ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಮಾ ಭಾರತಿ ಸೇರಿಸಿಕೊಳ್ಳಲು ಅಡ್ಡಿಯೇನು?: ಆರೆಸ್ಸೆಸ್ (RSS | BJP | MG Vaidya | Jaswant Singh)
Bookmark and Share Feedback Print
 
ಉಮಾ ಭಾರತಿ, ಗೋವಿಂದಾಚಾರ್ಯ ಮತ್ತು ಸಂಜಯ್ ಜೋಷಿಯವರನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಆರೆಸ್ಸೆಸ್ ಹಿರಿಯ ನಾಯಕ ಎಂ.ಜಿ. ವೈದ್ಯ, ಪಕ್ಷವು ಜಸ್ವಂತ್ ಸಿಂಗ್‌ರನ್ನು ಬರಸೆಳೆದುಕೊಂಡದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಜಸ್ವಂತ್ ಸಿಂಗ್ ಒಬ್ಬರನ್ನೇ ಯಾಕೆ ಮರಳಿ ಸೇರಿಸಿಕೊಳ್ಳಲಾಗಿದೆ? ಸಂಜಯ್ ಜೋಷಿ, ಗೋವಿಂದಾಚಾರ್ಯ ಮತ್ತು ಉಮಾ ಭಾರತಿಯವರನ್ನು ಯಾಕೆ ಸೇರಿಸಿಕೊಂಡಿಲ್ಲ? ಈ ಮೂವರೂ ನಾಯಕರು ಕೆಲವು ತಪ್ಪುಗಳನ್ನು ಮಾಡಿರಬಹುದು. ಆದರೆ ಇದು ಜಿನ್ನಾರನ್ನು ಸ್ತುತಿಸಿದಷ್ಟು (ಅಡ್ವಾಣಿಯವರನ್ನು ಉಲ್ಲೇಖಿಸಿ) ಗಂಭೀರವಾದುದಲ್ಲ ಎಂದು ಮರಾಠಿ ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ವೈದ್ಯ ತಿಳಿಸಿದ್ದಾರೆ.

ಜಸ್ವಂತ್ ಸಿಂಗ್‌ರನ್ನು ಪಕ್ಷಕ್ಕೆ ಮರಳಿ ಸೇರ್ಪಡೆಗೊಳಿಸಿರದೇ ಇದ್ದಿದ್ದರೂ ಬಿಜೆಪಿಗೆ ಯಾವುದೇ ನಷ್ಟವಾಗುತ್ತಿರಲಿಲ್ಲ. ಆದರೆ ಉಮಾ ಭಾರತಿ, ಗೋವಿಂದಾಚಾರ್ಯ ಮತ್ತು ಜೋಷಿಯವರು ಮರಳಿದಲ್ಲಿ ಪಕ್ಷದ ಬಲವರ್ಧನೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಆ ದೇಶದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರನ್ನು ಜಾತ್ಯತೀತವಾದಿ ಎಂದಿದ್ದ ಎಲ್.ಕೆ. ಅಡ್ವಾಣಿಯವರನ್ನು ಈ ಹಿಂದೆ ತೀವ್ರವಾಗಿ ಟೀಕಿಸಿದ್ದ ವೈದ್ಯ, ಬಿಜೆಪಿ ನಾಯಕನ ಅಭಿಪ್ರಾಯವನ್ನು ಯಾರೊಬ್ಬರೂ ಒಪ್ಪಲು ಸಾಧ್ಯವಿಲ್ಲ ಎಂದಿದ್ದರು.

ಬಿಜೆಪಿಯನ್ನು ಯಾಕೆ ಗೆಲ್ಲಿಸಬೇಕು?
ಬಿಜೆಪಿಗೆ ಹಿಂದೂಗಳು ಯಾಕೆ ಓಟು ಹಾಕಬೇಕು? ಹೀಗೆಂದು ಪ್ರಶ್ನಿಸಿದ್ದು ವೈದ್ಯ. ಆರು ವರ್ಷಗಳ ಕಾಲ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಹೊರತಾಗಿಯೂ ಅಯೋಧ್ಯೆ ರಾಮ ಜನ್ಮಭೂಮಿ ವಿವಾದದಲ್ಲಿ ಹಿಂದೂಗಳಿಗೆ ನ್ಯಾಯ ಒದಗಿಸಲು ಅದಕ್ಕೆ ಸಾಧ್ಯವಾಗಿಲ್ಲ. ಜಾಗದ ಮೂಲ ಮಾಲಕರಾದವರಿಗೆ ಅದನ್ನು ಹಸ್ತಾಂತರಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ವೈದ್ಯ ಬಿಜೆಪಿಯತ್ತ ಚಾಟಿಯೇಟು ಬೀಸಿದ್ದಾರೆ.

1998ರಲ್ಲಿ ಬಿಜೆಪಿ 180 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಅವಸರದಲ್ಲಿ ಅಧಿಕಾರಕ್ಕೆ ಬಂತು. ತನ್ನ ಮೂಲ ಗುರಿಯನ್ನು ಬಿಟ್ಟು ಅದು ಮುಂದಕ್ಕೆ ಹೋಯಿತು. ಕೇವಲ 13 ತಿಂಗಳಲ್ಲೇ ಈ ಅವಧಿ ಕೊನೆಗೊಂಡಿತು. 1999ರಲ್ಲಿ ಎರಡು ಸ್ಥಾನಗಳನ್ನು ಹೆಚ್ಚು ಗೆದ್ದುಕೊಂಡಿತು. ಆದರೆ ಆ ಸರಕಾರಕ್ಕೆ ಹಿಂದೂಗಳ ಪರ ಯಾವೊಂದು ಕಾರ್ಯವನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ವೈದ್ಯ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ