ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಮುಕ ಪಾದ್ರಿಯಿಂದ ಇಬ್ಬಿಬ್ಬರಿಗೆ ಮೋಸ, ಅತ್ಯಾಚಾರ (Pastor held for rape | Father Selvaraj | Faith Assembly | Chennai)
Bookmark and Share Feedback Print
 
ಧಾರ್ಮಿಕ ಬೋಧನೆಯ ಸೋಗಿನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಅವರಿಂದ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡುತ್ತಿದ್ದ ಕ್ರೈಸ್ತ ಪಾದ್ರಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

53ರ ಹರೆಯದ ಫಾದರ್ ಸೆಲ್ವರಾಜ್ ಎಂಬಾತನೇ ಇದೀಗ ಕಂಬಿ ಎಣಿಸುತ್ತಿರುವವನು. ಚೆನ್ನೈಯ ಅಯನಾವರಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಚರ್ಚ್ ಪಾದ್ರಿಯ ವಿರುದ್ಧ ಇಬ್ಬರು ಮಹಿಳೆಯರು ಅತ್ಯಾಚಾರ ದೂರು ನೀಡಿದ ನಂತರ ಸೆಲ್ವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಲ್ವರಾಜ್ ಕಳೆದ 15 ವರ್ಷಗಳಿಂದ ಫಳನಿ ಅಂದಾವರ್ ಕೋಯಿಲ್ ಸ್ಟ್ರೀಟ್‌ನಲ್ಲಿ ನಡೆಸುತ್ತಿದ್ದ 'ಫೈತ್ ಅಸೆಂಬ್ಲಿ ಚರ್ಚ್'ನಲ್ಲಿ ಉದ್ಯೋಗಿಯಾಗಿದ್ದ ಮರ್ಸಿ ಮರಿಯಾ (36) ಸಂಗ ಬೆಳೆಸಿದ್ದ. ಆರು ವರ್ಷಗಳ ಹಿಂದೆ ಅತ್ಯಾಚಾರ ನಡೆಸಿದ ನಂತರ ಆಕೆಯ ಜತೆಗೆ ಕೆಲ ಕಾಲ ವಾಸಿಸಿದ್ದ.

ಬಳಿಕ ಅಯನಾವರಂನ ಸುಗಂಧಿ (41) ಎಂಬ ಮಹಿಳೆಯೊಬ್ಬರು ಕೌಟುಂಬಿಕ ಜೀವನವನ್ನು ಸರಿಪಡಿಸುವ ನಿಟ್ಟಿನಲ್ಲಿ ತನ್ನ ಕುಡುಕ ಗಂಡನ ಕುರಿತು ಸಮಾಲೋಚನೆ ನಡೆಸಲು ಪಾದ್ರಿ ಸೆಲ್ವರಾಜ್ ಬಳಿಗೆ ಬಂದಿದ್ದಳು. ಈ ಸಂದರ್ಭದಲ್ಲಿ ಸೆಲ್ವರಾಜ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಮರಿಯಾ ಮತ್ತು ಸುಗಂಧಿ ಇಬ್ಬರೂ ಈಗ ಕಾಮುಕ ಪಾದ್ರಿ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಮೋಸ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ದಾವೆಗಳನ್ನೂ ಆತನ ಮೇಲೆ ಹೂಡಲಾಗಿದೆ.

ಪೊಲೀಸರ ಪ್ರಕಾರ ಮರಿಯಾಳಿಂದ 5.5 ಪವನ್ (44 ಗ್ರಾಂ) ಚಿನ್ನಾಭರಣ ಹಾಗೂ 55,000 ರೂಪಾಯಿ ನಗದು, ಆಕೆಯ ಗಂಡ ರಾಮಯ್ಯ ಬಳಿಯಿಂದ 2.60 ಲಕ್ಷ ರೂಪಾಯಿ ನಗದು ಹಾಗೂ ಸುಗಂಧಿ ಬಳಿಯಿಂದ ಆರು ಪವನ್ (48 ಗ್ರಾಂ) ಚಿನ್ನವನ್ನು ಪಡೆದುಕೊಂಡು ಮೋಸ ಮಾಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ