ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿವಾಹೇತರ ಸಂಬಂಧಕ್ಕೆ ಬೆತ್ತಲೆ ಮೆರವಣಿಗೆ ಶಿಕ್ಷೆಯೇ?
(Maharashtra | Couple stripped | Jalgaon district | moral police)
ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದ ಜೋಡಿಯೊಂದನ್ನು ಬೆತ್ತಲೆ ಮಾಡಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಹೇಯ ಪ್ರಸಂಗವೊಂದು ಮಹಾರಾಷ್ಟ್ರದಿಂದ ವರದಿಯಾಗಿದೆ.
ಮಹಾರಾಷ್ಟ್ರದ ಜಲ್ಗಾನ್ ಜಿಲ್ಲೆಯ ನಾಂದೇಡ್ ಗ್ರಾಮದ 32ರ ಹರೆಯದ ಮಹಿಳೆಯ ಮನೆಯಲ್ಲಿ ಸ್ಥಳೀಯ ಪಶು ವೈದ್ಯನೊಬ್ಬ ಸರಸ ಸಲ್ಲಾಪ ನಡೆಸುತ್ತಿದ್ದುದನ್ನು ಗಮನಿಸಿದ ಇಲ್ಲಿನ ನೈತಿಕ ಪೊಲೀಸರು ದಾಳಿ ಮಾಡಿ ರೆಡ್ ಹ್ಯಾಂಡಾಗಿ ಹಿಡಿದಿದ್ದರು.
ಅವರ ಮೇಲೆ ವಿವಾಹೇತರ ಸಂಬಂಧ ಹೊಂದಿದ ಆರೋಪ ಹೊರಿಸಿದ ಗುಂಪೊಂದು ಕೊಂದೇ ಹಾಕಲು ನಿರ್ಧರಿಸಿತ್ತು. ಆದರೆ ಸ್ಥಳೀಯ ಹಿರಿಯ ಮಧ್ಯ ಪ್ರವೇಶದಿಂದಾಗಿ ಅದನ್ನು ತಡೆಯಲಾಯಿತು.
ಆದರೆ ಅವರಿಬ್ಬರನ್ನೂ ಬೆತ್ತಲೆ ಮಾಡಿ ಬೀದಿಯಲ್ಲಿ ಮೆರವಣಿಗೆ ಮಾಡುವುದನ್ನು ಹಿರಿಯರಿಗೆ ತಡೆಯಲು ಸಾಧ್ಯವಾಗಲಿಲ್ಲ. ಸುಮಾರು ಮೂರು ಗಂಟೆಗಳಷ್ಟು ಹೊತ್ತು ಕೈಕಾಲುಗಳನ್ನು ಕಟ್ಟಿ ಹಾಕಿ ಅವರನ್ನು ಅಮಾನವೀಯವಾಗಿ ಬೆತ್ತಲೆ ಮಾಡಿ ರಸ್ತೆಯಲ್ಲಿ ಸಾರ್ವಜನಿಕರಿಗೆ ದರ್ಶನ ಮಾಡಿಸಲಾಯಿತು ಎಂದು ವರದಿಗಳು ಹೇಳಿವೆ.
ಈ ಘಟನೆಯ ಫೋಟೋಗಳನ್ನು ತೆಗೆಯಲಾಗಿತ್ತು. ಅದು ಬಹಿರಂಗವಾಗುತ್ತಿದ್ದಂತೆ ಪೊಲೀಸರೂ ಎಚ್ಚೆತ್ತಿದ್ದಾರೆ. ಜಿಲ್ಲಾಧಿಕಾರಿಯೂ ಘಟನೆಯ ವಿಸ್ತೃತ ತನಿಖೆಗೆ ಆದೇಶ ನೀಡಿದ್ದು, ಹಲವು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.