ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶದ 36 ಕೋಟಿ ಗೃಹಿಣಿಯರು ವೇಶ್ಯೆಯರಿಗೆ ಸಮವೇ? (housewives | prostitutes | Census | Central govt)
Bookmark and Share Feedback Print
 
ದೇಶದ 118 ಕೋಟಿ ಪ್ರಜೆಗಳಲ್ಲಿ 36 ಕೋಟಿ ಗೃಹಿಣಿಯರನ್ನು ಜನಗಣತಿ ವೇಳೆ ಕೇಂದ್ರ ಸರಕಾರವು ಆರ್ಥಿಕವಾಗಿ ಅನುತ್ಪಾದಕರೆಂದು ಹೆಸರಿಸಿ ವೇಶ್ಯೆಯರು, ಭಿಕ್ಷುಕರು ಮತ್ತು ಕೈದಿಗಳ ಸಾಲಿಗೆ ಸೇರಿಸಿರುವ ಘನಾಂದಾರಿ ಕೆಲಸವನ್ನು ಸರ್ವೋಚ್ಚ ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಗೃಹಿಣಿಯರನ್ನು ಇಂತಹ ವಿಭಾಗಗಳಲ್ಲಿ ಸೇರಿಸುವ ಮೂಲಕ ಸರಕಾರವು ಅಸಂವೇದನೆ ಮತ್ತು ನಿರ್ದಯತೆಯನ್ನು ಮೆರೆದಿದೆ. ಇದು ಮಹಿಳೆಯರ ವಿರುದ್ಧ ಲಿಂಗ ತಾರತಮ್ಯದ ಪೂರ್ವಗ್ರಹವನ್ನೂ ಸೂಚಿಸುತ್ತಿದೆ ಎಂದು ಸುಪ್ರೀಂ ಹೇಳಿದೆ.

2001ರ ಜನಗಣತಿಯಲ್ಲಿ (ಆಗ ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿತ್ತು) ಮನೆಯಲ್ಲಿ ಅಡುಗೆ ಮಾಡುವ, ಪಾತ್ರೆ-ಪಗಡೆಗಳನ್ನು ಶುಚಿಗೊಳಿಸುವ, ಮಕ್ಕಳನ್ನು ನೋಡಿಕೊಳ್ಳುವ, ನೀರು ತರುವ ಮತ್ತು ಕಟ್ಟಿಗೆ ಆಯುವ ಮಹಿಳೆಯರನ್ನು ಉದ್ಯೋಗರಹಿತರು ಎಂದು ಜನಗಣತಿಯಲ್ಲಿ ಪರಿಗಣಿಸಲಾಗಿದ್ದು, ಅವರೆಲ್ಲರನ್ನೂ ಭಿಕ್ಷುಕರು, ವೇಶ್ಯೆಯರು ಮತ್ತು ಕೈದಿಗಳ ಸಾಲಿಗೆ ಸೇರಿಸಲಾಗಿತ್ತು. ಇದಕ್ಕೆ ನೀಡಲಾಗಿರುವ ಕಾರಣ ಗೃಹಿಣಿಯರು ಆರ್ಥಿಕ ಉತ್ಪಾದನಾ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ ಎನ್ನುವುದು.

ಇದರಂತೆ 2001ರ ಜನಗಣತಿಯಲ್ಲಿ 36 ಕೋಟಿ ಮಹಿಳೆಯರನ್ನು ನೌಕರೇತರರು ಎಂದು ಪರಿಗಣಿಸಿ ವೇಶ್ಯೆಯರು, ಭಿಕ್ಷುಕರು ಮತ್ತು ಕೈದಿಗಳ ಸಾಲಿಗೆ ಸೇರಿಸಲಾಗಿತ್ತು, ಇದು ಸ್ತ್ರೀ ಕುಲಕ್ಕೆ ಮಾಡುತ್ತಿರುವ ಅಪಮಾನವಲ್ಲದೆ ಮತ್ತೇನಲ್ಲ ಎಂದು ಅಪೆಕ್ಸ್ ಕೋರ್ಟ್ ಅಭಿಪ್ರಾಯಪಟ್ಟಿದೆ.

ಸಮೀಕ್ಷಾ ಸಂಸ್ಥೆಯೊಂದರ ಅಂದಾಜುಗಳ ಪ್ರಕಾರ ಆರ್ಥಿಕವಾಗಿ ಅನುತ್ಪಾದಕರು ಎಂದು ಸರಕಾರ ಪರಿಗಣಿಸಿರುವ ಈ ಗೃಹಿಣಿಯರ ವಾರ್ಷಿಕ ಕೆಲಸ ಸುಮಾರು 29,000 ಕೋಟಿ ರೂಪಾಯಿಗಳಿಗೆ ಸರಿಸಮವಾಗುತ್ತದೆ. ಆದರೂ ಜನಗಣತಿಯಲ್ಲಿ ಈ ರೀತಿಯ ಪ್ರಮಾದವನ್ನೆಸಗಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದು, ಪ್ರಸಕ್ತ ನಡೆಯುತ್ತಿರುವ ಜನಗಣತಿಯಲ್ಲಾದರೂ ಗೃಹಿಣಿಯರಿಗೆ ನ್ಯಾಯ ಒದಗಿಸಿ ಎಂದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ