ತಿನ್ನಲು, ಕುಡಿಯಲು 94 ಲಕ್ಷ ಖರ್ಚು ಮಾಡಿದ ಆರೋಗ್ಯ ಇಲಾಖೆ!
ನವದೆಹಲಿ, ಭಾನುವಾರ, 25 ಜುಲೈ 2010( 17:30 IST )
ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ಎರಡು ವರ್ಷಗಳಲ್ಲಿ ಕುಡಿಯ ಬಾಟಲಿ ನೀರಿಗೆ ಹಾಗೂ ಲಘು ಉಪಹಾರಕ್ಕಾಗಿ ಬರೋಬ್ಬರಿ 94 ಲಕ್ಷ ರೂಪಾಯಿಗಳನ್ನ ವ್ಯಯಿಸಿದೆ. ವಿಶೇಷವೆಂದರೆ ಇದು ಪ್ರಧಾನ ಮಂತ್ರಿಗಳ ಸಚಿವಾಲಯದಲ್ಲಿ ಇದಕ್ಕಾಗಿ ವ್ಯಯಿಸಿದ ಖರ್ಚಿನ ಎಂಟು ಪಟ್ಟು ಹೆಚ್ಚು!
ಪ್ರಧಾನ ಮಂತ್ರಿಗಳ ಸಚಿವಾಲಯ 2008-09 ಹಾಗೂ 2009-10ನೇ ಸಾಲಿನಲ್ಲಿ ಲಘು ಉಪಹಾರ ಹಾಗೂ ಕುಡಿಯುವ ಬಾಟಲಿ ನೀರಿಗಾಗಿ 11.77 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿತ್ತು. ಮಾಹಿತಿ ಹಕ್ಕು ಆಧಾರದ ಮೇಲೆ ರಮೇಶ್ ವರ್ಮಾ ಎಂಬವರು ಪಡೆದ ಅಧಿಕೃತ ದಾಖಲೆಗಳ ಪ್ರಕಾರ ಈ ಮಾಹಿತಿ ಬಹಿರಂಗವಾಗಿದೆ.
ಆರೋಗ್ಯ ಸಚಿವಾಲಯದ ದಾಖಲೆಗಳ ಪ್ರಕಾರ 49.45 ಲಕ್ಷ ರೂ ಹಾಗೂ 44.62 ಲಕ್ಷ ರೂಗಳನ್ನು ಕ್ರಮವಾಗಿ ಎರಡು ವರ್ಷಗಳ ರಿಫ್ರೆಶ್‌ಮೆಂಟ್ ಹಾಗೂ ಮಿನರಲ್ ವಾಟರ್‌ಗಾಗಿ ಬಳಸಲಾಗಿದೆ ಎಂದು ವಿವರಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯ ಎರಡು ವರ್ಷದಲ್ಲಿ 41.42 ಲಕ್ಷ ರೂಪಾಯಿಗಳನ್ನು ಬಳಸಿದರೆ, ವಾಟರ್ ರಿಸೋರ್ಸಸ್ ಸಚಿವಾಲಯ 20.73 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ. ಕನ್‌ಸ್ಯೂಮರ್ ಅಫೇರ್ಸ್ ಸಚಿವಾಲಯ 14 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ.