ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಗುಂಡಿನ ಮತ್ತು' ಸಿಆರ್‌ಪಿಎಫ್‌ನ 6 ಸಿಬ್ಬಂದಿಗಳು ಬಲಿ (CRPF constable | Jharkhand | shot dead | Harpinder Singh | Bisahu Singh)
Bookmark and Share Feedback Print
 
ಸಿಆರ್‌ಪಿಎಫ್ ಸಿಬ್ಬಂದಿಗಳ ಜೀವಕ್ಕೆ ಬೆಲೆಯೇ ಇಲ್ಲ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬ ಕುಡಿದ ಆಮಲಿನಲ್ಲಿ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ ಪರಿಣಾಮ ತನ್ನದೇ ಆರು ಸಹೋದ್ಯೋಗಿಗಳನ್ನು ಬಲಿ ತೆಗೆದುಕೊಂಡ ಆಘಾತಕಾರಿ ಘಟನೆ ಶುಕ್ರವಾರ ರಾತ್ರಿ ಜಾರ್ಖಂಡ್‌ನ ಸಾರೈಕೆಲಾ ಜಿಲ್ಲೆಯಲ್ಲಿ ನಡೆದಿದೆ.

ಸಿಆರ್‌ಪಿಎಫ್ 196 ಬೆಟಾಲಿಯನ್‌ನ ಕಾನ್ಸ್‌ಟೇಬಲ್ ಹರ್ಪಿಂದರ್ ಸಿಂಗ್ ಸೆಂಟ್ರಿಯಾಗಿ ಕಾರ್ಯನಿರ್ವಹಿಸಲು ಆಗಮಿಸಿದ್ದ. ಆದರೆ ಈ ಸಂದರ್ಭದಲ್ಲಿ ಸಿಂಗ್ ಕಂಠಮಟ್ಟ ಕುಡಿದು ಬಂದಿದ್ದ, ಅಷ್ಟೇ ಅಲ್ಲ ಸಹಾಯಕ ಕಮಾಂಡೆಂಟ್ ಸೇರಿದಂತೆ ಆರು ಮಂದಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ಹಿರಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸತತ ನಾಲ್ಕು ಗಂಟೆಗಳ ಕಾಲ ನಡೆಸಿದ ಗುಂಡಿನ ದಾಳಿಗೆ ಅಸಿಸ್ಟೆಂಟ್ ಕಮಾಂಡೆಂಟ್ ಬಿಷ್ಣು ಸಿಂಗ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ