ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಷ್ಟ್ರಪಿತ ಮಹಾತ್ಮ ಗಾಂಧಿ ಬರೆದ ಡೈರಿ ಪತ್ತೆ (Mahatma Gandhi | India | Bapu | Dairy)
Bookmark and Share Feedback Print
 
ಮಹಾತ್ಮ ಗಾಂಧೀಜಿ
PR
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬರೆದಿದ್ದ ಡೈರಿಯೊಂದು ಪತ್ತೆಯಾಗಿದೆ.

ಇಲ್ಲಿಯವರೆಗೆ ಖಾಸಗಿ ಮಹಿಳೆಯೊಬ್ಬರ ಬಳಿ ಇದ್ದ ಈ ಮಹತ್ವದ ಡೈರಿಯನ್ನು ಗಾಂಧಿ ರಾಷ್ಟ್ರೀಯ ವಸ್ತು ಸಂಗ್ರಾಹಲಯಕ್ಕೆ ನೀಡಲಾಗಿದೆ. ಅತ್ಯಂತ ಪುಟ್ಟ ಡೈರಿ ಆಗಿರುವ ಇದನ್ನು ಗಾಂಧಿ ಸ್ವಂತ ಹಸ್ತಾಕ್ಷರದಲ್ಲಿ ಗುಜರಾತಿ ಭಾಷೆಯಲ್ಲಿ ದಿನಚರಿ ಬರೆಯಲಾಗಿದೆ.

ಹತ್ತು ದಿನಗಳ ಹಿಂದೆಯಷ್ಟೇ ಇದನ್ನು ವಸ್ತು ಸಂಗ್ರಾಹಲಯಕ್ಕೆ ನೀಡಲಾಗಿದ್ದು, ಸದ್ಯದಲ್ಲೇ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಗಾಂಧಿ ರಾಷ್ಟ್ರೀಯ ವಸ್ತು ಸಂಗ್ರಾಹಲಯದ ಮಾಜಿ ನಿರ್ದೇಶಕಿ ವರ್ಷಾ ದಾಸ್ ತಿಳಿಸಿದ್ದಾರೆ.

ಇದರ ಜೊತೆಗೆ ಗಾಂಧಿ ಬರೆದಿದ್ದ ಪತ್ರಗಳು ಮತ್ತು ಇತರ ದಾಖಲೆಗಳನ್ನು ಕೂಡಾ ಸಂಗ್ರಹಾಲಯಕ್ಕೆ ಒಪ್ಪಿಸಲಾಗಿದೆ ಎಂದು ದಾಸ್ ತಿಳಿಸಿದರು. ನೀಲಿ ಇಂಕ್ ಮತ್ತು ಪೆನ್ಸಿಲ್ ಉಪಯೋಗಿಸಿ ಬರೆಯಲಾದ ಈ ಡೈರಿ, 1947ರ ಎಪ್ರಿಲ್ 13ರಿಂದ ಡಿಸೆಂಬರ್ 19ರ ಅವಧಿಯಲ್ಲಿ ಬರೆಯಲಾಗಿದೆ.

ದಾಸ್ ಬಾಲ್ಯದ ಸ್ನೇಹಿತೆ ಆಗಿರುವ ಮೀನಾ ಜೈನ್ ಈ ಮಹತ್ವದ ಡೈರಿಯನ್ನು ಹಸ್ತಾಂತರ ಮಾಡಿದ್ದಾರೆ. ಗಾಂಧಿ ಸೋದರ ಸೊಸೆ ಮನು ಬೆನ್ ಬರೆಯಲಾದ ಹಲವು ದಿನಚರಿ ಮತ್ತು ಪತ್ರಗಳು ಕೂಡಾ ಇದರ ಜೊತೆಗಿವೆ.

ಗಾಂಧಿ ಡೈರಿಯು ರಾಷ್ಟ್ರೀಯ ಜತೆಗೆ ವಿಶ್ವದ ಸಂಪತ್ತು ಆಗಿದ್ದು, ಆ ಮೂಲಕ ಗಾಂಧಿ ಬಗ್ಗೆ ಇನ್ನು ಹೆಚ್ಚು ತಿಳಿಯಬಹುದಾಗಿದೆ ಎಂದು ದಾಸ್ ಹೇಳಿದರು. ಅಲ್ಲದೆ ಇದು ಸಂಶೋಧನೆ ಮಾಡುವವರಿಗೆ ಮತ್ತು ವಿದ್ವಾಂಸರ ನೆರವಿಗೆ ಬರಲಿದೆ ಎಂದವರು ಹೇಳಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ