ಸೋಮವಾರ ನಡೆದ ಭೀಕರ ದುರಂತದ ನಂತರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ತವರೂರಾದ ಪಶ್ಚಿಮ ಬಂಗಾಳದಲ್ಲಿಯೇ ಕಳೆದ ಎರಡು ತಿಂಗಳೊಳಗೆ ಎರಡು ಪ್ರಮುಖ ರೈಲು ದುರಂತ ಸಂಭವಿಸಿದಂತಾಗಿದೆ.
ಅಲ್ಲದೆ ದೇಶದಲ್ಲಿ ಒಟ್ಟಾರೆಯಾಗಿ ಕಳೆದ ಒಂದು ವರ್ಷದೊಳಗೆ ಆರು ಪ್ರಮುಖ ರೈಲ್ವೇ ದುರಂತ ಸಂಭವಿಸಿದೆ. ಒಟ್ಟಿನಲ್ಲಿ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.
ರಾಜ್ಯದ ಆಡಳಿತಾರೂಢ ಸಿಪಿಎಂ ಮಮತಾ ವಿರುದ್ಧ ಹರಿಹಾಯ್ದಿದ್ದು, ಘಟನೆಯ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.
ಪ್ರಮುಖ ರೈಲು ದುರಂತದ ಪಟ್ಟಿ:
ಜುಲೈ 19- 3404 ಬಾಗಲ್‌ಪುರ್-ರಾಂಚಿ ವಾನಂಚಲ್ ಎಕ್ಸ್‌ಪ್ರೆಸ್‌ನ ಹಿಂದುಗಡೆಗೆ ನ್ಯೂ ಕೂಚ್‌ಬೀಹಾರ್‌ನಿಂದ ಸೀಲ್‌ದಾಗೆ ಹೊರಟಿದ್ದ 3148 ಉತ್ತರಬಂಗಾ ಎಕ್ಸ್‌ಪ್ರೆಸ್ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ದುರ್ಘಟನೆಯಲ್ಲಿ 63 ಮಂದಿ ಬಲಿ, 100ಕ್ಕೂ ಹೆಚ್ಚು ಗಾಯಾಳು.
ಮೇ 28- ಪಶ್ಚಿಮ ಬಂಗಾಳ ಮಿಡ್ನಾಪುರ ಜಿಲ್ಲೆಯಲ್ಲಿ ನಕ್ಸಲರು ರೈಲ್ವೇ ಹಳಿ ಸ್ಫೋಟಿಸಿದ ಪರಿಣಾಮ ಹಳಿ ತಪ್ಪಿದ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತದಲ್ಲಿ 160 ಮಂದಿ ಬಲಿ.
ಮೇ 25- ಬಿಹಾರದಲ್ಲಿ ಹಳಿ ತಪ್ಪಿದ ಪ್ರಯಾಣಿಕರ ರೈಲು- 11 ಬಲಿ
ಜನವರಿ 16- ಉತ್ತರ ಪ್ರದೇಶದಲ್ಲಿ ಕಾಳಿಂದಿ ಎಕ್ಸ್‌ಪ್ರೆಸ್ ಮತ್ತು ಶ್ರಮ್‌ಶಕ್ತಿ ಎಕ್ಸ್‌ಪ್ರೆಸ್ ಪರಸ್ಪರ ಡಿಕ್ಕಿಯಾದ ಪರಿಣಾಮ ಮೂವರ ಬಲಿ.
ನವೆಂಬರ್ 14, 2009- ಜೈಪುರದಲ್ಲಿ ಹಳಿ ತಪ್ಪಿದ ಮಂಡೋರ್ ಎಕ್ಸ್‌ಪ್ರೆಸ್- 7 ಸಾವು, 50ಕ್ಕೂ ಹೆಚ್ಚು ಗಾಯಾಳು..
ಅಕ್ಟೋಬರ್ 21, 2009- ಉತ್ತರಪ್ರದೇಶದಲ್ಲಿ ಮೇವಾರ್ ಎಕ್ಸ್‌ಪ್ರೆಸ್‌ಗೆ ಢಿಕ್ಕಿ ಹೊಡೆದ ಗೋವಾ ಎಕ್ಸ್‌ಪ್ರೆಸ್- 22 ಜನ ಸಾವು, 25 ಗಾಯಾಳು