ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರದ್ವಾಜ್ ಹಸ್ತಕ್ಷೇಪ ಮಿತಿಮೀರುತ್ತಿದೆ: ಬಿಜೆಪಿ ತಗಾದೆ (BJP | Karnataka | H R Bhardwaj | B S Yeddyurappa)
Bookmark and Share Feedback Print
 
ಕರ್ನಾಟಕದ ಆಡಳಿತಾತ್ಮಕ ವ್ಯವಹಾರಗಳಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹಸ್ತಕ್ಷೇಪ ಮಿತಿಮೀರುತ್ತಿದೆ ಎಂದು ಕಿಡಿಕಾರಿರುವ ಬಿಜೆಪಿ, ಅವರು ರಾಜ್ಯಕ್ಕೆ ಸಮಸ್ಯೆಯಾಗಿ ಕಾಡುತ್ತಿದ್ದಾರೆ ಮತ್ತು ಅವರಿಂದಾಗಿ ಕೆಟ್ಟ ಕಾರಣಗಳಿಗಾಗಿ ಆಡಳಿತ ಪಕ್ಷವು ಸುದ್ದಿಯಲ್ಲಿದೆ ಎಂದಿದೆ.

ರಾಜ್ಯಪಾಲರು ಒಂದು ಸಮಸ್ಯೆ. ಸಾಂವಿಧಾನಿಕವಾಗಿ ಅವರು ತನ್ನ ಮಿತಿಗಳನ್ನು ಮೀರುತ್ತಿದ್ದಾರೆ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಚೆನ್ನೈಯಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ, ಇದರಲ್ಲಿ ಸಂಪುಟ ಸಚಿವರಾದ ರೆಡ್ಡಿ ಸಹೋದರರು ಪಾಲ್ಗೊಂಡಿದ್ದಾರೆ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿ ಗದ್ದಲ ಎಬ್ಬಿಸುತ್ತಾ ವಿಧಾನಸಭಾ ಕಲಾಪವನ್ನೂ ನಡೆಯದಂತೆ ಮಾಡಿದ್ದಾರೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ರಾಜಕೀಯ ವಾತಾವರಣದ ಕುರಿತು ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರಿಂದ ಕೆಲ ಸಮಯದ ಹಿಂದೆ ಬೆನ್ನು ತಟ್ಟಿಸಿಕೊಂಡಿದ್ದ ರಾಜ್ಯಪಾಲ ಭಾರದ್ವಾಜ್ ವಿರುದ್ಧ ಕಿಡಿ ಕಾರಿರುವ ಸೀತಾರಾಮನ್, ಆಡಳಿತದಲ್ಲಿ ಅವರ ಹಸ್ತಕ್ಷೇಪ ಎಲ್ಲೆ ಮೀರುತ್ತಿದೆ; ಅವರಿಂದಾಗಿಯೇ ಗಣಿಗಾರಿಕೆ ಪ್ರಕರಣ ಉಲ್ಬಣಗೊಳ್ಳುತ್ತಿದೆ ಎಂದರು.

ಅಕ್ರಮ ಗಣಿಗಾರಿಕೆಯ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದು, ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಲಿದ್ದಾರೆ ಎಂದರು.

ಅದೇ ಹೊತ್ತಿಗೆ ಒಟ್ಟಾರೆ ಪ್ರಕರಣದಲ್ಲಿ ರೆಡ್ಡಿ ಸಹೋದರರ ಪಾತ್ರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಬಿಜೆಪಿ ನಾಯಕಿ, ಲೋಕಾಯುಕ್ತ ತನಿಖೆ ನಡೆಯಲಿದೆ; ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ಎಲ್ಲಾ ಕಡೆ ಇರುವಂತೆ ಇಲ್ಲೂ ಪಕ್ಷ ಮತ್ತು ಸರಕಾರದಲ್ಲಿ ಕೆಲವು ಸಮಸ್ಯೆಗಳಿರಬಹುದು. ಆದರೆ ಇದು ಬಿಕ್ಕಟ್ಟು ಎಂದು ಹೇಳಬೇಕಾಗಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ