಭೆಗೆ ಆಗಮಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ