ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಸಚಿವರಿಗೆ ಬಿಜೆಪಿ ನಾಯಕನಿಂದ ಮಂಗಳಾರತಿ! (BJP | Garib Kalyan Mela | Gujarat | Narendra Modi)
Bookmark and Share Feedback Print
 
ಕಾರ್ಯಕ್ರಮಕ್ಕೆ ಆಹ್ವಾನಿಸಿ ಭಾಷಣ ಬಿಗಿಯಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದ ಬಿಜೆಪಿ ನಾಯಕರೊಬ್ಬರು, ಇದಕ್ಕೆ ಕಾರಣನಾದ ಗುಜರಾತ್ ಸಚಿವರ ಮೇಲೆ ಕೆಂಡ ಕಾರಿದ ಘಟನೆಯಿದು. ಇಷ್ಟಾಗುತ್ತಲೇ ಸಭೆಯಿಂದ ಬಿರಬಿರನೆ ಹೊರಟು ಹೋಗಿದ್ದಾರೆ.

ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದ 'ಗರೀಬ್ ಕಲ್ಯಾಣ್ ಮೇಳ'ಕ್ಕೆ ಇಲ್ಲಿನ ಬರೂಚ್ ಕ್ಷೇತ್ರದ ಬಿಜೆಪಿ ಸಂಸದ ಮಾನ್ಸಕ್ ವಾಸವ್ ಅವರನ್ನೂ ಆಹ್ವಾನಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಮುದ್ರಿಸಿದ್ದರೂ, ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡ ಅವರು ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.

ಕಾರ್ಯಕ್ರಮಕ್ಕೆ ಆಹ್ವಾನಿಸಿ ಮಾತನಾಡಲು ಅವಕಾಶ ನೀಡದೇ ಇರುವುದು ನನಗೆ ಮಾಡಿರುವ ಅನ್ಯಾಯ, ನನ್ನ ಕ್ಷೇತ್ರಕ್ಕಾಗಿ ನಾನು ಹಗಲಿರುಳು ಶ್ರಮಿಸಿದ್ದೇನೆ. ಈ ಮೂಲಕ ಅಪಮಾನ ಎಸಗಲಾಗಿದೆ ಎಂದು ಗುಜರಾತ್ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಮಂಗು ಪಟೇಲ್ ವಿರುದ್ಧ ವೇದಿಕೆಯಲ್ಲೇ ಸಾರ್ವಜನಿಕವಾಗಿ ವಾಸವ್ ಕಿಡಿ ಕಾರಿದರು.

'ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ನೀವು ಅವಕಾಶ ನೀಡಿಲ್ಲ. ನನ್ನನ್ನು ನನ್ನದೇ ಕ್ಷೇತ್ರದಲ್ಲಿ ನೀವು ಅವಮಾನಿಸುತ್ತಿದ್ದೀರಿ. ಇದನ್ನು ಸಹಿಸಿಕೊಂಡು ಇಲ್ಲೇ ಉಳಿದುಕೊಳ್ಳಲು ಸಾಧ್ಯವಿಲ್ಲ' ಎಂದು ನೆರೆದಿದ್ದ ಸಾರ್ವಜನಿಕರ ಎದುರೇ ಸಚಿವರತ್ತ ಬೆಟ್ಟು ಮಾಡಿ ತೋರಿಸುತ್ತಾ ಸಭಾತ್ಯಾಗ ನಡೆಸಿದರು.

ಸಂಸದ ತಾಳ್ಮೆ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ಕಾರ್ಯಕ್ರಮದ ಸಂಘಟಕರು ಮೈಕ್ ಸ್ವಿಚ್ ಆಫ್ ಮಾಡಿದ್ದಾರೆ. ಅಷ್ಟು ಹೊತ್ತಿಗೆ ವಾಸವ್ ನೆರೆದಿದ್ದ ನಾಯಕರಿಗೆ ಮಂಗಳಾರತಿ ಮಾಡಿ ಹೊರಟಿದ್ದಾರೆ. ಅವರನ್ನು ಸಮಾಧಾನಗೊಳಿಸುವ ಯಾವುದೇ ಯತ್ನವೂ ಸಫಲವಾಗಲಿಲ್ಲ.

ಮುಖ್ಯಮಂತ್ರಿ ನರೇಂದ್ರ ಮೋದಿಯವರು 'ಗರೀಬ್ ಕಲ್ಯಾಣ್ ಮೇಳ'ದಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಧ್ಯಮ ವರ್ಗದ ಜನತೆಯನ್ನು ಉದ್ಧರಿಸಲು ಯತ್ನಿಸುತ್ತಿದ್ದಾರೆ. ಆದರೆ ಬುಡಕಟ್ಟು ಜನಾಂಗದ ಕಾರ್ಯದರ್ಶಿಯವರು ಅವರನ್ನು ಹಿಂದಕ್ಕೆ ತಳ್ಳಲು ಮುಂದಾಗುತ್ತಿದ್ದಾರೆ ಎಂದು ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ ವಾಸವ್ ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ