ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಧಾರ್ಮಿಕ ಭಾವನೆಗಳಿಗೆ ಧಕ್ಕೆ:ಸೋನಿಯಾ ಗಾಂಧಿಗೆ ನೋಟಿಸ್ ಜಾರಿ (Congress | AICC | CJM |Bihar court | Ajay Tarkeshwar Sony)
ಧಾರ್ಮಿಕ ಭಾವನೆಗಳಿಗೆ ಧಕ್ಕೆ:ಸೋನಿಯಾ ಗಾಂಧಿಗೆ ನೋಟಿಸ್ ಜಾರಿ
ಮುಜಾಫರ್ನಗರ್, ಭಾನುವಾರ, 18 ಜುಲೈ 2010( 12:00 IST )
PTI
ಪಕ್ಷದ ಪೋಸ್ಟರ್‌ಗಳಲ್ಲಿ ದೇವತೆ ದುರ್ಗೆಯಂತೆ ಸೋನಿಯಾ ಅವರನ್ನು ಬಿಂಬಿಸಿದ ಹಿನ್ನೆಲೆಯಲ್ಲಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎನ್ನುವ ದೂರಿನ ಮೇರೆಗೆ, ಜುಲೈ 29ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರೆಗೆ ಸ್ಥಳೀಯ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ನಗರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶ್ರೀ ವಾಸ್ತವಾ,ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ್ ಮತ್ತು ಮೊರಾದಾಬಾದ್ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಜಯ್ ತಾರಕೇಶ್ವರ್ ಸೋನಿಯವರೆಗೆ ಪ್ರತ್ಯೇಕ ನೋಟಿಸ್ ಜಾರಿ ಮಾಡಿ, ಜುಲೈ 29 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದ್ದಾರೆ.
ಕಾಂಗ್ರೆಸ್ ಪೋಸ್ಟರ್‌ಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ವೃತ್ತಿಯಲ್ಲಿ ವಕೀಲರಾಗಿರುವ ಸುಧೀರ್‌ಕುಮಾರ್ ಓಝಾ 2007ರ ಜುಲೈ 22,ರಂದು ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಿದ್ದರು.
ದುರ್ಗೆಯಂತೆ ಸೋನಿಯಾ ಗಾಂಧಿಯವರನ್ನು ಚಿತ್ರಿಸಿರುವ ಪೋಸ್ಟರ್‌ಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದಲ್ಲದೇ, ಕಾಂಗ್ರೆಸ್ ಪಕ್ಷದ ಕಚೇರಿಯ ಗೋಡೆಗಳ ಮೇಲೆ ಲಗತ್ತಿಸಲಾಗಿತ್ತು.ಆದರೆ 2008ರಲ್ಲಿ ಅರ್ಜಿದಾರರ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಎಸ್.ಕೆ.ಪಾಂಡೆ ನೇತೃತ್ವದ ನ್ಯಾಯಪೀಠ ವಜಾಗೊಳಿಸಿತ್ತು.
ನಂತರ ಅರ್ಜಿದಾರರು ಜಿಲ್ಲಾ ನ್ಯಾಯಾಲಯದಲ್ಲಿ, ಸ್ಥಳೀಯ ನ್ಯಾಯಾಲಯದ ವಿರುದ್ಧ ದೂರನ್ನು ದಾಖಲಿಸಿದ್ದರು. ಇದೀಗ ಅರ್ಜಿ ವಿಚಾರಣೆಗೆ ಬಂದಿದ್ದು, ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರೆಗೆ ನೋಟಿಸ್ ಜಾರಿ ಮಾಡಿದೆ..