ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಮನ್ವೆಲ್ತ್ ಕ್ರೀಡಾಕೂಟ ಹಾಳಾದ್ರೇ ಒಳ್ಳೇದು: ಮಣಿಶಂಕರ ಅಯ್ಯರ್ (CWG | Common Wealth Games 2010 | Delhi, Mani Shankar Aiyar | India)
Bookmark and Share Feedback Print
 
PTI
ದೆಹಲಿ ಮತ್ತು ಕೇಂದ್ರದಲ್ಲಿರುವ ಕಾಂಗ್ರೆಸ್ ಸರಕಾರವು ಕಾಮನ್ವೆಲ್ತ್ ಕ್ರೀಡಾಕೂಟದ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದರೆ, ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಮಣಿ ಶಂಕರ್ ಅಯ್ಯರ್ ಮಾತ್ರ, ಕಾಮನ್ವೆಲ್ತ್ ಕೂಟ ವಿಫಲವಾದ್ರೆ ಒಳ್ಳೇದು ಅಂತಿದ್ದಾರೆ.

ದೆಹಲಿಯಲ್ಲಿ ಮಳೆಯಾಗುತ್ತಿರುವ ಬಗ್ಗೆ ಸಂತೋಷವಾಗುತ್ತಿದೆ. ಮೊದಲನೆಯದಾಗಿ ದೇಶದ ಕೃಷಿ ಚಟುವಟಿಕೆಗೆ ಇದು ಪೂರಕ. ಎರಡನೆಯದೆಂದರೆ, ಕಾಮನ್ವೆಲ್ತ್ ಕ್ರೀಡಾಕೂಟವನ್ನು ಅದು ಹಾಳುಗೆಡಹುತ್ತದೆಂಬ ಸಂತಸ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿರುವ ಅಯ್ಯರ್ ಹೇಳಿದ್ದಾರೆ.

ಸಂಸತ್ ಹೊರಗೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಕಾಮನ್ವೆಲ್ತ್ ಗೇಮ್ಸ್ ಯಶಸ್ವಿಯಾದರೆ ಅವರು ಏಷ್ಯನ್ ಗೇಮ್ಸ್ ಮತ್ತು ಇನ್ನೂ ಕೆಲವು ಕ್ರೀಡಾಕೂಟಗಳನ್ನು ನಡೆಸುತ್ತಾರೆ.... ಗೇಮ್ಸ್ ಹಾಳಾದರೇ ನನಗೆ ತುಂಬ ಸಂತೋಷ ಎಂದಿದ್ದಾರೆ ಅಯ್ಯರ್.

ಅಕ್ಟೋಬರ್ 3ರಿಂದ 14ರವರೆಗೆ ನಡೆಯಲಿರುವ ಗೇಮ್ಸ್‌ಗೆ ಖರ್ಚು ಮಾಡುವ ಹಣವನ್ನು ಭಾರತದ ಮಕ್ಕಳಿಗೆ ಭದ್ರ ಕ್ರೀಡಾ ಭವಿಷ್ಯ ರೂಪಿಸಲು ಮತ್ತು ಅವರಿಗೆ ಕ್ರೀಡಾ ತರಬೇತಿ ನೀಡುವುದಕ್ಕೆ ಬಳಸಬಹುದು ಎಂದಿರುವ ಅವರು, ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು 35 ಸಾವಿರ ಕೋಟಿ ರೂಪಾಯಿ ವ್ಯಯಿಸಿದ್ದಿದ್ದರೆ, ನಾವು ಪ್ರತಿಯೊಂದು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲೂ ಪದಕಗಳನ್ನು ಗಳಿಸಬಹುದಾಗಿತ್ತು ಎಂದವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ