ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನ ಜತೆಗಿನ ಮಾತುಕತೆ ವಿಫಲವಾಗಿಲ್ಲ: ಭಾರತ (Indo-Pak talks | Nirupama Rao | GK Pillai | ISI)
Bookmark and Share Feedback Print
 
ಪಾಕಿಸ್ತಾನದ ಓತಪ್ರೋತ ಟೀಕೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್, ಭಾರತ-ಪಾಕ್ ಮಾತುಕತೆ ಕುಸಿದು ಬಿದ್ದಿದೆ ಎಂಬುದನ್ನು ನಿರಾಕರಿಸುವುದರ ಜತೆ ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಮುಂದುವರಿಯಬೇಕು ಎಂದಿದ್ದಾರೆ.

ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿಯವರು ಹೇಳಿರುವಂತೆ ಭಾರತದ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈಯವರ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಬೆಂಬಲಿಸಿಲ್ಲ. ಪಿಳ್ಳೈ ಕುರಿತ ಪಾಕ್ ಹೇಳಿಕೆಯ ಕುರಿತು ಭಾರತವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ರಾವ್ ಸ್ಪಷ್ಟಪಡಿಸಿದರು.

ಅಲ್ಲದೆ ಪಿಳ್ಳೈ ಹೇಳಿಕೆಯನ್ನು ರಾವ್ ಸಮರ್ಥಿಸಿಕೊಂಡಿದ್ದಾರೆ. ಮುಂಬೈ ದಾಳಿಯ ಹಿಂದೆ ಪಾಕ್ ಬೇಹುಗಾರಿಕಾ ದಳ ಐಎಸ್ಐ ಪ್ರಮುಖ ಪಾತ್ರವಹಿಸಿದೆ ಎನ್ನುವುದರ ಬಗ್ಗೆ ಭಾರತವು ಭಾರೀ ಕಳವಳ ಹೊಂದಿದೆ ಎಂದು ಸಂದರ್ಶನವೊಂದರಲ್ಲಿ ಪಾಕಿಸ್ತಾನದತ್ತ ಗಟ್ಟಿಯಾಗಿ ಬೆಟ್ಟು ಮಾಡಿ ತೋರಿಸಿದ್ದಾರೆ.

ಐಎಸ್ಐ ಮುಂಬೈ ದಾಳಿಯಲ್ಲಿ ಸಕ್ರಿಯ ಪಾತ್ರ ವಹಿಸಿತ್ತು ಎಂಬುದನ್ನು ಲಷ್ಕರ್ ಇ ತೋಯ್ಬಾ ಏಜೆಂಟ್ ಡೇವಿಡ್ ಹೆಡ್ಲಿಯನ್ನು ಅಮೆರಿಕಾದಲ್ಲಿ ರಾಷ್ಟ್ರೀಯ ತನಿಖಾ ದಳವು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ಪಿಳ್ಳೈ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಪಿಳ್ಳೈಯವರನ್ನು ಖುರೇಷಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆ ಕುಸಿದು ಬಿದ್ದಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ರಾವ್, ದೃಷ್ಟಿಕೋನಗಳಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು; ಆದರೆ ಇದು ಜೋಡಿಸಲಾಗದ ಅಂತರವಲ್ಲ. ಖಂಡಿತಾ ಮಾತುಕತೆ ಮುಂದುವರಿಯಬಹುದು ಎಂದಿದ್ದಾರೆ.

ಅದೇ ಹೊತ್ತಿಗೆ ಸಚಿವ ಕೃಷ್ಣ ಅವರ ಬಗ್ಗೆ ಖುರೇಷಿ ಟೀಕಿಸುತ್ತಿರುವುದು ಅಚ್ಚರಿ ತಂದಿದೆ ಎಂದು ರಾವ್ ತಿಳಿಸಿದ್ದಾರೆ. ಭಾರತಕ್ಕಿದು ಆಘಾತಕಾರಿ ವಿಚಾರ. ಖುರೇಷಿಯವರ ಈ ಹೇಳಿಕೆಗೆ ಯಾವುದೇ ನಿಜವಾದ ಕಾರಣಗಳು ಕಾಣಿಸುತ್ತಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ