ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೊಹ್ರಾಬುದ್ದೀನ್ ಹತ್ಯೆ: ಕೊನೆಗೂ ಮಾಜಿ ಸಚಿವ ಅಮಿತ್ ಷಾ ಬಂಧನ (Narendra Modi|CBI|Sohrabuddin|Fake Encounter Case|Amit Shah)
Bookmark and Share Feedback Print
 
PTI
ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಗುಜರಾತಿನ ಮಾಜಿ ಸಚಿವ ಅಮಿತ್ ಷಾ ಅವರು ಸಿಬಿಐಗೆ ಶರಣಾಗಿದ್ದಾರೆ. ವಿಚಾರಣೆಗಾಗಿ ಹಾಜರಾದ ಅಮಿತ್ ಷಾ ಅವರನ್ನು ಸಿಬಿಐ ಭಾನುವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಗುರುವಾರ ಸಿಬಿಐ ಸಮನ್ಸ್ ಕಳುಹಿಸಿದ ಬಳಿಕ ವಿಚಾರಣೆಗೆ ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದ ಷಾ ಭಾನುವಾರ ಪತ್ರಕರ್ತರೆದುರು ದಿಢೀರ್ ಹಾಜರಾಗಿ ಅಚ್ಚರಿ ಮೂಡಿಸಿದರು. ಬಳಿಕ ಬಿಜೆಪಿ ರಾಜ್ಯ ಪದಾಧಿಕಾರಿಗಳ ಜೊತೆಗೆ ನೇರವಾಗಿ ಸಿಬಿಐ ಕಚೇರಿಗೆ ತೆರಳಿದರು.

ತನಿಖಾಧಿಕಾರಿಗಳು ಷಾ ಅವರಿಗೆ ನೇರವಾಗಿ ಸಿಬಿಐ ನ್ಯಾಯಾಲಯಕ್ಕೆ ಕರೆದೊಯ್ಯುವುದಾಗಿ ಹೇಳಿದರು. ಷಾ ಅವರು ಅದಕ್ಕೆ ಒಪ್ಪಿದರು. ಆದರೆ, ನ್ಯಾಯಾಲಯಕ್ಕೆ ಭಾನುವಾರ ರಜಾ ಇದ್ದ ಕಾರಣ ನೇರವಾಗಿ ಮ್ಯಾಜಿಸ್ಟ್ರೇಟ್ ಎ.ವೈ.ದವೆ ಅವರ ನಿವಾಸದತ್ತ ಕರೆದೊಯ್ದರು ಎಂದು ಸಿಬಿಐ ಮೂಲಗಳು ತಿಳಿಸಿವೆ.

ಷಾ ಅವರ ವಿರುದ್ಧ ದರೋಡಕೋರರ ಕೂಟದವನೆಂದು ಹೇಳಲಾದ ಸೊಹ್ರಾಬುದ್ದೀನ್ ಶೇಕ್ ಮತ್ತು ಆತನ ಪತ್ನಿ ಕೌಸರ್ ಬಿ ಅವರನ್ನು 2005ರಲ್ಲಿ ಅಪಹರಿಸಿ ಕೊಲೆಗೈದ ಆರೋಪ ಹೊರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ