ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ನಾಟಕದಲ್ಲಿ 79,000 ಲೈಂಗಿಕ ಕಾರ್ಯಕರ್ತೆಯರು! (Karnataka | India | sex workers | ministry of health and family welfare)
ನವದೆಹಲಿ: ಕರ್ನಾಟಕದಲ್ಲಿ 79,000 ಮಂದಿ ಮಹಿಳೆಯರು ವೇಶ್ಯಾವೃತ್ತಿಯಲ್ಲಿ ತೊಡಗಿದ್ದಾರಂತೆ!. ಇಂತಹದೊಂದು ವರದಿಯನ್ನು ಸರಕಾರ ಬಹಿರಂಗಪಡಿಸಿದೆ. ಅಂದೆ ಹಾಗೆ ಭಾರತದಲ್ಲಿ ಒಟ್ಟು ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ 6,88,751.
ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ಇದ್ದಾರೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ ವರದಿ ತಿಳಿಸಿದೆ. ಇದು ಕೇವಲ ಸರಕಾರದ ದಾಖಲೆಯಲ್ಲಿರುವ ಲೆಕ್ಕಾಚಾರ ಮಾತ್ರ. ಸುರಕ್ಷಿತವಲ್ಲದ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಇದು ಎಚ್ ಐ ವಿ ಏಡ್ಸ್‌ನಂತಹ ಮಾರಕ ರೋಗಗಳಿಗೆ ಎಡೆಮಾಡಿಕೊಡಲಿದೆ ಎಂಬ ಭೀತಿ ಕಾಡತೊಡಗಿದೆ.
ದಾಖಲೆಯ ಪ್ರಕಾರ ಆಂಧ್ರ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮಹಿಳೆಯರು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ನಂತರದ ಸ್ಥಾನದಲ್ಲಿರುವ ಕರ್ನಾಟದಲ್ಲಿ 79,000 ಮಹಿಳೆಯರು ವೇಶ್ಯಾವೃತ್ತಿಯಲ್ಲಿ ತೊಡಗಿದ್ದಾರೆ. ಆನಂತರದ ಸ್ಥಾನಗಳಲ್ಲಿ ಕ್ರಮವಾಗಿ ತಮಿಳು ನಾಡು, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿವೆ.
ಅಚ್ಚರಿಯೆಂಬಂತೆ ಸರಕಾರದ ಲೆಕ್ಕಾಚಾರದ ಪ್ರಕಾರ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದೀವ್‌ನಲ್ಲಿ ಒಂದೇ ಒಂದು ಲೈಂಗಿಕ ಕಾರ್ಯಕರ್ತೆಯರು ಕಂಡುಬಂದಿಲ್ಲ. ಜಮ್ಮು ಕಾಶ್ಮೀರದಲ್ಲಿ ಅತೀ ಕಡಿಮೆ 259 ಲೈಂಗಿಕ ಕಾರ್ಯಕರ್ತೆಯರಿದ್ದಾರೆ.
ಮೆಟ್ರೋ ನಗರಗಳ ಪೈಕಿ ದೆಹಲಿಯಲ್ಲಿ ಅತೀ ಹೆಚ್ಚು ಮಹಿಳೆಯರು ವೇಶ್ಯಾವೃತ್ತಿಯಲ್ಲಿ ತೊಡಗಿದ್ದಾರೆ. ಇಲ್ಲಿನ ರೈಡ್ ಲೈಟ್ ಏರಿಯಾ ಮತ್ತು ಜೆಬಿ ರೋಡ್ ಪ್ರದೇಶದಲ್ಲಿ ಮಾತ್ರವಾಗಿ 37,900 ಸೆಕ್ಸ್ ಕಾರ್ಯಕರ್ತೆಯರು ಇದ್ದಾರೆ. ಇದು ವಾಣಿಜ್ಯ ನಗರಿ ಮುಂಬೈಕ್ಕಿಂತ ಹೆಚ್ಚಾಗಿದೆ.
ಇದು ಕೇವಲ ಸರಕಾದ ಲೆಕ್ಕಾಚಾರ ಮಾತ್ರ. ಆದರೆ ನ್ಯಾಕೋ ಮಾಡಿರುವ ವರದಿ ಪ್ರಕಾರ ದೇಶದಲ್ಲಿ ಒಟ್ಟು 12.63 ಲಕ್ಷ ಮಂದಿ ಮಹಳೆಯರು ವೇಶ್ಯಾವೃತ್ತಿಯಲ್ಲಿ ತೊಡಗಿದ್ದಾರೆ.