ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮನ್ನು ಕಾಂಡೋಮ್‌ಗಳಂತೆ ಬಳಸಿದರು: ದಯಾ ನಾಯಕ್ (Daya Nayak | Mumbai | MCOCA | Ketan Tirodkar)
Bookmark and Share Feedback Print
 
ಸರ್ವೋಚ್ಚ ನ್ಯಾಯಾಲಯದಿಂದ ರಿಲೀಫ್ ಪಡೆದುಕೊಂಡಿರುವ ಕಾರ್ಕಳ ಮೂಲದ ಮುಂಬೈ ಎನ್‌ಕೌಂಟರ್ ಸ್ಪೆಷಲಿಷ್ಟ್ ದಯಾ ನಾಯಕ್ ಹೇಳಿರುವ ಮಾತಿದು. ನಮ್ಮನ್ನು ಹಿರಿಯ ಅಧಿಕಾರಿಗಳು ಕಾಂಡೋಮ್‌ಗಳಂತೆ ಬಳಸಿ ಎಸೆದರು, ಇದೀಗ ನ್ಯಾಯ ಸಿಕ್ಕಿರುವುದರಿಂದ ಸಂತೋಷವಾಗಿದೆ, ಸತ್ಯಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.

ಭೂಗತ ದೊರೆಗಳ ಜತೆ ದಯಾ ನಾಯಕ್ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ದಾಖಲಿಸಿದ್ದ ಪ್ರಕರಣವನ್ನು ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆರೋಪಗಳು ವ್ಯವಸ್ಥಿತವಾಗಿಲ್ಲ ಎಂಬುದೇ ಸುಪ್ರೀಂ ನೀಡಿರುವ ಕಾರಣ.
PR

ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ ನ್ಯಾಯಾಲಯವು ಆರಂಭಿಸಿದ್ದ ವಿಚಾರಣೆಯಲ್ಲಿ ಬಾಂಬೆ ಹೈಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ 2007ರಲ್ಲಿ ದಯಾ ನಾಯಕ್ ಅಪೆಕ್ಸ್ ಕೋರ್ಟ್ ಮೆಟ್ಟಿಲೇರಿದ್ದರು. ಅದಕ್ಕೂ ಮೊದಲು ಅವರನ್ನು ಮಹಾರಾಷ್ಟ್ರ ಸರಕಾರವು ಸೇವೆಯಿಂದ ಅಮಾನತುಗೊಳಿಸಿತ್ತು.

ನಾಯಕ್ ಮಾಜಿ ಗೆಳೆಯ ಹಾಗೂ ಪತ್ರಕರ್ತ ಕೇತನ್ ತಿರೋಡ್ಕರ್ ನೀಡಿದ್ದರು. ಆದರೆ ಅವರು ಸರಕಾರದಿಂದ ಮುಂಚಿತವಾಗಿ ಅನುಮತಿ ಪಡೆಯದೇ ಇರುವುದರಿಂದ ಪ್ರಕರಣವನ್ನು ವಜಾಗೊಳಿಸಲಾಗಿದೆ ಎಂದು ನಾಯಕ್ ವಕೀಲ ಶಿವಾಜಿ ಜಾಧವ್ ತಿಳಿಸಿದ್ದಾರೆ.

ಸತ್ಯಕ್ಕೆ ಜಯ ಸಿಕ್ಕಿದೆ...
ನನಗೆ ಛೋಟಾ ಶಕೀಲ್ ಜತೆ ಸಂಬಂಧ ಇದೆ, ದಾವೂದ್ ಇಬ್ರಾಹಿಂ ಗ್ಯಾಂಗಿನ ಸದಸ್ಯರನ್ನು ಹೊಡೆದುರುಳಿಸುತ್ತಿದ್ದೆ, ನಕಲಿ ಎನ್‌ಕೌಂಟರುಗಳನ್ನು ನಡೆಸುತ್ತಿದ್ದೆ ಎಂದೆಲ್ಲಾ ಆರೋಪಗಳನ್ನು ಹೊರಿಸಲಾಗಿತ್ತು. ನನ್ನ ಜನಪ್ರಿಯತೆಯನ್ನು ಸಹಿಸಲಾಗದೆ ಮಾಡಿದ್ದ ಆರೋಪಗಳಿವು. ಅವೆಲ್ಲದರಲ್ಲೂ ನನಗೆ ಇಂದು ಜಯ ಸಿಕ್ಕಿದೆ ಎಂದು 80ಕ್ಕೂ ಹೆಚ್ಚು ಪಾತಕಿಗಳನ್ನು ಎನ್‌ಕೌಂಟರ್ ಮಾಡಿರುವ ನಾಯಕ್ ಪ್ರತಿಕ್ರಿಯಿಸಿದ್ದಾರೆ.

ಸತ್ಯಕ್ಕೆ ಕೊನೆಗೂ ಜಯ ಸಿಕ್ಕಿದೆ. ಛೋಟಾ ಶಕೀಲ್ ಏಜೆಂಟರು ಮತ್ತು ಆತನ ಗ್ಯಾಂಗಿನವರ ಯತ್ನಗಳು ನ್ಯಾಯಾಂಗದ ಎದುರು ಮಹತ್ವ ಪಡೆದಿಲ್ಲ. ನನ್ನ ವಿರುದ್ಧದ ಆರೋಪಗಳು ಸುಳ್ಳು ಎಂಬುದು ಕೊನೆಗೂ ಸಾಬೀತಾಗಿದೆ. ಇದರಿಂದ ನಿಜಕ್ಕೂ ನಾನು ನಿಟ್ಟುಸಿರು ಬಿಟ್ಟಿದ್ದೇನೆ, ಸಂತಸಗೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕಾಂಡೋಂಗಳಂತೆ ಬಳಸಿದರು...
ಭೂಗತ ಪಾತಕಿಗಳನ್ನು ಎನ್‌ಕೌಂಟರ್ ನಡೆಸಿ ಭಾರೀ ಹೆಸರು ಗಳಿಸಿದ ಹಲವರ ಮಾತಿನಂತೆ ನಾಯಕ್ ಕೂಡ ಇದೇ ರೀತಿ ಹೇಳಿದ್ದಾರೆ.

ಎನ್‌ಕೌಂಟರ್‌ಗಳಲ್ಲಿ ಎತ್ತಿದ ಕೈಗಳಾಗಿದ್ದವರಲ್ಲಿ ಕೆಲವರು ಈಗಾಗಲೇ ಹೋಗಿ ಬಿಟ್ಟಿದ್ದಾರೆ, ಕೆಲವರನ್ನ ವ್ಯವಸ್ಥಿತವಾಗಿ ಮುಗಿಸಲಾಗಿದೆ. ಉಳಿದವರು ಎಲ್ಲೋ ಬಾರುಗಳಲ್ಲಿ ಕಂಠಪೂರ್ತಿ ಅಗ್ಗದ ಸಾರಾಯಿ ಕುಡಿಯುತ್ತಾ ಸಾವಿನ ಭೀತಿಯಲ್ಲಿ ದಿನ ದೂಡುತ್ತಿದ್ದಾರೆ.

ಈ ಬಗ್ಗೆ ಮಾತಿಗಿಳಿಯುವ ನಾಯಕ್, ನಾನು ತುಂಬಾ ಸಮಯ ಹಾಗೆ ಸುಮ್ಮನೆ ಕುಳಿತಿರಲು ಸಾಧ್ಯವಿರಲಿಲ್ಲ. ಕ್ರೂರ ಪಾತಕಿಗಳು ನನಗಾಗಿ ಹುಡುಕಾಟ ನಡೆಸುತ್ತಿದ್ದರು. ಹಾಗಾಗಿ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ನಾನು ಮಾಡಿದ ಎನ್‌ಕೌಂಟರುಗಳಿಗೆ ಕಾರಣರು ಯಾರು ಎಂಬುದನ್ನು ಹೇಳಬೇಕಾಗಿತ್ತು ಎನ್ನುತ್ತಾರೆ.

ನಮ್ಮನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಕಾಂಡೋಮ್‌ಗಳಂತೆ ಬಳಸಿ, ಎಸೆದರು. ಭೂಗತ ಜಗತ್ತನ್ನು ಮಟ್ಟ ಹಾಕುವಲ್ಲಿ ನಮ್ಮನ್ನು ಬೇಕಾದ ರೀತಿಗಳಲ್ಲಿ ಬಳಸಿಕೊಳ್ಳಲಾಗಿತ್ತು. ಈಗ ಸಂಬಂಧಪಟ್ಟವರಿಗೆ ನಮ್ಮನ್ನು ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ