ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ.ಬಂಗಾಳ ರೈಲು ದುರಂತಕ್ಕೆ 60 ಮಂದಿ ಬಲಿ (West Bengal | accident | train | India)
Bookmark and Share Feedback Print
 
PTI
ಭಾನುವಾರ ಮಧ್ಯರಾತ್ರಿ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಭಾರೀ ರೈಲು ಅಪಘಾತದಲ್ಲಿ 60 ಮಂದಿ ಸಾವಿಗೀಡಾಗಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

3404 ಬಾಗಲ್‌ಪುರ್-ರಾಂಚಿ ವಾನಂಚಲ್ ಎಕ್ಸ್‌ಪ್ರೆಸ್‌ನ ಹಿಂದುಗಡೆಗೆ ನ್ಯೂ ಕೂಚ್‌ಬೀಹಾರ್‌ನಿಂದ ಸೀಲ್‌ದಾಗೆ ಹೊರಟಿದ್ದ 3148 ಉತ್ತರಬಂಗಾ ಎಕ್ಸ್‌ಪ್ರೆಸ್ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಬಂಗಾಳದ ಬಿರ್‌ಬುಮ್ ಜಿಲ್ಲೆಯ ಸೈಂತಿಯಾ ರೈಲು ನಿಲ್ದಾಣದಲ್ಲಿ ಮಧ್ಯರಾತ್ತಿ 1.54ರ ಹೊತ್ತಿಗೆ ಘಟನೆ ನಡೆದಿದೆ.

ಘಟನೆಯಲ್ಲಿ 100 ಕ್ಕೂ ಹೆಚ್ಚು ಮಂದಿ ಗಾಯಾಳುವಾಗಿದ್ದು, ಇವರಲ್ಲಿ ಹೆಚ್ಚಿನವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸ್ಥಳದಿಂದ 60 ಮೃತದೇಹಗಳನ್ನು ಇದೀಗಲೇ ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಢಿಕ್ಕಿ ಹೊಡೆದ ರಭಸಕ್ಕೆ ರೈಲಿನ ಮೂರು ಬೋಗಿಗಳು ನಜ್ಜುಗುಜ್ಜಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುವಾಗಿರುವ ಬಗ್ಗೆ ವರದಿಯಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ರೈಲಿನ ಬೋಗಿಯೊಂದು ಮೇಲಿನ ಕಾಲುಸೇತುವೆಗೂ ಹಾನಿಯನ್ನುಂಟುಮಾಡಿದೆ.

ಗಾಯಾಳುಗಳನ್ನು ಸ್ಥಳೀಯ ಸುರಿ ಮತ್ತ ಸೈಂತಿಯಾ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು, ಪರಿಹಾರ ಕಾರ್ಯಾಚರಣೆಗೆ ಬಿಎಸ್‌ಎಫ್ ಜವಾನರಿಗೆ ಸ್ಥಳೀಯರು ಕೂಡಾ ನೆರವಾಗುತ್ತಿದ್ದಾರೆ.

ಉತ್ತರಬಂಗಾ ಎಕ್ಸ್‌ಪ್ರೆಸ್‌ನ ಡ್ರೈವರ್ ಆಗಿರುವ ಎಮ್. ಸಿ. ಡೇ ಮತ್ತು ‌ಕೂಡಾ ದುರಂತದಲ್ಲಿ ಮೃತಪಟ್ಟಿದ್ದಾರೆ. ಆದರೆ ಸಹಾಯಕ ಚಾಲಕ ಎನ್.ಕೆ. ಮಂಡಲ್ ಬಚಾವಾಗಿದ್ದಾರೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ವಾನಚಲ್ ಎಕ್ಸ್‌ಪ್ರೆಸ್‌ನ ಗಾರ್ಡ್‌ ಎ. ಮುಖರ್ಜಿ ಕೂಡಾ ಅಪಘಾತದಲ್ಲಿ ಸಾವೀಗೀಡಾಗಿದ್ದಾರೆ.

ಘಟನಾ ಸ್ಥಳಕ್ಕೆ ರೈಲ್ವೇ ಮಂತ್ರಿ ಮಮತಾ ಬ್ಯಾನರ್ಜಿ, ರೈಲ್ವೇ ಬೋರ್ಡ್ ಮುಖ್ಯಸ್ಥ ವಿವೇಕ್ ಸಹಾಯ್, ರೈಲ್ವೇ ಆರೋಗ್ಯ ವಿಭಾಗದ ಮಹಾ ನಿರ್ದೇಶಕ ಬಿ. ಕೆ. ರಾಮ್‌ಟೆಕೆ, ಪೂರ್ವ ರೈಲ್ವೇ ವಿಭಾಗದ ಜನರಲ್ ಮ್ಯಾನೇಜರ್ ವಿ.ಎನ್. ತ್ರಿಪಾತಿ ಹಾಗೂ ಮತ್ತಿತ್ತರ ಅಧಿಕಾರಿಗಳು ಧಾವಿಸಿದ್ದಾರೆ.

ಕೋಲ್ಕತ್ತಾದಿಂದ 191 ಕೀ.ಮೀ. ದೂರದಲ್ಲಿರುವ ರಾಮ್‌ಪುರ್ಹಾತ್, ಅಸನೋಲ್ ಮತ್ತು ಬುಡ್ವಾನ್ ಪ್ರದೇಶಗಳ ಪರಿಹಾರ ರೈಲುಗಳನ್ನು ಕೂಡಾ ಘಟನಾ ಸ್ಥಳಕ್ಕೆ ರವಾನಿಸಲಾಗಿದೆ.

ಎರಡು ತಿಂಗಳ ಹಿಂದೆಯಷ್ಟೇ ಮಿಡ್ನಾಪುರ್ ಜಿಲ್ಲೆಯಲ್ಲಿ ಮಾವೋವಾದಿಗಳು ರೈಲ್ವೇ ಹಳಿ ಸ್ಫೋಟಿಸಿದ ಹಿನ್ನೆಲೆಯಲ್ಲಿ ಹಳಿ ತಪ್ಪಿದ ಹೌರಾ-ಮುಂಬೈ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತದಲ್ಲಿ 160 ಮಂದಿ ಮೃತಪಟ್ಟಿದ್ದರು. ಇದೀಗ 62 ದಿನಗಳೊಳಗೆ ಮತ್ತೊಂದು ದುರಂತಕ್ಕೆ ಬಂಗಾಳ ಸಾಕ್ಷಿಯಾಗಿದೆ.

ಸಹಾಯವಾಣಿ ಸಂಖ್ಯೆ:

ಸೀಲ್‌ದಾ 033-23503535, 033-23503537
ಮಾಲ್ಡಾ 06436-222061
ಬಾಗಲ್‌ಪುರ್ 06412-4222433
ಜಮಲ್‌ಪುರ್ 063444-3101
ಸಂಬಂಧಿತ ಮಾಹಿತಿ ಹುಡುಕಿ