ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಕೃಷ್ಣ-ಪಿಳ್ಳೈ ಜಗಳದಲ್ಲಿ ದೇಶದ ಮಾನ ಹರಾಜಾಗುತ್ತಿದೆ' (Indo-Pak talks | BJP | SM Krishna | GK Pillai)
Bookmark and Share Feedback Print
 
ಮುಂಬೈ ದಾಳಿ ಕುರಿತ ಪಾಕಿಸ್ತಾನ ಪಾತ್ರದ ಕುರಿತು ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದ ನಡುವೆ ಭಿನ್ನಮತ ಎದ್ದು ಕಾಣುತ್ತಿದೆ, ಇದರಿಂದಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಮಾನ ಹರಾಜುಗುತ್ತಿದೆ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.

ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಸೇನೆ ಮತ್ತು ಐಎಸ್ಐ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈಯವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ನಡೆಯನ್ನು ಕೂಡ ಬಿಜೆಪಿ ಖಂಡಿಸಿದೆ.

ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತೆ ಮಾತನಾಡಿದ್ದಾರೆ. ಆದರೆ ಸಾವಧಾನ ಮತ್ತು ಸೋಲೊಪ್ಪಿಕೊಳ್ಳುವುದರ ನಡುವೆ ವ್ಯತ್ಯಾಸಗಳಿವೆ ಎಂಬುದನ್ನು ಅವರಿಗೆ ನೆನಪಿಸಲು ನಾವು ಬಯಸುತ್ತಿದ್ದೇವೆ. ಅದನ್ನು ಕೃಷ್ಣ ದಾಟಿದ್ದಾರೆ ಎಂಬುದಕ್ಕೂ ನಮ್ಮ ವಿಷಾದವಿದೆ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಯುಪಿಎ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಸೂಕ್ಷ್ಮ ವಿಚಾರಗಳ ಕುರಿತು ಏಕಧ್ವನಿಯಲ್ಲಿ ಮಾತನಾಡುತ್ತಿಲ್ಲ ಎಂಬುದಕ್ಕೂ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಶಿಸ್ತು ಪಾಲಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಸಾದ್ ಪ್ರಶ್ನಿಸಿದ್ದಾರೆ.

ಮುಂಬೈ ದಾಳಿಯಲ್ಲಿ ಐಎಸ್ಐ ಮತ್ತು ಪಾಕಿಸ್ತಾನ ಸೇನೆ ಸಕ್ರಿಯವಾಗಿ ಭಾಗವಹಿಸಿದೆ ಎಂಬ ಡೇವಿಡ್ ಹೆಡ್ಲಿ ಹೇಳಿಕೆಯನ್ನು ಬಹಿರಂಗಪಡಿಸಿದ ಪಿಳ್ಳೈಯವರನ್ನು ಸಂಪೂರ್ಣವಾಗಿ ಬೆಂಬಲಿಸಿರುವ ಬಿಜೆಪಿ, ಅವರ ಹೇಳಿಕೆ ಸರಿಯಾಗಿಯೇ ಇದೆ ಎಂದಿದ್ದಾರೆ.

ಪಿಳ್ಳೈಯವರನ್ನು ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಪಾಕಿಸ್ತಾನ ಹೋಲಿಸಿದಾಗ ತೆಪ್ಪಗಿದ್ದ ಕೃಷ್ಣ, ಇದೀಗ ಗೃಹ ಕಾರ್ಯದರ್ಶಿಯನ್ನೇ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಒಂದು ಅಪಮಾನ ನಡೆದು ಹೋದ ಐದು ದಿನಗಳ ಬಳಿಕ, ಗೃಹ ಕಾರ್ಯದರ್ಶಿಯವರನ್ನು ಸಾರ್ವಜನಿಕವಾಗಿ ದೂಷಿಸಲಾಗುತ್ತಿದೆ. ಇದು ಎಷ್ಟು ಸರಿ ಎಂದು ಪಿಳ್ಳೈಯವರನ್ನು ತೀವ್ರವಾಗಿ ಟೀಕಿಸಿದ್ದ ಸಚಿವ ಕೃಷ್ಣ ಹೇಳಿಕೆಯನ್ನು ಉಲ್ಲೇಖಿಸಿ ಪ್ರಸಾದ್ ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ವರಿಷ್ಠೆ ಸೋನಿಯಾ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಪ್ರಧಾನಿ ಮತ್ತು ಸೋನಿಯಾ ಯಾಕೆ ಮೌನವಾಗಿದ್ದಾರೆ? ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯಗಳ ನಡುವೆ ಸ್ಪಷ್ಟವಾದ ಸಂವಹನ ಕೊರತೆಯಿರುವುದು ಕಂಡು ಬರುತ್ತಿದೆ. ಇದರಿಂದಾಗಿ ಭಾರತದ ಘನತೆಯು ಮಣ್ಣುಪಾಲಾಗುತ್ತಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ