ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಪಿಎಂ ರೈಲ್ವೇ ಇಲಾಖೆ ಹೆಸರು ಕೆಡಿಸುತ್ತಿದೆ: ಮಮತಾ (CPM | Railways | cockroaches in food | Mamata Banerjee)
Bookmark and Share Feedback Print
 
ಸೈಂತಿಯಾ ಮತ್ತು ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತಗಳ ಹಿಂದೆ ಸಿಪಿಎಂ ಕೈವಾಡವಿದೆ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ನೈತಿಕ ನೆಲೆಯಲ್ಲಿ ರಾಜೀನಾಮೆ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಬಿರ್ಬಮ್ ಜಿಲ್ಲೆಯಲ್ಲಿ ಸೋಮವಾರ 66 ಮಂದಿಯ ಸಾವಿಗೆ ಕಾರಣವಾದ ರೈಲು ಅಫಘಾತಕ್ಕೆ ಸಂಬಂಧಪಟ್ಟಂತೆ ಮಮತಾ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ವಿಧ್ವಂಸಕ ಕೃತ್ಯಗಳಲ್ಲಿ ತಾನು ತೊಡಗುವುದಿಲ್ಲ ಎಂದು ಸಿಪಿಎಂ ಭರವಸೆ ನೀಡುವುದಾದರೆ ನಾನು ರಾಜೀನಾಮೆಗೆ ಸಿದ್ಧಳಿದ್ದೇನೆ ಎಂದರು.

ರಾಜೀನಾಮೆ ನೀಡುವ ಮೂಲಕ ಸಿಪಿಐ ಹೆಣೆದಿರುವ ಬಲೆಗೆ ಬೀಳಬೇಡಿ ಎಂದು ಜನ ನನಗೆ ಕರೆ ಮಾಡಿ ಹೇಳುತ್ತಿದ್ದಾರೆ ಎಂದು ಈ ಹಿಂದೆ ಎರಡು ಬಾರಿ ಕೇಂದ್ರ ಸಚಿವೆಯಾಗಿದ್ದಾಗ ರಾಜೀನಾಮೆ ನೀಡಿದ್ದ ಮಮತಾ ಹೇಳಿಕೊಂಡಿದ್ದಾರೆ.

ಸಿಪಿಎಂ ವಿಧ್ವಂಸಕ ಕೃತ್ಯಗಳಿಗಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಆಹಾರದಲ್ಲಿ ಜಿರಳೆಗಳನ್ನು ಬಿಡುವ ಮೂಲಕ ರೈಲ್ವೇಯ ಘನತೆಯನ್ನು ಮಣ್ಣುಪಾಲು ಮಾಡಲು ಅವರು ಯತ್ನಿಸುತ್ತಿದ್ದಾರೆ. ಇದರಿಂದ ಹಿಂದಕ್ಕೆ ಸರಿಯಲು ಸಿಪಿಎಂಗೆ ಇದು ಸಕಾಲ ಎಂದು ಸಚಿವೆ ಸಲಹೆ ನೀಡಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಕೆಲವು ಮಾಹಿತಿಗಳನ್ನು ಕೂಡ ಅವರು ನೀಡಿದ್ದಾರೆ. ಕೊಲ್ಕತ್ತಾ ಮಹಾನಗರ ಪಾಲಿಕೆ ಚುನಾವಣೆಗಳು ನಡೆಯುವ ಎರಡು ದಿನಗಳ ಮೊದಲು ಅಂದರೆ ಮೇ 28ರಂದು ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತ ಸಂಭವಿಸಿತ್ತು. ಹುತಾತ್ಮರ ದಿನದ ರ‌್ಯಾಲಿ ನಡೆಯುವ ಎರಡು ದಿನಗಳ ಮೊದಲು ಜುಲೈ 19ರಂದು ಸೈಂತಿಯಾ ದುರ್ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

1993ರ ಜುಲೈ 21ರಂದು ಪೊಲೀಸರ ಗುಂಡಿಗೆ 13 ಯುವ ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ ದಿನವನ್ನು ಹುತಾತ್ಮರ ದಿನ ಎಂದು ತೃಣಮೂಲ ಕಾಂಗ್ರೆಸ್ ಆಚರಿಸುತ್ತಾ ಬಂದಿದೆ. ಇದರ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬ್ಯಾನರ್ಜಿ, ಸಿಪಿಎಂ ವಿರುದ್ಧ ಹರಿಹಾಯ್ದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, ಮಾವೋವಾದಿಗಳು ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ. ಅವರು ಹಳಿಗಳಲ್ಲಿ ಬಿರುಕುಗಳನ್ನು ತೆರೆಯುವುದು ಸೇರಿದಂತೆ ಇನ್ನಿತರ ದುಷ್ಕೃತ್ಯಗಳನ್ನು ನಡೆಸುತ್ತಾರೆ. ಜ್ಞಾನೇಶ್ವರಿ ದುರಂತ ನಡೆದ ನಂತರ, ಇದೊಂದು ಅಫಘಾತ ಎಂಬಂತೆ ಬಿಂಬಿಸಲು ಅವರು ಯತ್ನಿಸಿದ್ದಾರೆ. ಇದರ ಹಿಂದೆ ಇರುವವರ ಬಣ್ಣ ಬಯಲಾಗಬೇಕು. ಅದಕ್ಕೆ ಪೂರಕವಾಗಿ ತನಿಖೆಗಳು ನಡೆಯಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ