ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾನಮತ್ತನಾಗಿ ಮಹಿಳೆಯರ ಬಟ್ಟೆ ಬಿಚ್ಚಿದ ಪೊಲೀಸ್ ಪುತ್ರ! (Cop's son molests women | R S Dhama | Pammi | New Delhi)
Bookmark and Share Feedback Print
 
ಪ್ರಜೆಗಳೆಲ್ಲ ಸಮಾನರು ಎಂದು ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕನ್ನು ನೀಡಿದ್ದರೂ ಸಹ ಪ್ರಖ್ಯಾತ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮಕ್ಕಳು ತಮ್ಮ ಆಟೋಪಗಳನ್ನು ದುರ್ಬಲರ ಮೇಲೆ ಪ್ರದರ್ಶಿಸಿದಾಗ ಅವರಿಗಾದ ಶಿಕ್ಷೆಗಳ ಕುರಿತು ನಮಗೆ ಗೊತ್ತೇ ಇದೆ. ಅದೇ ಸಾಲಿಗೆ ಸೇರಬಹುದಾದ ಪ್ರಕರಣವೊಂದು ದೆಹಲಿಯಿಂದ ವರದಿಯಾಗಿದೆ.

ದೆಹಲಿಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆರ್.ಎಸ್. ಧಾಮಾ ಎಂಬವರ ಪುತ್ರ ಪಮ್ಮಿ ಎಂಬಾತನೇ ಆರೋಪಿ. ತನಗಿಂತ ಹಿರಿಯರಾದ ಇಬ್ಬರು ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅಪಮಾನ ಎಸಗಿದ್ದಾನೆ.

ಈ ಘಟನೆ ನಡೆದಿರುವುದು ಭಾನುವಾರ ರಾತ್ರಿ. ಈ ಪಮ್ಮಿ ಎಂಬ 24ರ ಹರೆಯದ ಪೋಲಿ ಯುವಕ ಕಂಠಪೂರ್ತಿ ಕುಡಿದು ಮನೆಯಿಂದ ಹೊರಗೆ ಬಂದು ಬೊಬ್ಬೆ ಹಾಕುತ್ತಿದ್ದ. ಆಗ ಈ ಇಬ್ಬರು ಮಹಿಳೆಯರು ಸೇರಿದಂತೆ, ಸ್ಥಳೀಯರು ಪಮ್ಮಿಯನ್ನು ಸಮಾಧಾನಗೊಳಿಸಲು ಯತ್ನಿಸಿದ್ದರು.

ಇದರಿಂದ ಕ್ಷುದ್ರಗೊಂಡಿದ್ದ ಆರೋಪಿ ನೆರೆಮನೆಯ ಮುನ್ನಾ ಲಾಲ್ ಎಂಬವರಿಗೆ ಥಳಿಸಿದ ನಂತರ ಇಬ್ಬರು ಮಹಿಳೆಯರನ್ನು ನಿಂದಿಸಿ, ಹೊಡೆದಿದ್ದಾನೆ. ಬಳಿಕ ಇಬ್ಬರ ಬಟ್ಟೆಗಳನ್ನೂ ಸಾರ್ವಜನಿಕ ಸ್ಥಳದಲ್ಲಿ ಬಿಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.

'ನನ್ನ ತಂದೆ ಮನೆಯಲ್ಲಿರಲಿಲ್ಲ. ನಾನು ನನ್ನ ಸಹೋದರಿಯರ ಜತೆ ಒಬ್ಬಳೇ ಇದ್ದೆ. ನಾವು ತುಂಬಾ ಹೆದರಿಕೊಂಡಿದ್ದೆವು. ಪಮ್ಮಿ ನನ್ನ ಬಟ್ಟೆಯನ್ನು ಎಲ್ಲರೆದುರೇ ಬಿಚ್ಚಿ ಹಾಕಿದ' ಎಂದು ಮಹಿಳೆಯೊಬ್ಬರು ಅಳುತ್ತಾ ತೋಡಿಕೊಂಡಿದ್ದಾರೆ.

ಮತ್ತೊಬ್ಬ 40ರ ಹರೆಯದ ಗೃಹಿಣಿಯದ್ದೂ ಇದೇ ಕತೆ. 'ನಾನು ಅವನಿಗಿಂತ ಹಿರಿಯಳು. ಆದರೂ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ. ನನ್ನ ಮುಖದ ಮೇಲೆ ಹಲವಾರು ಬಾರಿ ಗುದ್ದಿದ್ದಾನೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಆದರೆ ಪಮ್ಮಿಯ ತಾಯಿ ತನ್ನ ಮಗನನ್ನು ಸಮರ್ಥಿಸಿಕೊಂಡಿದ್ದಾರೆ. 'ನನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ನಾವು ಸಭ್ಯ ಕುಟುಂಬದಿಂದ ಬಂದವರು ಮತ್ತು ನಮ್ಮವರು ಹಲವರು ಪೊಲೀಸ್ ಹುದ್ದೆಗಳಲ್ಲಿದ್ದಾರೆ. ನಾವೆಲ್ಲರೂ ಸಭ್ಯ ನಾಗರಿಕರು' ಎಂದಿದ್ದಾರೆ.

ಈ ಬಗ್ಗೆ ಬಲಿಪಶುಗಳು ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಆದರೂ ಪೊಲೀಸರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಈ ಕುರಿತು 'ಗಮನ' ಹರಿಸುತ್ತಿದ್ದೇವೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ