ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕಲಿ ಜಾತಿ; ಕಾಂಗ್ರೆಸ್ ಸಂಸದನ ಸದಸ್ಯತ್ವ ರದ್ದು (Kerala | Lok Sabha | Congress | Kodukunnil Suresh)
Bookmark and Share Feedback Print
 
ಮಾವೇಲಿಕ್ಕರ ಮೀಸಲಾತಿ ಸಂಸದೀಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವ ಎಂದು ಹೇಳಿಕೊಂಡು ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೋಡುಕುನ್ನಿಲ್ ಸುರೇಶ್ ಎಂಬವರ ಸಂಸತ್ ಸದಸ್ಯತ್ವವನ್ನು ಕೇರಳ ಹೈಕೋರ್ಟ್ ಅನೂರ್ಜಿತಗೊಳಿಸಿದೆ.

ಈ ಕ್ಷೇತ್ರದಲ್ಲಿ ಪರಾಜಿತಗೊಂಡ ಸಿಪಿಐ ಅಭ್ಯರ್ಥಿ ಆರ್.ಎಸ್. ಅನಿಲ್ ಅವರು ಸುರೇಶ್ ಮತ್ತು ಇತರ ಇಬ್ಬರ ಅಭ್ಯರ್ಥಿತನವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಶಶಿಧರನ್ ನಂಬಿಯಾರ್ 160 ಪುಟಗಳ ತನ್ನ ತೀರ್ಪಿನಲ್ಲಿ ಸುರೇಶ್ ಸದಸ್ಯತ್ವನ್ನು ರದ್ದುಗೊಳಿಸಿದ್ದಾರೆ.

ತನ್ನ ಜಾತಿಯ ಕುರಿತು ಸುರೇಶ್ ಭಿನ್ನ ಹೇಳಿಕೆಗಳನ್ನು ನೀಡಿರುವುದನ್ನು ನ್ಯಾಯಾಲಯವು ಪರಿಗಣಿಸಿದೆ. ಸಂಸದ ಸುರೇಶ್ ಅವರ ಶಾಲಾ ದಾಖಲಾತಿಗಳ ಪ್ರಕಾರ ಅವರು ಪರಿಶಿಷ್ಟ ಜಾತಿಯಿಂದ ಮತಾಂತರಗೊಂಡ ಕ್ರಿಶ್ಚಿಯನ್. ಹಾಗಾಗಿ ಅವರಿಗೆ ಪರಿಶಿಷ್ಟ ಜಾತಿಯ ಯಾವುದೇ ಪ್ರಯೋಜನಗಳು ಲಭ್ಯವಾಗುವುದಿಲ್ಲ.

ಸುರೇಶ್ ಪರಿಶಿಷ್ಟ ಜಾತಿಗೆ ಸೇರಿದವರು ಆಗಿರದೇ ಇರುವುದರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಮೀಸಲಾಗಿದ್ದ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಅಧಿಕಾರಿ ತಿರಸ್ಕರಿಸಬೇಕಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂಸತ್ತಿನ ಕೆಳಮನೆಗೆ ಐದನೇ ಬಾರಿಗೆ ಸುರೇಶ್ ಆಯ್ಕೆಗೊಂಡಿದ್ದರು. 1989ರಲ್ಲಿ ಮೊದಲ ಬಾರಿ ವಿಜಯದ ರುಚಿ ಕಂಡಿದ್ದ ಅವರು ನಂತರ 1991, 1996 ಮತ್ತು 1999ರಲ್ಲಿ ಅಡೂರು ಕ್ಷೇತ್ರದಿಂದ ಗೆದ್ದಿದ್ದರು. 1998 ಮತ್ತು 2004ರ ಚುನಾವಣೆಗಳಲ್ಲಿ ಪರಾಜಯಗೊಂಡಿದ್ದರು.

ಸಂಸದ ಸುರೇಶ್ ಸದಸ್ಯತ್ವವನ್ನು ಕೇರಳ ಹೈಕೋರ್ಟ್ ಅನೂರ್ಜಿತಗೊಳಿಸಿರುವ ಹೊರತಾಗಿಯೂ ಅವರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅಲ್ಲೂ ಸೋಲುಂಟಾದರೆ ಅವರಿಗೆ ಸುಪ್ರೀಂ ಕೋರ್ಟ್ ಪ್ರವೇಶಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ