ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ ಗೇಮ್ಸ್‌ನಲ್ಲಿ ಗೋಮಾಂಸವಿಲ್ಲ: ಕಲ್ಮಾಡಿ ಸ್ಪಷ್ಟನೆ (No beef during CWG | beef | Commonwealth Games | Suresh Kalmadi)
Bookmark and Share Feedback Print
 
ಕೊನೆಗೂ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಅಕ್ಟೋಬರ್ ಮೂರರಿಂದ 14ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ಸಂದರ್ಭದಲ್ಲಿ ಗೋಮಾಂಸ ಪೂರೈಕೆ ಮಾಡುವುದಿಲ್ಲ ಎಂದು ಗೇಮ್ಸ್ ಸಂಘಟನಾ ಸಮಿತಿ ಸ್ಪಷ್ಟಪಡಿಸಿದೆ.

ದನದ ಮಾಂಸದ ಯಾವುದೇ ಖಾದ್ಯಗಳನ್ನು ಗೇಮ್ಸ್ ವ್ಯಾಪ್ತಿಯಲ್ಲಿ ಮಾಡದೇ ಇರುವ ನಿರ್ಧಾರಕ್ಕೆ ನಾವು ಬಂದಿದ್ದೇವೆ. ಅದರಂತೆ ಗೋಮಾಂಸ ಪೂರೈಕೆ ಮಾಡಲಾಗುವುದಿಲ್ಲ. ಇದನ್ನು ನಮ್ಮ ಅಡುಗೆ ಗುತ್ತಿಗೆದಾರರಿಗೆ ಈಗಾಗಲೇ ತಿಳಿಸಿದ್ದೇವೆ ಎಂದು ಗೇಮ್ಸ್ ಸಂಘಟನಾ ಸಮಿತಿಯ ಅಧ್ಯಕ್ಷ ಸುರೇಶ್ ಕಲ್ಮಾಡಿ ತಿಳಿಸಿದ್ದಾರೆ.

ಗೇಮ್ಸ್ ಸಂದರ್ಭದಲ್ಲಿ ದನದ ಮಾಂಸದ ಖಾದ್ಯಗಳನ್ನು ಪೂರೈಕೆ ಮಾಡಬಾರದು ಎಂಬ ಆಕ್ಷೇಪಗಳಿದ್ದ ಹಿನ್ನೆಲೆಯಲ್ಲಿ ನಾವು ಈ ಸ್ಪಷ್ಟನೆಯನ್ನು ನೀಡುತ್ತಿದ್ದೇವೆ. ಇದರಿಂದಾಗಿ ನೆಲೆಸಿದ್ದ ಸಂಶಯಗಳು ದೂರವಾಗಲಿವೆ ಎಂದು ನಾನು ನಂಬಿದ್ದೇನೆ ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗೇಮ್ಸ್ ಸಂದರ್ಭದ ಆಹಾರ ಪಟ್ಟಿಯಿಂದ ದನದ ಮಾಂಸವನ್ನು ಹೊರಗಿಡುವಂತೆ ಒತ್ತಾಯಿಸಿ ಕೆಲ ತಿಂಗಳ ಹಿಂದೆ ಕಲ್ಮಾಡಿಯವರಿಗೆ ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಪತ್ರ ಬರೆದ ನಂತರ ಇದು ವಿವಾದವಾಗಿ ಮಾರ್ಪಾಡಾಗಿತ್ತು.

ನಂತರದ ದಿನಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ ದೆಹಲಿ ಮಹಾನಗರ ಪಾಲಿಕೆಯೂ ಸಂಘಟಕರಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೆ 12 ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗೋಮಾಂಸ ಪೂರೈಕೆಯನ್ನು ನಿಷೇಧಿಸಿ ನಿಲುವನ್ನು ಕೂಡ ಅಂಗೀಕರಿಸಿತ್ತು.

ಈ ಕುರಿತು ಬಿಜೆಪಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ನಂತರ ರಾಜ್ಯ ಸರಕಾರವೂ ಗೋಮಾಂಸ ಪೂರೈಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ನಾವು ಭಾರತೀಯರು ಯೂರೋಪಿಯನ್ ಅಥವಾ ಆಸ್ಟ್ರೇಲಿಯಾಗಳಿಗೆ ಹೋದಾಗ ಉಪ್ಪಿನಕಾಯಿ ಅಥವಾ ಕ್ಷೀರೋತ್ಪನ್ನಗಳನ್ನು ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ. ಅತ್ಯುತ್ತಮವಾಗಿರುವ ಆಪಲ್ ಇಟ್ಟುಕೊಂಡರೂ ಅದನ್ನು ವಿಮಾನ ನಿಲ್ದಾಣದಲ್ಲೇ ಕಿತ್ತುಕೊಂಡು ದೂರ ಎಸೆಯಲಾಗುತ್ತದೆ. ಹಾಗಾಗಿ ನಾವು ನಮ್ಮ ದೇಶದ ಜನರ ಭಾವನೆಗಳನ್ನು ಗೌರವಿಸುವ ಸಲುವಾಗಿ ಗೋಮಾಂಸ ಆಮದಿಗೆ ಅವಕಾಶ ನೀಡದಿದ್ದರೆ ಅದೇನೂ ಪ್ರಮಾದವಾಗದು ಎಂದು ದೆಹಲಿ ಮಹಾನಗರ ಪಾಲಿಕೆ ಸದಸ್ಯರೊಬ್ಬರು ಅಭಿಪ್ರಾಯಪಟ್ಟಿದ್ದರು.
ಸಂಬಂಧಿತ ಮಾಹಿತಿ ಹುಡುಕಿ