ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದುವೆಯ ಸುಳ್ಳು ಭರವಸೆಯ ಸೆಕ್ಸ್ ಅತ್ಯಾಚಾರವಲ್ಲ..! (Sexual relations | promise of marriage | rape | Bombay HC)
Bookmark and Share Feedback Print
 
ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ಮಹಿಳೆಯೊಬ್ಬಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ವ್ಯಕ್ತಿಯೊಬ್ಬ ಮದುವೆಯಾಗಲು ನಿರಾಕರಿಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಲ್ಲಿನ ಪ್ರಕರಣವೊಂದನ್ನು ಉಲ್ಲೇಖಿಸಿರುವ ಬಾಂಬೆ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠವು, ಮದುವೆಯ ಭರವಸೆ ನೀಡಿದ ನಂತರ ದೈಹಿಕ ಸಂಪರ್ಕ ನಡೆಸಿ, ಮದುವೆಗೆ ನಿರಾಕರಿಸಿದರೆ ಅದು ಅತ್ಯಾಚಾರವಲ್ಲ ಎಂದಿದೆ.

ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ (ಅತ್ಯಾಚಾರ) ಈಗ 42 ವರ್ಷ ತುಂಬಿರುವ ಸಂದೀಪ್ ರಾಥೋಡ್ ಎಂಬಾತ ದೋಷಿ ಎಂದು ಯತ್ನವಾಲ್ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ತಳ್ಳಿ ಹಾಕಿರುವ ನ್ಯಾಯಮೂರ್ತಿ ಅಂಬಾದಾಸ್ ಜೋಷಿ, ಅದು ಅತ್ಯಾಚಾರವಲ್ಲ ಎಂದಿದ್ದಾರೆ.

1996ರಲ್ಲಿ ನಡೆದಿದ್ದ ಈ ಘಟನೆ ಸಂದರ್ಭದಲ್ಲಿ ಬಲಿಪಶುವಿಗೆ ಕೇವಲ 16 ವರ್ಷವಷ್ಟೇ ಆಗಿತ್ತು. ಈ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸಿರುವ ನ್ಯಾಯಾಲಯ, ಬಲಿಪಶುವಿನ ವಯಸ್ಸು 18ರೊಳಗಿತ್ತು ಎಂಬುದು ಸಾಬೀತಾಗಿದೆ ಎಂದು ಹೇಳಿದೆ.

ಅರಣ್ಯಾಧಿಕಾರಿಯಾಗಿದ್ದ 30ರ ಹರೆಯದ ರಾಥೋಡ್, ಬಲಿಪಶು ಯುವತಿಯ ಮನೆಯ ಆಸುಪಾಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಸಂದರ್ಭದಲ್ಲಿ ಅಪ್ರಾಪ್ತ ಯುವತಿಗೆ ಮದುವೆಯ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಿದ್ದ.

ಯುವತಿ ಗರ್ಭಿಣಿಯಾಗುತ್ತಿದ್ದಂತೆ ಇದನ್ನು ಹೆತ್ತವರ ಗಮನಕ್ಕೆ ತಂದಿದ್ದಳು. ರಾಥೋಡ್ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ದೂರು ನೀಡಿದ ನಂತರ ಆರೋಪಿಯನ್ನು ಬಂಧಿಸಲಾಗಿತ್ತು.

1996ರ ನವೆಂಬರ್ 11ರಂದು ಮತ್ತು ಅದಕ್ಕೂ ಮೊದಲು ಸತತವಾಗಿ ಅಪ್ರಾಪ್ತ ಯುವತಿಯ ಜತೆ ಸತತ ದೈಹಿಕ ಸಂಬಂಧ ಬೆಳೆಸಿದ್ದ ರಾಥೋಡ್ ಅಪರಾಧಿ ಎಂದು ತೀರ್ಪು ನೀಡಿದ್ದ ಸೆಷನ್ಸ್ ನ್ಯಾಯಾಲಯವು, 10 ವರ್ಷಗಳ ಕಠಿಣ ಶಿಕ್ಷೆಯನ್ನು ಪ್ರಕಟಿಸಿತ್ತು.

ಇದಾದ ಎರಡು ವರ್ಷಗಳ ನಂತರ ರಾಥೋಡ್ ಹೈಕೋರ್ಟ್ ಮೊರೆ ಹೋಗಿದ್ದ.
ಸಂಬಂಧಿತ ಮಾಹಿತಿ ಹುಡುಕಿ