ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಮರೆತುಬಿಡಿ, ಮಸೀದಿ ನಿರ್ಮಿಸುತ್ತೇವೆ: ವಿಎಚ್‌ಪಿ (Ayodhya | VHP | Babri Masjid | Muslims)
Bookmark and Share Feedback Print
 
ಅಯೋಧ್ಯೆಯಿಂದ ಹೊರಗಡೆ ಮಸೀದಿಯನ್ನು ಸ್ಥಳಾಂತರಿಸಲು ಮತ್ತು ದಾಳಿಕೋರರ ಹೆಸರುಗಳ ಮಸೀದಿಗಳನ್ನು ನಿರ್ಮಿಸದೇ ಇರಲು ಮುಸ್ಲಿಮರು ನಿರ್ಧರಿಸಿದಲ್ಲಿ ಹಿಂದೂಗಳು ಕರಸೇವೆಯ ಮೂಲಕ ಮಸೀದಿಗಳನ್ನು ಕಟ್ಟಿ ಕೊಡಲು ಸಿದ್ಧ ಎಂದು ವಿಶ್ವ ಹಿಂದೂ ಪರಿಷತ್ ಹೇಳಿಕೊಂಡಿದೆ.

18 ವರ್ಷಗಳ ನಂತರ ದೇಗುಲಗಳ ನಗರಿಯಲ್ಲಿ ಮೂರು ದಿನಗಳ ಕಾಲ ನಡೆದ ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಈ ಪ್ರಸ್ತಾಪವನ್ನು ಮುಂದಿಡುವ ಬಗ್ಗೆ ನಿರ್ಣಯಿಸಲಾಗಿದೆ.

ರಾಮ ಜನ್ಮಭೂಮಿಯಲ್ಲಿದ್ದ ಶ್ರೀರಾಮ ಮಂದಿರವನ್ನು ಧ್ವಂಸಗೊಳಿಸಿ ಆ ಜಾಗದಲ್ಲಿ 16ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಬಾಬರ್ ಕಟ್ಟಿದ್ದ ಬಾಬ್ರಿ ಮಸೀದಿಯನ್ನು 1992ರಲ್ಲಿ ಹಿಂದೂ ಕರಸೇವಕರು ಉರುಳಿಸಿದ್ದರು. ಇದರಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಪ್ರಸಕ್ತ ಪ್ರಕರಣವೀಗ ನ್ಯಾಯಾಲಯದಲ್ಲಿದೆ.

ರಾಮ ಚರಿತಮಾನಸದಲ್ಲಿರುವಂತೆ ಅಯೋಧ್ಯೆಯ ಶಾಸ್ತ್ರೀಯ ಸೀಮೆಯಲ್ಲಿ ಮಸೀದಿಗಳು ಇರಬಾರದು. ಅಂದರೆ 16ನೇ ಶತಮಾನದಲ್ಲಿ ನಿರ್ಮಾಣವಾದ ಬಾಬ್ರಿ ಮಸೀದಿ ಕೂಡ ನಗರದ ವ್ಯಾಪ್ತಿಯಲ್ಲಿರಬಾರದು. ಅಲ್ಲದೆ ಯಾವುದೇ ವಿದೇಶಿ ದಾಳಿಕೋರರ ಹೆಸರುಗಳನ್ನು ಭಾರತದ ಯಾವುದೇ ಭಾಗದ ಮಸೀದಿಗಳಿಗೆ ಇಡಬಾರದು ಎಂಬ ಬೇಡಿಕೆಯನ್ನು ಮುಂದಿಡಲು ವಿಶ್ವ ಹಿಂದೂ ಪರಿಷತ್ ತನ್ನ ಸಭೆಯಲ್ಲಿ ತೀರ್ಮಾನಿಸಿದೆ.

ಈ ವಿವೇಕಯುತ ಸಲಹೆಗೆ ಮುಸ್ಲಿಮರು ಒಪ್ಪಿದಲ್ಲಿ, ಅಯೋಧ್ಯೆಯಿಂದ ಮಸೀದಿಯನ್ನು ಸ್ಥಳಾಂತರಗೊಳಿಸಲು ಸಮ್ಮತಿ ಸೂಚಿಸಿದಲ್ಲಿ, ಹಿಂದೂಗಳು ಕರಸೇವೆಯ ಮೂಲಕ ಮಸೀದಿ ನಿರ್ಮಿಸಿಕೊಡಲು ಸಿದ್ಧ ಎನ್ನುವುದು ವಿಎಚ್‌ಪಿ ಪ್ರಸ್ತಾಪ.

ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಪ್ರಬಂಧ್ ಸಮಿತಿ ಸಭೆ ಈ ಹಿಂದೆ ಅಯೋಧ್ಯೆಯಲ್ಲಿ ನಡೆದಿರುವುದು ಬಾಬ್ರಿ ಮಸೀದಿ ಧ್ವಂಸದ ಮೂರು ತಿಂಗಳ ಮೊದಲು. ಹಾಗಾಗಿ ಇದೀಗ ನಡೆದಿರುವ ಸಭೆ ಸರಕಾರಿ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ವಿಎಚ್‌ಪಿ ಅಯೋಧ್ಯೆ ಘಟಕದ ಮುಖ್ಯಸ್ಥ ಶರದ್ ಶರ್ಮಾ, ನಮ್ಮ ನಿಲುವು ಸ್ಪಷ್ಟವಾಗಿದೆ. ಕಳೆದ 20 ವರ್ಷಗಳಿಂದ ಟೆಂಟ್ ಮತ್ತು ಗೂಡಿನಂತಹ ಕಟ್ಟಡದಲ್ಲಿರುವ ಶ್ರೀರಾಮನಿಗೆ ದೇವಾಲಯ ನಿರ್ಮಿಸುವ ಅಗತ್ಯವಿದೆ. ಈ ವಿಚಾರದಲ್ಲಿ ನಾವು ಯಾವುದೇ ರಾಜಿಗೆ ಸಿದ್ಧರಿಲ್ಲ ಎಂದಿದ್ದಾರೆ.

ಈ ಸಂಬಂಧ ರಾಷ್ಟ್ರವ್ಯಾಪಿ ಚಳವಳಿಯನ್ನು ಆಗಸ್ಟ್ 16ರಿಂದ 'ಜಾಗರಣ ಯಾತ್ರೆ' ಎಂಬ ಹೆಸರಿನಲ್ಲಿ ಆರಂಭವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ