ಮರ್ಯಾದಾ ಹತ್ಯೆ ಪ್ರಕರಣ ದೇಶದಲ್ಲಿ ಇದೀಗ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಇದೀಗ ಪಂಜಾಬಿನ ಹೋಶಿಯಾರ್ಪುರ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯುವತಿಯರನ್ನು ವಿದ್ಯುತ್ ಶಾಕ್ ನೀಡಿ ಕೊಲ್ಲಲಾಗಿದ್ದು ಇದನ್ನು ಮರ್ಯಾದಾ ಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ಸಾಸುಯಾ ಪಟ್ಟಣದಲ್ಲಿ ಗುರ್ಜಿತ್ ಕೌರ್ (20) ಎಂಬಾಕೆ ತನ್ನ ಪ್ರಿಯಕರನ ಜೊತೆಗೆ ಇದ್ದುದನ್ನು ಕಂಡ ಆಕೆಯ ತಂದೆ ವಿದ್ಯುತ್ ಶಾಕ್ ನೀಡಿ ಕೊಂದ ಘಟನೆ ನಡೆದಿದೆ. ಜೊತೆಗೆ ತನ್ನ ಮಗಳ ಪ್ರಿಯಕರ ಗಗನ್ ದೀಪ್ ಸಿಂಗ್‌ನನ್ನು ಬೆಂಕಿ ಕೊಲ್ಲಲು ಯತ್ನಿಸಿದ್ದಾನೆ. ಆದರೆ ಆತ ಇದರಿಂದ ಪಾರಾಗಿದ್ದಾನೆ. ಆರೋಪಿ ತಂದೆಯನ್ನು ಬಂಧಿಸಲಾಗಿದೆ.
ಇದೇ ಜಿಲ್ಲೆಯ ಮಹಿಲ್ ಪುರ ಪ್ರದೇಶದಲ್ಲಿ ಮಣಿ ಪ್ರತಾಪ್ ಎಂಬಾತ 16ರ ಹರೆಯದ ತನ್ನ ತಂಗಿ ಕಾಂಚನ ಎಂಬಾಕೆಯನ್ನು ವಿದ್ಯುತ್ ಶಾಕ್ ನೀಡಿ ಕೊಂದು ಕಾಲುವೆಗೆ ಎಸೆದ ಘಟನೆ ನಡೆದಿದೆ. ಇದು ಕೂಡಾ ಮರ್ಯಾದಾ ಹತ್ಯೆ ಎಂದೇ ಶಂಕಿಸಲಾಗಿದೆ.