ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಕ್ಕಳ ಮೊಬೈಲ್ ಮೋಹ ಶಿರಚ್ಛೇದನ ಮಾಡುವವರೆಗೆ! (Haryana | 14-yr-old beheads 12-yr-old | cellphone | Manoj)
Bookmark and Share Feedback Print
 
ಮಾನವ ಜಗತ್ತಿಗೆ ಆಧುನಿಕತೆ ಆವರಿಸಿಕೊಂಡಂತೆ ಅಪರಾಧ ಚಟುವಟಿಕೆಗಳು ಕೂಡ ವಯೋಮಾನವನ್ನು ಮೀರಿ ನಿಲ್ಲುತ್ತಿವೆ. ದಕ್ಕಿಸಿಕೊಳ್ಳಬೇಕೆಂಬ ಮೋಹ ದೇವರಂತಹ ಮಕ್ಕಳಲ್ಲೂ ರಾಕ್ಷಸೀ ಕೃತ್ಯಗಳನ್ನು ಮಾಡಿಸುತ್ತಿವೆ. ಹೆತ್ತವರು ಒಂಚೂರು ಮೈಮರೆತರೂ ಮಕ್ಕಳು ಕೈ ತಪ್ಪಿ ಹೋಗುವ ಯುಗವಿದು.

ಅಂತಹುದ್ದೇ ಪ್ರಕರಣವಿದು. ಕೇವಲ ಮೊಬೈಲ್ ಫೋನ್‌ಗಾಗಿ 14ರ ಹರೆಯದ ಬಾಲಕನೊಬ್ಬ 12ರ ಸಹಪಾಠಿಯನ್ನು ಕೊಂದು ಹಾಕಿದ್ದಾನೆ. ಅದೂ ಶಿರಚ್ಛೇದನ ಮಾಡಿದ್ದಾನೆ. ಖಾಪ್ ಕ್ರೂರತೆಗೆ ಹೆಸರಾಗಿರುವ ಹರ್ಯಾಣಾದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿರುವ ಪ್ರಸಂಗವಿದು.

ನಕಾರಣವಾಗಿ ಪ್ರಾಣ ಕಳೆದುಕೊಂಡ ಬಾಲಕನನ್ನು ಮೂರನೇ ತರಗತಿಯ ಮನೋಜ್ ಯಾನೆ ಟಿಂಕು ಎಂದು ಗುರುತಿಸಲಾಗಿದೆ. ಬಾಲಕನ ವಿರುದ್ಧ ಟಿಂಕು ತಂದೆ ಕನ್ಹಾರಿಯಾ ದೂರು ದಾಖಲಿಸಿದ್ದು, ಪೊಲೀಸರು ಕಾಣೆಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮೊಬೈಲ್ ಮೋಹವಿದು...
ಇಲ್ಲಿನ ರೇವಾರಿ ನಗರದ ಆನಂದ ನಗರ ಕಾಲೊನಿಯಲ್ಲಿ ಈ ಮಕ್ಕಳಿಬ್ಬರ ಹೆತ್ತವರು ವಾಸವಾಗಿದ್ದಾರೆ. ಶುಕ್ರವಾರವಷ್ಟೇ ಟಿಂಕು ತನ್ನ ಮೊಬೈಲ್‌ನ ಮೆಮೊರಿ ಕಾರ್ಡ್‌ಗೆ ಹಾಡುಗಳನ್ನು ಹಾಕಿಸಬೇಕು ಎಂದು ಮನೆಯ ಸಮೀಪದ ಮೊಬೈಲ್ ಅಂಗಡಿಗೆ ಆರೋಪಿ ಬಾಲಕನೊಂದಿಗೆ ತೆರಳಿದ್ದ. ಮೊಬೈಲನ್ನು ಸಂಜೆ ವಾಪಸ್ ಕೊಡುವುದಾಗಿ ಅಂಗಡಿಯಾತ ಹೇಳಿದ್ದ.

ಸಂಜೆ ಆರೋಪಿ ಬಾಲಕ ಅಂಗಡಿಗೆ ಹೋಗಿದ್ದಾನೆ. ಆದರೆ ಅಂಗಡಿ ಬಾಗಿಲು ಹಾಕಿತ್ತು. ನಂತರ ತನ್ನ ಎಂಟರ ಹರೆಯ ಸಹೋದರನನ್ನು ಟಿಂಕು ಮನೆಗೆ ಕಳುಹಿಸಿ, 'ನಾನೇ ಮೊಬೈಲ್‌ನೊಂದಿಗೆ ಮನೆಗೆ ಬರುತ್ತೇನೆ ಎಂದು ಹೇಳು' ಎಂದು ಸಂದೇಶ ರವಾನಿಸಿದ್ದ.

ಬಳಿಕ ಟಿಂಕು ಜತೆಗೆ ಆರೋಪಿ ಕೂಡ ಅಂಗಡಿಗೆ ಹೋಗಿ ಮೊಬೈಲ್ ಪಡೆದುಕೊಂಡಿದ್ದಾರೆ. ಮೊಬೈಲನ್ನು ಆರೋಪಿ ಬಾಲಕನ ವಶಕ್ಕೆ ಟಿಂಕು ನೀಡಿದ್ದಾನೆ. ಬಳಿಕ ಟಿಂಕುವನ್ನು ಆರೋಪಿ ಎಂಟನೇ ತರಗತಿ ಬಾಲಕ ಹರಿತವಾದ ಆಯುಧದಿಂದ ಕೊಂದು ಹಾಕಿದ್ದಾನೆ.

ಟಿಂಕುವಿನ ಕುತ್ತಿಗೆಗೆ ಆಳವಾದ ಗಾಯವನ್ನು ಮಾಡಲಾಗಿತ್ತು. ಬಲಿಪಶು ತೀವ್ರವಾಗಿ ಗಾಯಗೊಂಡಿದ್ದ ಅಥವಾ ಸತ್ತು ಹೋಗಿದ್ದ -- ಈ ಹೊತ್ತಿನಲ್ಲಿ ಅಲ್ಲಿಗೆ ಬೀದಿ ನಾಯಿಗಳು ಬಂದಿವೆ. ದೇಹದಿಂದ ತಲೆಯನ್ನು ಕಚ್ಚಿ ಪ್ರತ್ಯೇಕಗೊಳಿಸಿವೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಮಕ್ಕಳಿಗೆ ಮೊಬೈಲ್ ತೆಗೆಸಿಕೊಡುವ ಅಥವಾ ಅದರ ಕುರಿತು ಆಸಕ್ತಿ ವಹಿಸುವ ಹೆತ್ತವರು ಜಾಗರೂಕತೆ ವಹಿಸಬೇಕಾದ ಅಗತ್ಯ ಇಂತಹ ಪ್ರಕರಣಗಳಿಂದ ಅಗತ್ಯವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ