ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಹಿಂದೂಗಳಿಗೆ ಭಾರತದ ಪೌರತ್ವಕ್ಕೆ ಬಿಜೆಪಿ ಆಗ್ರಹ (BJP | Hindus | Pakistan | Indian citizenship)
Bookmark and Share Feedback Print
 
ಪಾಕಿಸ್ತಾನದಲ್ಲಿ ಚಿತ್ರಹಿಂಸೆಗೊಳಗಾಗಿ ಭಾರತಕ್ಕೆ ಓಡಿ ಬಂದಿರುವ ಹಿಂದೂಗಳು ಮತ್ತು ಸಿಖ್ಖರಿಗೆ ಸರಕಾರವು ಪೌರತ್ವ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ನಮ್ಮ ದೇಶಕ್ಕೆ ವಾಪಸ್ ಬರಲು ಇಚ್ಛಿಸುವ ಯಾವುದೇ ಗಂಡು ಅಥವಾ ಹೆಣ್ಣಿಗೆ, ಅವರು ಯಾವುದೇ ಸಮುದಾಯಕ್ಕೆ ಸೇರಿದವರಾಗಿದ್ದರೂ ಭಾರತ ಅವರಿಗೆ ಪೌರತ್ವವನ್ನು ನೀಡಬೇಕು ಎಂದು ಪಂಜಾಬ್‌ನ ಜಲಂಧರ್‌ನಲ್ಲಿ ಬಿಜೆಪಿ ಸಂಸದ ನವಜೋತ್ ಸಿಂಗ್ ಸಿಧು ಒತ್ತಾಯಿಸಿದ್ದಾರೆ.

ಪಾಕಿಸ್ತಾನದಲ್ಲಿ ಕಿರುಕುಳ ಅನುಭವಿಸಿದ ಹಿಂದೂ ಮತ್ತು ಸಿಖ್ಖರು ದಶಕಗಳ ಹಿಂದೆ ಭಾರತಕ್ಕೆ ವಾಪಸ್ ಬಂದಿದ್ದಾರೆ. ಆದರೆ ಅವರಿಗೆ ಭಾರತವು ಪೌರತ್ವ ನೀಡಿಲ್ಲ. ಅವರನ್ನು ರಕ್ಷಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇದು ನನ್ನ ಮತ್ತು ಪಕ್ಷದ ನಿಲುವು. ಹಾಗಾಗಿ ಪಾಕಿಸ್ತಾನದಿಂದ ಬಂದಿರುವ ಎಲ್ಲಾ ಸಮುದಾಯದವರಿಗೂ ಪೌರತ್ವ ನೀಡಬೇಕು. ಆದರೆ ಪೌರತ್ವ ನೀಡುವ ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಮಾಜಿ ಕ್ರಿಕೆಟ್ ಆಟಗಾರನೂ ಆಗಿರುವ ಸಿಧು ಹೇಳಿದರು.

ಪ್ರಸಕ್ತ ಜಲಂಧರ್‌ನಲ್ಲಿ ಈ ರೀತಿ ಪಾಕಿಸ್ತಾನದಿಂದ ಓಡಿ ಬಂದ ಸುಮಾರು 200 ಕುಟುಂಬಗಳಿವೆ. ಅಲ್ಲಿಂದ ಪರಾರಿಯಾಗಿ ದಶಕಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿರುವ ಹಿಂದೂ ಕುಟುಂಬಗಳ ಸಮಸ್ಯೆಗಳ ಕುರಿತ ಅಧ್ಯಯನಕ್ಕಾಗಿ ಪಂಜಾಬ್ ಬಿಜೆಪಿಯು ಸಮಿತಿಯೊಂದನ್ನು ಈ ಹಿಂದೆ ಅಸ್ತಿತ್ವಕ್ಕೆ ತಂದಿತ್ತು.

ಈ ರೀತಿ ನಿರಾಶ್ರಿತವಾಗಿರುವ ಪ್ರತಿ ಕುಟುಂಬಕ್ಕೆ ತಿಂಗಳಿಗೆ 4,000 ರೂಪಾಯಿಯಂತೆ ಸಹಾಯಧನ ನೀಡಬೇಕೆಂದು ರಾಜ್ಯಸಭಾ ಸದಸ್ಯ ಅವಿನಾಶ್ ರೈ ಖನ್ನಾ ನೇತೃತ್ವದ ಮೂರು ಸದಸ್ಯರ ಈ ಸಮಿತಿಯು ಸರಕಾರವನ್ನು ಆಗ್ರಹಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ